ಬುಧವಾರ, ಡಿಸೆಂಬರ್ 2, 2020
26 °C

ಕೋವಿಡ್‌ ಆ್ಯಂಟಿಬಾಡಿ ಔಷಧ ಪ್ರಯೋಗ ಆರಂಭಿಸಿದ ಆಸ್ಟ್ರಾಜೆನೆಕಾ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

AstraZeneca

ಲಂಡನ್: ದೀರ್ಘ ಅವಧಿಗೆ ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ನೀಡಬಲ್ಲ ಪ್ರತಿಕಾಯದ (ಮೊನೊಕ್ಲೋನಲ್ ಆ್ಯಂಟಿಬಾಡಿ) ಅಂಶವಿರುವ ಔಷಧದ ಕೊನೆಯ ಹಂತದ ಪ್ರಯೋಗವನ್ನು ಆಸ್ಟ್ರಾಜೆನೆಕಾ ಶನಿವಾರ ಆರಂಭಿಸಿದೆ. ಈ ಔಷಧವು ಜನರಿಗೆ 12 ತಿಂಗಳ ವರೆಗೆ ಸೋಂಕಿನಿಂದ ರಕ್ಷಣೆ ನೀಡಬಲ್ಲದು ಎನ್ನಲಾಗಿದೆ.

‘ಎಝಡ್‌ಡಿ7442 (AZD7442)’ ಹೆಸರಿನ ಔಷಧದ ಸುರಕ್ಷತೆ ಹಾಗೂ ಪರಿಣಾಮಕಾರಿಯೇ ಎಂಬುದನ್ನು ತಿಳಿಯಲು ಕೊನೆಯ ಹಂತದಲ್ಲಿ ಯುರೋಪ್ ಮತ್ತು ಅಮೆರಿಕದ 5,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ: 

ಈ ಔಷಧವು ಲಸಿಕೆಗಿಂತ ಭಿನ್ನವಾಗಿದೆ. ಇದರಲ್ಲಿ ದೇಹದಲ್ಲಿ ರೋಗಪ್ರತಿರೋಧ ವ್ಯವಸ್ಥೆ ರೂಪುಗೊಳ್ಳುವಂತೆ ಪ್ರೇರೇಪಿಸುವ ಬದಲು ಈ ಪ್ರಯೋಗದಲ್ಲಿ ವ್ಯಕ್ತಿಗೆ ಪ್ರತಿಕಾಯಗಳನ್ನು ನೀಡಲಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹಾಗೂ ಲಸಿಕೆಗೆ ಸ್ಪಂದಿಸದವರಲ್ಲಿ ಇದು ಪರಿಣಾಮಕಾರಿಯಾಗಬಹುದು. ಆಸ್ಟ್ರಾಜೆನೆಕಾವು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೋವಿಡ್‌ ಲಸಿಕೆಯನ್ನೂ ಅಭಿವೃದ್ಧಿಪಡಿಸುತ್ತಿದೆ.

ಬ್ರಿಟನ್‌ನಲ್ಲಿ ‘ಮೊನೊಕ್ಲೋನಲ್ ಆ್ಯಂಟಿಬಾಡಿ’ಯ ಪರೀಕ್ಷೆ ಶನಿವಾರ ಆರಂಭಗೊಂಡಿದ್ದು, 1,000 ಮಂದಿ ಭಾಗಿಯಾಗಿದ್ದಾರೆ. 9 ಕಡೆ ಈ ಪರೀಕ್ಷೆ ನಡೆಯುತ್ತಿದೆ ಎಂದು ಸಂಶೋಧಕರ ಬ್ರಿಟನ್‌ ಘಟಕವು ತಿಳಿಸಿದೆ.

ಇದನ್ನೂ ಓದಿ: 

‘ವೈರಸ್‌ ಅನ್ನು ತಟಸ್ಥಗೊಳಿಸಬಲ್ಲ ಪ್ರತಿಕಾಯಗಳನ್ನು ಸ್ನಾಯುಗಳಿಗೆ ಇಂಜೆಕ್ಟ್ ಮಾಡುವ ಮೂಲಕ ಜನರಿಗೆ ರಕ್ಷಣೆ ನೀಡಬಹುದೇ ಎಂಬ ಬಗ್ಗೆ ನಾವು ಸಂಶೋಧನೆ ನಡೆಸುತ್ತಿದ್ದೇವೆ’ ಎಂದು ಬ್ರಿಟನ್‌ನ ಪ್ರೊಫೆಸರ್, ಹಿರಿಯ ಸಂಶೋಧಕ ಆಂಡ್ರ್ಯೂ ಉಸ್ಟಿಯಾನೋವ್‌ಸ್ಕಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು