ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಕುಟುಂಬದ ಕಾಳಜಿಗೆ ಬಾದಾಮಿ

Published 22 ಮಾರ್ಚ್ 2024, 23:30 IST
Last Updated 22 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಧಾವಂತದ ಬದುಕಿನಲ್ಲಿ ಚರ್ಮ ಮತ್ತು ಕೂದಲಿನ ಬಗ್ಗೆ ಕಾಳಜಿ ವಹಿಸವುದು ಅಷ್ಟು ಸುಲಭವಲ್ಲ. ಆರೋಗ್ಯಯುತ ಬದುಕಿನಲ್ಲಿ ಬಾದಾಮಿಗಳ ಸೇವನೆಗೆ ವಿಶಿಷ್ಟ ಸ್ಥಾನವಿದೆ. ಈ ಬಗ್ಗೆ ನಟಿ ಪ್ರಣೀತಾ ಸುಭಾಷ್‌ ಹೇಳಿಕೊಂಡಿದ್ದಾರೆ. 

ತಾಯಿ, ಪತ್ನಿ, ನಟಿ ಹೀಗೆ ಎಲ್ಲವೂ ಆಗಿರುವ ಪ್ರಣೀತಾ ಒತ್ತಡದ ನಡುವೆಯೂ ಬಾದಾಮಿ ಸೇವಿಸುವುದನ್ನು ನಿಯಮಿತ ಅಭ್ಯಾಸವಾಗಿಸಿಕೊಂಡಿದ್ದಾರೆ. ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲಿಗೆ  ಬಾದಾಮಿ ಸೇವನೆ ಅವಶ್ಯ. ಕುರುಕಲು ತಿಂಡಿಯ ಜಾಗವನ್ನು ಈಗೀಗ ಬಾದಾಮಿ ಆಕ್ರಮಿಸಿಕೊಂಡಿದೆ.

‘ಬಾದಾಮಿ ರುಚಿಕರ ಮಾತ್ರವಲ್ಲ. ಅವು ಚರ್ಮ ಮತ್ತು ಕೂದಲನ್ನು ಹೊಳಪಾಗಿಡುತ್ತದೆ. ಅದಕ್ಕೆ ನಿತ್ಯ ಬೆಳಿಗ್ಗೆ ಬಾದಾಮಿಯನ್ನು ನೆನೆಸಿ, ಸಿಪ್ಪೆ, ಸುಲಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ. ನನ್ನ ಮಗಳು ಅರ್ನಾಳಿಗೂ ಬಾದಾಮಿಯ ರುಚಿ ತೋರಿಸಿದ್ದೇನೆ. ಪುಡಿ ಮಾಡಿದ ಬಾದಾಮಿಗಳನ್ನು ಆಹಾರ ಮಿಶ್ರಣದೊಂದಿಗೆ ನೀಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ನಿಮ್ಮ ದೈನಂದಿನ ಜೀವನದಲ್ಲಿ ಬಾದಾಮಿಯನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎನ್ನುವುದರ ಕುರಿತು ಅವರು ಇಲ್ಲಿ ತಿಳಿಸಿದ್ದಾರೆ.

ಮಧುಮೇಹಿಗಳಾಗಿದ್ದರೆ ಆಗಾಗ ಹಸಿವು ಕಾಡುತ್ತಿರುತ್ತದೆ. ನಿಮ್ಮ ಕೈಚೀಲದಲ್ಲಿ ಪುಟ್ಟದೊಂದು ಸಂಚಿ ಮಾಡಿಟ್ಟುಕೊಂಡು ಅದರಲ್ಲಿ ಒಂದು ಹಿಡಿ ಬಾದಾಮಿ ಇಟ್ಟುಕೊಂಡಿರಿ. ಇನ್ನಿತರ ಕುರುಕಲು ತಿಂಡಿಗಳಿಗಿಂತಲೂ ಬಾದಾಮಿ ಸವಿಯುವುದು ಹೆಚ್ಚು ಆರೋಗ್ಯಕರ

* ಇದು ಹೃದಯದ ಆರೋಗ್ಯಕ್ಕೆ ಸೂಕ್ತವಾಗಿದೆ

* ಹೇರಳವಾಗಿ ವಿಟಮಿನ್‌ ಇ ದೊರೆಯುತ್ತದೆ

* ರಕ್ತದ ಏರೊತ್ತಡವನ್ನು ನಿಯಂತ್ರಿಸುತ್ತದೆ

* ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ

* ವಯೋಸಹಜ ವಾಗಿ ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿಯಂತ್ರಿಸುತ್ತದೆ

* ಮಕ್ಕಳು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ

* ಮಕ್ಕಳಲ್ಲಿ ಏಕಾಗ್ರತೆ ಶಕ್ತಿ ಹೆಚ್ಚುತ್ತದೆ

* ಋತುಬಂಧದ ಸಂದರ್ಭದಲ್ಲಿ ಹೆಚ್ಚು ಬಾದಾಮಿಯನ್ನು ಸೇವಿಸುವುದರಿಂದ ಮೂಡ್‌ಸ್ವಿಂಗ್‌ ಅನ್ನು ತಡೆಯಬಹುದಾಗಿದೆ.

ಎಷ್ಟು ತಿನ್ನಬೇಕು?

ಪ್ರತಿದಿನ ಬಾದಾಮಿಯನ್ನು ಸೇವಿಸಬೇಕೆಂದರೆ ಅದೆಷ್ಟು ತಿನ್ನಬೇಕು ಎಂಬ ಪ್ರಶ್ನೆಗೆ ಒಂದು ಸರಳ ಸೂತ್ರವಿದೆ. 1–2–3 ಅಂದ್ರೆ ಒಂದು ಔನ್ಸ್‌ ಅಥವಾ 23 ಬಾದಾಮಿಗಳನ್ನು ಪ್ರತಿದಿವಸವೂ ಸೇವಿಸಿದರೆ ನಮಗೆ ಅಗತ್ಯ ಇರುವ ಎಲ್ಲ ಪೋಷಕಾಂಶ ತತ್ವಗಳೂ ದೊರೆಯುತ್ತವೆ. ಆದರೆ ಏಕಾಏಕಿ ಪ್ರತಿದಿನ 23 ಬಾದಾಮಿ ಸೇವಿಸಲು ಆರಂಭಿಸಿದರೆ ಕೆಲವರಿಗೆ ಜೀರ್ಣವಾಗುವಲ್ಲಿ ತೊಂದರೆ ಉಂಟಾಗಬಹುದು. ಅಂಥವರು ಹತ್ತರಿಂದ ಆರಂಭಿಸಿ, 23ರವರೆಗೆ ನಿಧಾನವಾಗಿ ಪ್ರಮಾಣ ಹೆಚ್ಚಿಸುತ್ತ ಹೋಗಬೇಕು. ಜೀರ್ಣ ಶಕ್ತಿ ಕಡಿಮೆ ಇದ್ದವರು ತಮ್ಮ ಶಕ್ತ್ಯಾನುಸಾರ ಸೇವಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT