ಈಗ ಮತ್ತೆ ಏಳುವ ಪ್ರಶ್ನೆ ಏನೆಂದರೆ, ‘ಕೋಪ ಬರುವುದು ತಪ್ಪೇ?’. ಕೋಪ ಬರುವುದು ತಪ್ಪಲ್ಲ. ಕೋಪ ಅನ್ನುವುದು ಸ್ವಾಭಾವಿಕವಾಗಿ ಇರುವಂತಹ ಒಂದು ಭಾವ. ನಾವು ನವರಸಗಳ ಆಧಾರವನ್ನಿಟ್ಟು ನೋಡಿದರೂ, ಅಲ್ಲಿ ಕೋಪವನ್ನು ‘ರೌದ್ರ’ ಎಂದು ಕರೆಯಲಾಗಿದೆ. ಈ ನವರಸಗಳು ನಮ್ಮ ಜೀವನದಲ್ಲಿರುವ ಮೂಲ ರಸಗಳು. ಮಾತ್ರವಲ್ಲ, ಕೋಪವನ್ನು ನೀವು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಕಾಣಬಹುದು.

ಆದರೆ, ಸಮಸ್ಯೆ ಇರುವುದು ಎಲ್ಲಿ ಅಂದರೆ, ಕೋಪವನ್ನು ನಾವು ವ್ಯಕ್ತಪಡಿಸುವ ವಿಧಾನದಲ್ಲಿ. ನಾವು ನಮ್ಮ ಕೋಪವನ್ನು ಸರಿಯಾದ ವಿಧಾನದಲ್ಲಿ ವ್ಯಕ್ತಪಡಿಸಿದರೆ, ಅದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇತರರು ತಮ್ಮ ತಪ್ಪುಗಳನ್ನೂ ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ಸೃಷ್ಟಿಮಾಡಲು ಸಾಧ್ಯವಿದೆ.

ಹೇಗೆ ನಾವು ಕೋಪವನ್ನು ಆರೋಗ್ಯಕರವಾಗಿ ವ್ಯಕ್ತಪಡಿಸಬಹುದು? ಒಂದು ಬಾರಿ ನಾನು ಒಂದು ಶಾಲೆಯ ಅಧ್ಯಾಪಕ - ಅಧ್ಯಾಪಿಕೆಯರಿಗೆ ಎರಡು ದಿನಗಳ ಕಾರ್ಯಾಗಾರವನ್ನು ಮಾಡುತ್ತಾ ಇದ್ದೆ. ಎರಡನೇ ದಿನ, ಊಟಕ್ಕೆ ಬಿಡುವಾಗ ಎಲ್ಲರಿಗೂ ಊಟದ ಸಂದರ್ಭದಲ್ಲಿ ಮೌನವಾಗಿದ್ದು ಆ ದಿನ ನಡೆದ ಚಟುವಟಿಕೆಗಳ ಕುರಿತು ಅವಲೋಕನ ಮಾಡಲು ಹೇಳಿದ್ದೆ. ಆದರೆ, ನನ್ನ ಸೂಚನೆಯನ್ನು ಎಲ್ಲಾ ಶಿಕ್ಷಕರೂ ಕಡೆಗಣಿಸಿದರು. ಎಲ್ಲರೂ ಹೊಟ್ಟೆ ತುಂಬ ಊಟ ಮಾಡುತ್ತಾ, ಬಾಯ್ತುಂಬ ಮಾತಾಡಿದರು. ಊಟ ಮುಗಿಸಿ ಆಮೇಲೆ ಮತ್ತೆ ಎಲ್ಲರೂ ಕಾರ್ಯಾಗಾರಕ್ಕೆ ಸೇರಿದಾಗ ಅವರಲ್ಲಿ ಎಷ್ಟು ಜನ ಮೌನವಾಗಿ ಊಟಮಾಡಿದರು ಅಂತ ಕೇಳಿದೆ. ಎಲ್ಲರೂ ನಿರುತ್ತರರಾದರು. ನನ್ನ ಸೂಚನೆಯನ್ನು ಕಡೆಗಣಿಸಿದ್ದು ನನಗೆ ತೀವ್ರವಾದಂತಹ ಕೋಪವನ್ನು ತರಿಸಿತ್ತು. ಆ ಸೂಚನೆಯ ಹಿಂದೆ ಒಂದು ಆಳವಾದ ಉದ್ದೇಶವಿತ್ತು. ಅವರೆಲ್ಲರನ್ನೂ ಕುರಿತು, ‘ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡೋಣ’ ಅಂತ ಹೇಳಿ ಮೌನ ಪ್ರಾರ್ಥನೆಯನ್ನೂ ಮಾಡಿಸಿದೆ. ಎಲ್ಲರೂ ಕಸಿವಿಸಿಯಾದರು. ನಂತರ ಅವರೆಲ್ಲರಿಗೂ ನನ್ನ ಸೂಚನೆಯ ಹಿಂದೆ ಇದ್ದ ಉದ್ದೇಶ ಏನು, ಮತ್ತು ಅವರ ಅನನುಸರಿಸುವಿಕೆ ಹೇಗೆ ನನಗೆ ಕೋಪವನ್ನು ತರಿಸಿತ್ತು ಎಂಬುದನ್ನು ವಿವರಿಸಿದೆ. ಆವಾಗ, ಎಲ್ಲರಿಗೂ ಅದರ ಪ್ರಾಮುಖ್ಯ ಅರಿಯಿತು. ಮಾತ್ರವಲ್ಲ, ಮುಂದಿನ ೧೦ ನಿಮಿಷಗಳಲ್ಲಿ ಆ ಕೆಲಸವನ್ನು ಮುಗಿಸಿಕೊಂಡು ಬಂದರು, ಮತ್ತು ಆಮೇಲೆ, ಅವರ ಭಾಗವಹಿಸುವಿಕೆಯ ಮಟ್ಟ ಬೇರೆಯೇ ಆಯಿತು. ಹೀಗೆ, ಕೋಪವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿದಾಗ, ಅಲ್ಲಿ ಪ್ರತಿರೋಧ ಇರುವುದಿಲ್ಲ, ಬದಲಾಗಿ, ಸ್ವೀಕೃತಿ ಇರುತ್ತದೆ. ಮಾತ್ರವಲ್ಲ, ನಿಮ್ಮ ಮಾತಿಗೆ ತೂಕ ಹೆಚ್ಚುತ್ತದೆ.

ಈಗ ಮೂಲ ಪ್ರಶ್ನೆಗೆ ಬರುವುದಾದರೆ, ನಿಮ್ಮ ಜೀವನದಲ್ಲಿ ಆಗಿರುವಂತಹ ಸೋಲು, ಹತಾಶೆ, ಅವಮಾನ ಮುಂತಾದುವುಗಳಿಗೆಲ್ಲ, ಈಗ ನಿಮ್ಮ ಜೊತೆಗಿರುವ ಅಥವಾ ನಿಮ್ಮ ಸುತ್ತಲೂ ಇರುವಂತಹ ವ್ಯಕ್ತಿಗಳು ಕಾರಣರಲ್ಲ. ಆದರೆ, ಆಗಿನಿಂದ ಒಳಗೇ ಅದುಮಿಟ್ಟುಕೊಂಡಿರುವಂತಹ ಕೆಂಡ ಎಲ್ಲೋ ಬೆಂಕಿಯ ರೂಪ ಪಡೆಯುತ್ತಿದೆ. ಅದು ನಿಮ್ಮನ್ನಷ್ಟೇ ಅಲ್ಲದೆ, ನಿಮ್ಮ ಸಂಗಡಿಗರನ್ನೂ ಅಥವಾ ಅವರ ಜೊತೆಗಿನ ಸಂಬಂಧಗಳನ್ನು ಸುಡುತ್ತಿದೆ. ನಮ್ಮ ಜೀವನದಲ್ಲಿ ಆಗಿರುವಂತಹ ಭಾವನಾತ್ಮಕ ಆಘಾತಗಳನ್ನು (trauma) ನಾವು ಅದುಮಿಟ್ಟುಕೊಂಡಾಗ ಅದು ಈ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಕೋಪವಿರಬಹುದು, ಉದ್ವೇಗ ಇರಬಹುದು ಹೀಗೆ, ಯಾವುದೇ ರೀತಿಯ ನಿಷ್ಕ್ರಿಯ ವರ್ತನೆಗಳಿಗೆ ಕಾರಣವಾಗಬಹುದು. ಇದಕ್ಕೆ ನಿಮ್ಮೊಳಗಿರುವಂತಹ ಟ್ರಾಮಾವನ್ನು ವಾಸಿಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ಬೌದ್ಧಿಕವಾಗಿ ನಿಮಗೆ ಕೋಪ ಬರುವುದು ತಪ್ಪು ಎಂದು ಎಷ್ಟೇ ಗೊತ್ತಿದ್ದರೂ, ಆಯಾ ಸಂದರ್ಭಗಳಲ್ಲಿ ಅವು ಬಂದು ಹೋಗುತ್ತವೆ. ಮತ್ತು ಆಮೇಲೆ ನಾವು ಅದರ ಬಗ್ಗೆ ಪರಿತಪಿಸುತ್ತೇವೆ. ಹೀಗೆ ಮತ್ತೆ ಮತ್ತೆ ಆಗುವ ಬದಲು, ನಾವು ನಮ್ಮ ನೋವಿನ ಮೂಲಗಳಿಗೆ ಚಿಕಿತ್ಸೆ ನೀಡುವ ಮೂಲಕ, ನಮ್ಮಲ್ಲಿರುವಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.