ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಮೇಲೆ ಕೊರೊನಾ ಪರಿಣಾಮ: ಈವರೆಗೆ ವೈದ್ಯರು ಕಂಡುಕೊಂಡಿದ್ದೇನು?

Last Updated 28 ಜೂನ್ 2020, 10:17 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕು (ಕೋವಿಡ್–19) ಇಡೀ ಜಗತ್ತಿನಲ್ಲಿ ಹರಡಲು ಆರಂಭವಾಗಿ 6 ತಿಂಗಳುಗಳೇ ಕಳೆದಿದ್ದು, ಸೋಂಕಿತರಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಹಾಗೆಯೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಅನೇಕ ಅಂಶಗಳನ್ನು ತಿಳಿದುಕೊಂಡಿದ್ದಾರೆ. ಅವುಗಳೆಂದರೆ:

* ಸೋಂಕಿತರಲ್ಲಿ ರಕ್ತ ಹೆಪ್ಪುಗಟ್ಟುವಿಕೆ (ಬ್ಲಡ್ ಕ್ಲಾಟ್)ಉಂಟಾಗುವ ಅಪಾಯವಿದೆ. ಇದನ್ನು ರಕ್ತ ತೆಳುವಾಗಿಸುವ ಔಷಧದಿಂದ ನಿವಾರಿಸಬಹುದು

* ಸೋಂಕಿತರನ್ನು ಅಂಗಾತ ಮಲಗಿಸುವ ಬದಲು ಬೋರಾಲಾಗಿ ಮಲಗಿಸುವುದು ಉತ್ತಮ. ಇದು ಅವರ ಶ್ವಾಸಕೋಶಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸಹಕಾರಿ. ಹೀಗೆ ಮಾಡಿದಾಗ ಕೃತಕ ಉಸಿರಾಟದ ವ್ಯವಸ್ಥೆ ಸಿಗದಿದ್ದರೂ ಸೋಂಕಿತರನ್ನು ಪಾರುಮಾಡಲು ಪ್ರಯತ್ನಿಸಬಹುದು.

* ಶ್ವಾಸಕೋಶ, ಉಸಿರಾಟ ವ್ಯವಸ್ಥೆ ಮೇಲೆ ಮಾತ್ರವಲ್ಲದೆ ಹೃದಯ, ಪಿತ್ತಜನಕಾಂಗ, ಕಿಡ್ನಿಗಳು, ಮಿದುಳು ಮತ್ತಿತರ ಅವಯವಗಳ ಮೇಲೂ ಕೊರೊನಾ ವೈರಸ್ ದಾಳಿ ನಡೆಸಬಹುದು.

* ಈವರೆಗೆ ಕಂಡುಕೊಂಡ ಪ್ರಕಾರ, ಆ್ಯಂಟಿ ವೈರಲ್‌ ಔಷಧಗಳಾದ ರೆಮ್‌ಡಿಸಿವರ್, ಡೆಕ್ಸಮೆಥಾಸೊನ್ (ಕೋವಿಡ್‌ನಿಂದ ದೇಹದಲ್ಲಾಗುವ ಉರಿಯೂತ ಶಮನಗೊಳಿಸಲು) ನೀಡಲಾಗುತ್ತದೆ ಮತ್ತು ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ.

* ಹೆಚ್ಚು ಪರೀಕ್ಷೆ ನಡೆಸುವುದು ಮತ್ತು ತ್ವರಿತ ಫಲಿತಾಂಶ ಆಸ್ಪತ್ರೆಗಳ ಮೆಲಿನ ಒತ್ತಡ ಕಡಿಮೆ ಮಾಡುತ್ತವೆ.

* ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿ ಜತೆ ಮಾಹಿತಿ ಹಂಚಿಕೊಳ್ಳುವುದು ವಿಶ್ವದಾದ್ಯಂತ ಅತಿ ಮುಖ್ಯವಾದದ್ದು.

* ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕದದ್ದು ಅತೀ ಮುಖ್ಯ. ಶುಚಿತ್ವ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು ಅಗತ್ಯ ಎನ್ನುತ್ತಾರೆ ವೈದ್ಯರು.

ಕೆಲವು ನಿಗೂಢ ಸಂಗತಿಗಳು

* ಸೋಂಕಿತರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂಬ ನಿಖರ ಮಾಹಿತಿ ಇನ್ನೂ ತಿಳಿದಿಲ್ಲ.

* ಕೆಲವು ಚಿಕಿತ್ಸೆಗಳು ಬೇಗನೇ ವ್ಯಾಪಕವಾಗಿ ಬಳಕೆಗೆ ಬರುತ್ತಿವೆ. ಉದಾಹರಣೆಗೆ;ರೆಮ್‌ಡಿಸಿವರ್.

* ಕೋವಿಡ್ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಲು ಎಷ್ಟು ಸಮಯ ಬೇಕೆಂಬುದು ಇನ್ನೂ ತಿಳಿದಿಲ್ಲ.

* ಸೋಂಕಿನ ದೀರ್ಘಕಾಲೀನ ಪರಿಣಾಮಗಳೇನು ಎಂಬುದೂ ಇನ್ನೂ ತಿಳಿಯದ ಸಂಗತಿ.

‘ಸೋಂಕಿತರನ್ನು ಅಂಗಾತ ಮಲಗಿಸುವ ಬದಲು ಬೋರಲಾಗಿ ಮಲಗಿಸುವುದು ಒಳ್ಳೆಯದು. ಇದು ನಾವು ಕಂಡುಕೊಂಡ ಉತ್ತಮ ಅಂಶ’ ಎಂದು ಮೆಕ್ಸಿಕೊದ ಗ್ಯಾಲಪ್‌ನಲ್ಲಿರುವ ‘ರೆಹೋಬೊತ್ ಮೆಕಿನ್ಲೆ ಕ್ರಿಶ್ಚಿಯನ್ ಹೆಲ್ತ್ ಕೇರ್ ಸರ್ವೀಸಸ್’ನ ಮುಖ್ಯ ವೈದ್ಯಕೀಯ ಅಧಿಕಾರಿ ವ್ಯಾಲರಿ ವಾಂಗ್ಲರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT