ಶುಕ್ರವಾರ, ಏಪ್ರಿಲ್ 23, 2021
22 °C

ವ್ಯಾಯಾಮದ ಮುನ್ನ ಹಾಗೂ ನಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಹನಗಳು ಓಡಾಡಲು ಇಂಧನ ಹೇಗೆ ಸಹಕಾರಿಯೋ ಹಾಗೆ ಮಾನವ ದೇಹಕ್ಕೆ ದೈಹಿಕ ಚಟುವಟಿಕೆಯೂ ಅಷ್ಟೇ ಮುಖ್ಯ. ಪ್ರತಿನಿತ್ಯ ವ್ಯಾಯಾಮ, ಯೋಗ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ, ಅಲ್ಲದೇ ದೈಹಿಕವಾಗಿಯೂ ಸದೃಢರಾಗಬಹುದು. ಅದೆಲ್ಲದರ ಜೊತೆಗೆ ಸರಿಯಾದ ಆಹಾರ ಕ್ರಮವೂ ಅಷ್ಟೇ ಮುಖ್ಯ. ಸುಮ್ಮನೆ ದೇಹದಂಡಿಸಿದರೆ ಸಾಲುವುದಿಲ್ಲ. ದೇಹದಂಡನೆಗೆ ತಕ್ಕ ಹಾಗೇ ಆಹಾರ ಸೇವಿಸುವುದು ಅಗತ್ಯ. ವ್ಯಾಯಾಮಕ್ಕೂ ಮುಂಚೆ, ವ್ಯಾಯಾಮ ಮಾಡುವಾಗ ಹಾಗೂ ವ್ಯಾಯಾಮದ ನಂತರ ವಿವಿಧ ರೀತಿಯಲ್ಲಿ ದೇಹಕ್ಕೆ ಆಹಾರಗಳನ್ನು ಪೂರೈಸಬೇಕು. 

ಅಮೆರಿಕನ್‌ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ ಅವರ ಪ್ರಕಾರ ದೇಹದಂಡಿಸುವಾಗ ಸರಿಯಾದ ಪ್ರಮಾಣದಲ್ಲಿ ಆಹಾರ ಹಾಗೂ ನೀರಿನ ಸೇವನೆ ಅಗತ್ಯ. ಇದು ವ್ಯಾಯಾಮಕ್ಕೂ ಮೊದಲು ಹಾಗೂ ವ್ಯಾಯಾಮದ ನಂತರ ರಕ್ತದಲ್ಲಿನ ಗ್ಲೂಕೋಸ್ ಸಾಂಧ್ರತೆಯನ್ನು ಕಾಪಾಡಿಕೊಳ್ಳಲು ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಲು ಸಹಕಾರಿ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಇಂಧನ ಇಲ್ಲದೆ ಗಾಡಿ ಓಡಿಸಿದ ಹಾಗೆ. ಹಾಗೇ ಮಾಡಿದರೆ ದೇಹದಲ್ಲಿರುವ ಕ್ಯಾಲೊರಿ ಅಂಶ ಕಡಿಮೆಯಾಗುವುದಿಲ್ಲ. ಆ ಕಾರಣಕ್ಕೆ ವ್ಯಾಯಾಮ ಆರಂಭಿಸುವ ಎರಡು ಗಂಟೆಗಳ ಮುನ್ನ ಕೆಲವು ಆಹಾರ ಸೇವಿನೆ ಮಾಡಿ.

ವ್ಯಾಯಾಮ ಆರಂಭಿಸುವ ಮುನ್ನ.. 

*ಚೆನ್ನಾಗಿ ನೀರು ಕುಡಿಯಿರಿ.

* ಗೋಧಿಹಿಟ್ಟಿನ ಟೋಸ್ಟ್‌ ಹಾಗೂ ಸ್ಟೀಮ್ಡ್‌ ಹಾಲು ಕುಡಿಯಿರಿ. ಕೊಬ್ಬು ರಹಿತ ಯೋಗರ್ಟ್ ಸೇವಿಸಿ. 

*ಅತಿ ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಲ್ಲದೇ ಸ್ನಾಯಗಳಲ್ಲಿ ರಕ್ತಸಂಚಾರಕ್ಕೂ ತೊಂದರೆಯಾಗುತ್ತದೆ. 

*ಎದ್ದ ಕತ್ಷಣ ವ್ಯಾಯಾಮ ಮಾಡುವ ಅಭ್ಯಾಸ ಇದ್ದರೆ ಸ್ವಲ್ಪ ಬಾಳೆಹಣ್ಣು ಹಾಗೂ ಸೇಬುಹಣ್ಣು ಸೇವಿಸಿ.

ವ್ಯಾಯಾಮ ಮಾಡುವ ಸಮಯದಲ್ಲಿ

* ನೀವು ಪ್ರತಿದಿನ ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಯಲ್ಲಿ ತೊಡಗುವವರಾದರೇ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಿರಬೇಕು. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದಿಲ್ಲ.

* ನೀವು ಒಂದು ಗಂಟೆಗೂ ಹೆಚ್ಚು ದೇಹದಂಡಿಸುವವರಾದರೆ ಮಧ್ಯೆ ಮಧ್ಯೆ ಯೋಗರ್ಟ್‌, ಬಾಳೆಹಣ್ಣು ಅಥವಾ ಒಣದ್ರಾಕ್ಷಿ ತಿನ್ನುವುದನ್ನು ರೂಢಿಸಿಕೊಳ್ಳಿ.

ವ್ಯಾಯಾಮದ ನಂತರ

ವ್ಯಾಯಾಮದ ನಂತರ ತಿನ್ನುವುದು ದೇಹಕ್ಕೆ ತುಂಬಾನೇ ಅವಶ್ಯಕ. ಹಾಗಾದರೆ ವ್ಯಾಯಾಮ ನಂತರ ಸೇವಿಸಬಹುದಾದ ಆಹಾರಗಳು ಇಲ್ಲಿವೆ.

* ಕುಡಿಯುವುದು: ವ್ಯಾಯಾಮ ಮುಗಿದ ನಂತರ ನೀರು, ಜ್ಯೂಸ್ ಅಥವಾ ಸ್ಮೂತಿಯಂತಹ ಪಾನೀಯಗಳನ್ನು ಕುಡಿಯಿರಿ.

* ಕಾರ್ಬೋಹೈಡ್ರೇಟ್‌: ವ್ಯಾಯಾಮ ಮಾಡಿದ ನಂತರ ಕಾರ್ಬೋಹೈಡ್ರೇಟ್ ಅಂಶ ಇರುವ ಆಹಾರ ಸೇವನೆ ಅಗತ್ಯ. ಇದು ಸ್ನಾಯುಗಳಿಗೆ ಶಕ್ತಿ ಒದಗಿಸುತ್ತವೆ. 20 ರಿಂದ 60 ನಿಮಿಷಗಳ ವ್ಯಾಯಾಮದ ನಂತರ ಸ್ನಾಯುಗಳಿಗೆ ಪಿಷ್ಟ ಹಾಗೂ ಪ್ರೊಟೀನ್ ಒದಗಿಸುವುದು ಅತೀ ಅಗತ್ಯ. ಇದು ಸ್ನಾಯುಗಳ ಬಲ ಹೆಚ್ಚಿಸಲು ಸಹಕಾರಿ.

* ಪ್ರೊಟೀನ್‌: ಪ್ರೊಟೀನ್‌ಯುಕ್ತ ಆಹಾರ ಸೇವನೆಯಿಂದ ಸ್ನಾಯುಗಳಲ್ಲಿ ಬಲ ಹೆಚ್ಚುತ್ತದೆ. ಅಲ್ಲದೇ ಸ್ನಾಯುಗಳನ್ನು ದುರಸ್ತಿ ಮಾಡುತ್ತದೆ. ಆ ಕಾರಣಕ್ಕೆ ವ್ಯಾಯಾಮದ ನಂತರ ದೇಹಕ್ಕೆ ಪ್ರೊಟೀನ್ ಒದಗಿಸಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು