ಬೆಂಗಳೂರು: ನಗರದಲ್ಲಿ ಭಾನುವಾರ ಜಿಟಿಜಿಟಿ ಮಳೆಯ ಜೊತೆಗೆ ಚಳಿಯಿಂದಾಗಿ ನಡುಗಿದ್ದ ಜನರಿಗೆ ಸೋಮವಾರದ ವಾತಾವರಣ ಕೊಂಚ ನೆಮ್ಮದಿ ನೀಡಿದೆ. ಆದರೆ, ತಣ್ಣನೆಯ ವಾತಾವರಣ ಹಾಗೂ ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚಗಿನ ಉಡುಪಿನ ಮೊರೆ ಹೋಗಬೇಕಾಯಿತು. ಇದೇ ರೀತಿಯ ವಾತಾವರಣ ಇನ್ನೂ ಎರಡು ದಿನ ಇರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಹವಾಮಾನದ ದಿಢೀರ್ ಬದಲಾವಣೆಗೆ ಕಾರಣಗಳೇನು?

ಶೀಲಂಕಾದ ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದ ‘ದಿತ್ವಾ’ ಚಂಡಮಾರುತವು ತಮಿಳುನಾಡಿನ ಕರಾವಳಿಯ ತಲುಪಿದ ಪರಿಣಾಮ, ಬೆಂಗಳೂರಿನಲ್ಲಿ ಚಳಿ ಹೆಚ್ಚಳವಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮುಗಿದ ನಂತರವೂ ಅಂದರೆ ಇತ್ತೀಚಿನ ದಿನದವರೆಗೂ ಬೆಂಗಳೂರು ಸುತ್ತಮುತ್ತ ಮಳೆಯಾಗಿರುವುದು ಇನ್ನೊಂದು ಕಾರಣ.

ದ್ವಿತಾ ಚಂಡಮಾರುತ ಕರ್ನಾಟಕದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಚಂಡಮಾರುದಿಂದಾಗಿ ಗಾಳಿ ಹೆಚ್ಚಾಗಿರುವುದರಿಂದ ವಾತಾವಣದ ತೇವಾಂಶ ಕಡಿಮೆಯಾಗಿ ಕೊರೆಯುವ ಚಳಿಯ ಅನುಭವ ಆಗುತ್ತಿದೆ.

ಚಳಿಗಾಲದಲ್ಲಿ ಚಳಿ ಸಾಮಾನ್ಯ:

ಇನ್ನು, ಈಗಾಗಲೇ ಚಳಿಗಾಲ ಆರಂಭವಾಗಿರುವುದರಿಂದ ಚಳಿ ಇರುವುದು ಸಾಮಾನ್ಯ. ಆದರೆ, ಗಾಳಿ ಬೀಸುತ್ತಿರುವುದರಿಂದ ಅದರ ತೀವ್ರತೆ ಜಾಸ್ತಿ ಎನಿಸುತ್ತಿದೆ. ಇನ್ನೂ ಬೆಂಗಳೂರು ಸುತ್ತಮುತ್ತಲಿನ ತಾಪಮಾನ ತೀರಾ ಕಡಿಮೆ ಇಲ್ಲ. ಆದರೆ, ಕನಿಷ್ಠ 16 ರಿಂದ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಇದರ ಜೊತೆ ಗಾಳಿ ಬೀಸುತ್ತಿರುವುದರಿಂದ ಚಳಿಯ ತೀವ್ರತೆ ಹೆಚ್ಚಾದಂತೆ ಕಂಡುಬಂದಿದೆ.

15 ಡಿಗ್ರಿ ಸೆಲ್ಸಿಯಸ್ ತಾಪಮಾನದ ಜೊತೆಗೆ ಗಾಳಿ ಬೀಸಿದಾಗ ಚಳಿಯ ಅನುಭವ ಹೆಚ್ಚಾಗುತ್ತದೆ. ಇದನ್ನು ನಡುಕಬರಿಸುವ ಚಳಿ (Wind Chill) ಎನ್ನಬಹುದು. ವಿಶೇಷವಾಗಿ ಬೆಳಗಿನಜಾವ 4ರಿಂದ 5 ಗಂಟೆ ಸಮಯದಲ್ಲಿ ಕಡಿಮೆ ತಪಮಾನ ಇರಲಿದೆ. ದ್ವಿತಾ ಚಂಡಮಾರುತ ಮುಗಿಯುತ್ತಿದ್ದಂತೆ ಈ ಕೊರೆಯುವ ಚಳಿಯ ವಾತಾವರಣ ಇರುವುದಿಲ್ಲ.

ಚಳಿ ವಿಪರೀತ ಎನಿಸಲು ಕಾರಣ?

ಚಳಿಗಾಲದಲ್ಲಿ ಚಳಿಯ ಜೊತೆಗೆ ಗಾಳಿ ಬೀಸುವುದರಿಂದ ನಮ್ಮ ದೇಹದಿಂದ ಬೆವರು ಹೊರಬರುವುದಿಲ್ಲ. ಆದರೆ, ಚಳಿಗಾಲದಲ್ಲಿ ದೇಹ ಬೆವರುವುದಿಲ್ಲ ಆ ಕಾರಣದಿಂದಾಗಿ ಚಳಿಯ ಕೊರೆತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ನಮ್ಮ ಚರ್ಮ ಕಳೆದುಕೊಂಡಿರುತ್ತದೆ. ಈ ಕಾರಣದಿಂದಾಗಿಯೂ ವಿಪರೀತ ಚಳಿಯ ಅನುಭವ ಆಗುತ್ತದೆ.

ಈ ಚಳಿಯ ಅನುಭವ ಬೆಂಗಳೂರು ಮಾತ್ರವಲ್ಲ, ಉತ್ತರ ಕರ್ನಾಟಕ ಭಾಗದಲ್ಲೂ ಇರಲಿದೆ. ಮಳೆ ಬರುವ ಅಥವಾ ಮೋಡ ಕವಿದ ವಾತಾವರಣ ಇನ್ನೂ ಎರಡು ದಿನ ಇರಲಿದ್ದು, ಈ ರೀತಿಯ ಕೊರೆಯುವ ಚಳಿಯ ಅನುಭವ ಸಾಮಾನ್ಯವಾಗಿ ಇರಲಿದೆ.

ಚಳಿಯಿಂದ ತಪ್ಪಿಸಿಕೊಳ್ಳಲು ಸಲಹೆಗಳೇನು?

ಉಗುರು ಬೆಚ್ಚಗಿನ ಅಥವಾ ಬಿಸಿ ನೀರು ಕುಡಿಯುವುದು

ಪಾದಗಳಿಗೆ ಸಾಕ್ಸ್ ಧರಿಸುವುದು

ಕಿವಿ ಹಾಗೂ ಕುತ್ತಿಗೆ ಭಾಗವನ್ನು ಬೆಚ್ಚಗಿರಿಸಿಕೊಳ್ಳಬೇಕು

ಹತ್ತಿ ಅಥವಾ ಉಣ್ಣೆ ಬಟ್ಟೆ ಧರಿಸುವುದು

ಸ್ವೆಟರ್ ಬಳಕೆ ಮಾಡುವುದು ಸೂಕ್ತ

ಸೆಮೆಂಟ್ ಅಥವಾ ಖಾಲಿ ನೆಲದ ಮೇಲೆ ಕೂರುವುದು, ಮಲಗುವುದು ತಪ್ಪಿಸಿ

ದೇಹವನ್ನು ನೇರವಾಗಿ ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು

ಲೇಖಕರು: ಸಿ.ಎನ್. ಪ್ರಭು, ಹವಾಮಾನ ಇಲಾಖೆ ನಿರ್ದೇಶಕರು, ಬಿಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.