ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪೀಡಿತರಿಗೆ ಸಂತಾನ ಮಾರ್ಗಗಳು

Last Updated 13 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

70ರ ದಶಕದ ಮಧ್ಯಭಾಗದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳು ಬದುಕುಳಿಯುವ ಸಾಧ್ಯತೆ ಶೇಕಡಾ 58ರಷ್ಟಿತ್ತು. ಇಂದು, ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾದ ಆವಿಷ್ಕಾರಗಳ ಪರಿಣಾಮ ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಮಕ್ಕಳು ಬದುಕುಳಿಯುತ್ತಾರೆ. ಔಷಧ ವಿಜ್ಞಾನದ ಈ ಅಭಿವೃದ್ಧಿ ನಮ್ಮ ಮುಂದೆ ಪ್ರಮುಖ ಸವಾಲೊಂದನ್ನು ತಂದಿಟ್ಟಿದೆ– ಹಾಗೆ ಬದುಕುಳಿಯುವ ಮಕ್ಕಳು ಮುಂದೆ ದೊಡ್ಡವರಾಗಿ ತಮ್ಮದೇ ಆದ ಸಂತಾನವನ್ನು ಪಡೆಯಬೇಕಾದಾಗ ಇರುವ ಮಾರ್ಗಗಳೇನು ಎನ್ನುವುದು.

ಕ್ಯಾನ್ಸರ್‌ ಪೀಡಿತ ವಯಸ್ಕರ ಮುಂದೆ ಸಂತಾನ ಪಡೆಯುವ ಮಾರ್ಗಗಳಿವೆ. ಅವರ ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ಶೇಖರಿಸಿಟ್ಟು, ಕ್ಯಾನ್ಸರ್‌ ಚಿಕಿತ್ಸೆ ಮುಗಿದ ಮೇಲೆ, ತಮಗೆ ಬೇಕಾದಾಗ ಅವುಗಳ ಸಹಾಯದಿಂದ ಮಕ್ಕಳನ್ನು ಪಡೆಯಬಹುದು. ಆದರೆ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಈ ಅವಕಾಶ ಇರುವುದಿಲ್ಲ. ಪ್ರೌಢಾವಸ್ಥೆಗೆ ಮುನ್ನ ವೀರ್ಯವನ್ನು ಉತ್ಪಾದಿಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಬಾಲ್ಯದಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳಲ್ಲಿಶೇ 30ರಷ್ಟು ಮಂದಿ ವಯಸ್ಕರಾದ ಮೇಲೆ ಫಲವತ್ತತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಇಂತಹವರಿಗೆ ತಂದೆಯಾಗುವ ಅವಕಾಶ ಒದಗಿಸಲು ವೈದ್ಯಕೀಯ ವಲಯ ಹೊಸ ದಾರಿಯೊಂದನ್ನು ಕಂಡುಕೊಂಡಿದೆ.

ವಿಜ್ಞಾನದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಅಧ್ಯಯನವೊಂದು ಬದುಕುಳಿಯುವ ಕ್ಯಾನ್ಸರ್ ಪೀಡಿತ ಮಕ್ಕಳ ಫಲವತ್ತತೆಯ ಮೇಲೆ ಹೊಸ ಬೆಳಕು ಚೆಲ್ಲಿದೆ. ಘನೀಭವಿಸಿದ, ಅಪಕ್ವವಾದ ವೃಷಣ ಅಂಗಾಂಶ ಮತ್ತು ಸ್ಪರ್ಮಟೊಗೋನಿಯಲ್ ಸ್ಟೆಮ್ ಸೆಲ್‌ಗಳನ್ನು ಒಳಗೊಂಡಿರುವ ಪ್ರಯೋಗ ಈಗಾಗಲೇ ಯಶಸ್ಸನ್ನು ಕಂಡಿದೆ.

ಕ್ಯಾನ್ಸರ್‌ಗೆ ನೀಡಲಾಗುವ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ವೀರ್ಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ, ಕೆಲವೊಮ್ಮೆ ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದು ಶಾಶ್ವತ ಫಲವತ್ತತೆಯ ಸಮಸ್ಯೆಗೂ ಕಾರಣವಾಗಬಹುದು. ವಯಸ್ಕ ಪುರುಷರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಚಿಕಿತ್ಸೆ ಆರಂಭಿಸುವ ಮುನ್ನ, ಮುಂದಿನ ಬಳಕೆಗಾಗಿ ಅವರ ವೀರ್ಯವನ್ನು ತೆಗೆದು ಸೂಕ್ತ ರೀತಿಯಲ್ಲಿ ಶೇಖರಿಸಿಡಲಾಗುತ್ತದೆ. ಆದರೆ, ಬಾಲಕರುಪ್ರೌಢಾವಸ್ಥೆಯನ್ನು ತಲುಪುವವರೆಗೆ ವೀರ್ಯವನ್ನು ಉತ್ಪತ್ತಿ ಮಾಡುವುದಿಲ್ಲ, ಅಂಥ ಸಂದರ್ಭದಲ್ಲಿ ಲಭ್ಯವಿರುವ ಏಕೈಕ ಫಲವತ್ತತೆ ಸಂರಕ್ಷಣೆ ಆಯ್ಕೆ ಎಂದರೆ ಅವರ ದೇಹದಿಂದ ವೀರ್ಯಾಣು ಕಾಂಡಕೋಶಗಳಿರುವ ವೃಷಣ ಅಂಗಾಂಶಗಳನ್ನು ಕ್ರೈಪ್ರಿಸರ್ವ್ ಮಾಡುವುದು.ಅಂದರೆ ವಿಕಿರಣ ಚಿಕಿತ್ಸೆ ಅಥವಾ ಕೀಮೋಥೆರಪಿಗೆ ಮುಂಚಿತವಾಗಿ ಮೂಳೆ ಮಜ್ಜೆಯನ್ನು ರೋಗಿಯಿಂದ ತೆಗೆದುಕೊಂಡು, ನಂತರ ಇದನ್ನು ಫ್ರೀಜರ್‌ನಲ್ಲಿ ಇರಿಸಿ ಕ್ರೈಪ್ರಿಸರ್ವ್ ಮಾಡುವುದು.ರೀಸಸ್ ಮಕಾಕ್ ಮೇಲೆ ಈಗಾಗಲೇ ಈ ಪ್ರಯೋಗವನ್ನು ಮಾಡಲಾಗಿದ್ದು, ಅದು ಯಶಸ್ವಿಯೂ ಆಗಿದೆ.

ಮುಂದುವರಿಯುವುದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT