ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ಮಕ್ಕಳಲ್ಲಿಯೂ ಕ್ಯಾಟರ್‍ಯಾಕ್ಟ್‌ ಎಚ್ಚರ ತಪ್ಪದಿರಿ

Published 14 ಜೂನ್ 2024, 22:47 IST
Last Updated 14 ಜೂನ್ 2024, 22:47 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಅಂಧತ್ವ ಉಂಟಾಗುವುದಕ್ಕೆ ಕ್ಯಾಟರ್‍ಯಾಕ್ಟ್‌ ಪ್ರಮುಖ ಕಾರಣ. ಸರಿಯಾದ ಸಮಯಕ್ಕೆ ಅದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಮಕ್ಕಳ ಬದುಕು ಅಂಧಕಾರದಲ್ಲಿ ಮುಳುಗಲಿದೆ.

ದೃಷ್ಟಿ ದೋಷವನ್ನು ಎದುರಿಸುವ ಮಕ್ಕಳು ಜೀವನಪೂರ್ತಿ ಸವಾಲುಗಳನ್ನು ಎದುರಿಸುತ್ತಾರೆ. ಅಂಧತ್ವದ
ಶೇ 14ರಷ್ಟು ಪ್ರಕರಣಗಳಲ್ಲಿ ಕ್ಯಾಟರ್‍ಯಾಕ್ಟ್‌ ಕಂಡುಬಂದಿದೆ.

ಕಾರಣಗಳೇನು?

ಗರ್ಭಾವಸ್ಥೆಯಲ್ಲಿ ಉಂಟಾಗುವ ಸೋಂಕು, ಜನನ ಸಂಬಂಧಿ ದೋಷಗಳು, ಬೆಳವಣಿಗೆಯಲ್ಲಿ ದೋಷ, ಅಂಗಾಂಶಗಳ ನ್ಯೂನತೆ ಎಲ್ಲವೂ ಕಾರಣವಾಗಬಹುದು. ಮಕ್ಕಳು ಶಾಲೆ ಹೋಗುವ ವಯಸ್ಸಿನಲ್ಲಿ ಅಥವಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಕ್ಯಾಟರ್‍ಯಾಕ್ಟ್‌ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಲಕ್ಷಣಗಳೇನು?

ಮಕ್ಕಳಿಗೆ ಸರಿಯಾದ ದೃಷ್ಟಿ ಇಲ್ಲದೇ ಇರುವುದು. ವೈಟ್‌ ರಿಫ್ಲಕ್ಸ್‌ ಪತ್ತೆಯಾಗಬಹುದು. ವೈಟ್‌ ರಿಫ್ಲೆಕ್ಸ್‌ ಆಗುವುದು ನಂತರ ಅದರ ಗಾತ್ರ ಹೆಚ್ಚಳವಾಗುವುದು. ವಸ್ತುವನ್ನು ನಿಶ್ಚಿತವಾಗಿ ಗುರುತು ಹಿಡಿಯಲು ಸಾಧ್ಯವಾಗದೇ ಹೋಗಬಹುದು. ಅಸಹಜ ಕಣ್ಣಿನ ಚಲನೆಗಳು ಇರಬಹುದು. ದೂರದ ವಸ್ತುಗಳನ್ನು ನೋಡಲು ಕಷ್ಟವೆನಿಸಬಹುದು. ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ಓದಲು, ಟಿ.ವಿ. ನೋಡುವಾಗ, ಓದುವಾಗ ಮಗು ಕಷ್ಟಪಡುತ್ತಿದ್ದರೆ ಕೂಡಲೇ ನೇತ್ರತಜ್ಞರನ್ನು ಕಾಣಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT