ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಪೂರ್ವ ಅಂಡಾಶಯ ವೈಫಲ್ಯಕ್ಕೆ ‘ಎಗ್‌ ಫ್ರಿಜಿಂಗ್’ ವರದಾನ

Last Updated 10 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ವಯಸ್ಸಾದಂತೆ ಮಹಿಳೆಯರಲ್ಲಿ ಅಂಡಾಣುಗಳ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ. ಋತುಚಕ್ರದ ಅವಧಿಯಲ್ಲಿ ಮಹಿಳೆಯು ಪ್ರತಿ ತಿಂಗಳು ಸುಮಾರು 30-50 ಅಂಡಾಣುಗಳನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ಇದರ ಪರಿಣಾಮ, ಅಂಡೋತ್ಪತ್ತಿಯ ಪ್ರಮಾಣ ಕುಗ್ಗುತ್ತಾ ಬರುತ್ತದೆ. ಈಗ ಶಿಕ್ಷಣ, ಉದ್ಯೋಗ ಎಂದು ಮಹಿಳೆಯರ ಮದುವೆ ವಯಸ್ಸು 30 ದಾಟುವುದು ಸಹಜ. ಆದರೆ ಮಗು ಪಡೆಯಲು 20ರಿಂದ 28ವರ್ಷ ಸೂಕ್ತ ವಯಸ್ಸು ಎನ್ನುತ್ತಾರೆ ವೈದ್ಯರು. ಮಹಿಳೆಯರಲ್ಲಿ 20ರಿಂದ 25 ವಯಸ್ಸಿನಲ್ಲಿ ಫಲವಂತಿಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವಯಸ್ಸಿನಲ್ಲಿ ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ತೊಡಕುಗಳು ಕಡಿಮೆ. ಮಗುವಿಗೆ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಎನ್ನುವುದು ನೊವಾ ಐವಿಎಫ್ ಫರ್ಟಿಲಿಟಿ ಸೆಂಟರ್‌ನ ಫರ್ಟಿಲಿಟಿ ಕನ್ಸಲ್ಟಂಟ್ ಡಾ.ಅಪೂರ್ವ ಸತೀಶ್ ಅಮರನಾಥ್ ಅವರ ಸಲಹೆ.

***

ಮಹಿಳೆಯ ಫಲವಂತಿಕೆ ಯಾವ ವಯಸ್ಸಿನಲ್ಲಿ ಗರಿಷ್ಠ ಮಟ್ಟದಲ್ಲಿರುತ್ತದೆ?
ವಯಸ್ಸಾದಂತೆ ಮಹಿಳೆಯರಲ್ಲಿ ಅಂಡಾಣುಗಳ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತ ಬರುತ್ತದೆ. ಋತುಚಕ್ರದ ಅವಧಿಯಲ್ಲಿ ಮಹಿಳೆಯು ಪ್ರತಿ ತಿಂಗಳು ಅಂಡಾಣುಗಳನ್ನು ಕಳೆದುಕೊಳ್ಳುತ್ತಾ ಬರುತ್ತಾಳೆ. ಇದರ ಪರಿಣಾಮ, ಅಂಡೋತ್ಪತ್ತಿಯ ಪ್ರಮಾಣ ಕುಗ್ಗುತ್ತಾ ಬರುತ್ತದೆ.

ಈಗ ಉನ್ನತ ಶಿಕ್ಷಣ, ಉದ್ಯೋಗ ಎಂದು ಮಹಿಳೆಯರ ಮದುವೆ ವಯಸ್ಸು 30 ದಾಟುವುದು ಸಹಜ. ಆದರೆ ಮಗು ಪಡೆಯಲು 20ರಿಂದ 28 ವರ್ಷ ಸೂಕ್ತ ವಯಸ್ಸು. ಮಹಿಳೆಯರಲ್ಲಿ 20ರಿಂದ 25 ವಯಸ್ಸಿನಲ್ಲಿ ಫಲವಂತಿಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವಯಸ್ಸಿನಲ್ಲಿ ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ತೊಡಕುಗಳು ಕಡಿಮೆ. ಮಗುವಿಗೆ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂಕಡಿಮೆ.

ಅಂಡಾಣುಗಳ ಗುಣಮಟ್ಟ ಹಾಗೂ ಸಂಖ್ಯೆಯನ್ನು ತಿಳಿಯಲು ಪರೀಕ್ಷೆ ಇದೆಯೇ?
ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಹಂತದಲ್ಲಿನ ಅಂಡಾಣುವನ್ನು ಸಾಮಾನ್ಯವಾಗಿ ಒವೆರಿಯನ್ ರಿಸರ್ವ್ (ಒ.ಆರ್) ಎಂದು ಗುರುತಿಸಲಾಗುತ್ತದೆ. ಒ.ಆರ್ ಮೂಲಕ ಗರ್ಭಧರಿಸುವ ಅವಧಿಯನ್ನು ಅಥವಾ ಗುಣಮಟ್ಟದ ಫಲವಂತಿಕೆಯನ್ನು ಅಂದಾಜು ಮಾಡಲಾಗುತ್ತದೆ. ಮಹಿಳೆಗೆ ವಯಸ್ಸಾದಂತೆ ಅಂಡಾಣುಗಳ ಉತ್ಪಾದನೆ ಗುಣಮಟ್ಟ ಕುಗ್ಗುತ್ತಾ ಹೋಗುತ್ತದೆ. ಕೆಲವು ಮಹಿಳೆಯರಲ್ಲಿ ಬೇಗನೇ ಅಂಡಾಣುಗಳ ಸಂಖ್ಯೆ ಕಡಿಮೆ ಆಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಎಎಂಎಚ್ (ಆ್ಯಂಟಿ ಮ್ಯುಲೆರಿಯನ್‌ ಹಾರ್ಮೋನ್‌) ಟೆಸ್ಟ್ ಎಂದು ಹೇಳಲಾಗುವ ಸರಳ ಪರೀಕ್ಷೆ ಮೂಲಕ ಎಷ್ಟು ಕಾಲ ಗರ್ಭ ಧರಿಸುವುದನ್ನು ಮುಂದೂಡಬಹುದು ಎಂಬುದನ್ನು ಯೋಜಿಸಬಹುದು.

ಚಿಕ್ಕ ವಯಸ್ಸಿನಲ್ಲೇ ಅಂಡಾಣು ಗುಣಮಟ್ಟ ಕಡಿಮೆಯಾದರೆ ಅದಕ್ಕೆ ಪರಿಹಾರ ಇದೆಯೇ?
ಎಎಂಎಚ್‌ ಹಾರ್ಮೋನ್‌ ಪರೀಕ್ಷೆ ಎಂಬುದು ಸರಳ ರಕ್ತಪರೀಕ್ಷೆ. ಈ ಪರೀಕ್ಷೆಯು ಅಂಡಾಶಯದ ಸ್ಥಿತಿಗತಿಯನ್ನು, ಪಿಸಿಒಎಸ್‌ ಸಮಸ್ಯೆ ಹಾಗೂ ಅಂಡಾಣುಗಳ ಗುಣಮಟ್ಟವನ್ನು ತಿಳಿಸುತ್ತದೆ. ಒಂದು ವೇಳೆ ಮದುವೆಯಾಗದ ಯುವತಿಯರಲ್ಲಿ ಅಂಡಾಣುಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಪರೀಕ್ಷೆಯಿಂದ ಗೊತ್ತಾದಾಗ ಈಗ ಅತ್ಯಾಧುನಿಕ ‘ಎಗ್‌ ಫ್ರೀಜಿಂಗ್‌’ ಮೂಲಕ ಮಹಿಳೆಯ ಗುಣಮಟ್ಟದ ಅಂಡಾಣುವನ್ನು ತೆಗೆದು, ಘನೀಕರಿಸಲಾಗುತ್ತದೆ. ಮದುವೆಯಾದ ಬಳಿಕ ಪತಿಯ ಒಪ್ಪಿಗೆ ಪಡೆದು, ಅದನ್ನು ಸಾಧಾರಣ ಸ್ಥಿತಿಗೆ ತಂದು ಫಲವಂತಗೊಳಿಸಿ ಭ್ರೂಣಗಳನ್ನು ಸೃಷ್ಟಿಸಲಾಗುತ್ತದೆ. ಇದನ್ನು ಗರ್ಭಾಶಯದ ಒಳಗೆ ವರ್ಗಾಯಿಸಿ ಯಶಸ್ವಿ ಗರ್ಭಧಾರಣೆಗೆ ಪ್ರಯತ್ನಿಸಲಾಗುತ್ತದೆ. ಇದು ಐವಿಎಫ್‌ ಚಿಕಿತ್ಸೆಯ ಸುಧಾರಿತ ವಿಧಾನಗಳಲ್ಲೊಂದು.

ಅವಧಿಪೂರ್ವ ಒವೆರಿಯನ್ ಫೇಲ್ಯೂರ್ (ಪಿಒಎಫ್) ಎಂದರೇನು?
ಋತುಸ್ರಾವ ಅಥವಾ ಅಂಡಾಣು ಉತ್ಪಾದನೆಯು 35 ವರ್ಷದ ವೇಳೆಗೆ ಕಡಿಮೆ ಆಗುವುದನ್ನು ವೈದ್ಯಕೀಯ ಭಾಷೆಯಲ್ಲಿ ‘ಪ್ರೀಮೆಚ್ಯೂರ್ ಒವೆರಿಯನ್ ಫೇಲ್ಯೂರ್ (ಪಿಒಎಫ್) ಅಥವಾ ಪ್ರಿಮೆಚ್ಯೂರ್ ಒವೆರಿಯನ್ ಇನ್‍ಸಫಿಷಿಯೆನ್ಸಿ’ ಎಂದು ಗುರುತಿಸಲಾಗುತ್ತದೆ. ಅಧ್ಯಯನಗಳ ಪ್ರಕಾರ, ಭಾರತೀಯರಲ್ಲಿ ಸುಮಾರು ಶೇ 1ರಿಂದ 2ರಷ್ಟು ಮಹಿಳೆಯರಲ್ಲಿ 29 ವರ್ಷದಿಂದ 39 ವರ್ಷ ವಯಸ್ಸಿನವರೆಗೂ ಋತುಬಂಧ ಆಗುತ್ತದೆ. ಅವಧಿಪೂರ್ವ ಒವೆರಿಯನ್ ಫೇಲ್ಯೂರ್ (ಪಿಒಎಫ್) ವಯೋಸಂಬಂಧ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆಗೆ ಬರುವ 20 ಮಹಿಳೆಯರಲ್ಲಿ ಒಬ್ಬರಲ್ಲಿ ಪಿಒಎಫ್ ಸಮಸ್ಯೆ ಕಾಣಿಸುತ್ತದೆ.

ಚಿಕ್ಕ ವಯಸ್ಸಿನಲ್ಲೇ ಋತುಬಂಧಕ್ಕೆ ಕಾರಣಗಳೇನು?
ಮಹಿಳೆಯರಲ್ಲಿ ಋತುಸ್ರಾವದ ಸರಾಸರಿ ವಯಸ್ಸು ಸುಮಾರು 50. ಶೇ 1ರಷ್ಟು ಮಹಿಳೆಯರಲ್ಲಿ ಮಾತ್ರವೇ 60 ವರ್ಷದವರೆಗೂ ಋತುಸ್ರಾವ ಸಂಭವಿಸಬಹುದು. ಆದರೆ 40 ವರ್ಷವಾಗುವ ವೇಳೆಗೆ ಋತುಬಂಧ ಆಗುವವವರ ಸಂಖ್ಯೆ ಈಗ ಹೆಚ್ಚುತ್ತಿದೆ. ಒತ್ತಡ, ಜೀವನಶೈಲಿ, ಪರಿಸರದ ಕಾರಣಗಳು ಇದಕ್ಕೆ ಪರಿಣಾಮ ಬೀರುತ್ತವೆ. 30 ಮಹಿಳೆಗೆ ಗರ್ಭಧಾರಣೆಗೆ ಸೂಕ್ತ ವಯಸ್ಸು. 32ರ ನಂತರ ಅಂಡಾಣುಗಳ ಉತ್ಪತ್ತಿ ಮಹಿಳೆಯಲ್ಲಿ ಕಡಿಮೆಯಾಗುತ್ತದೆ. ‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ (ಗರ್ಭಧಾರಣೆಯಿಂದ ಹೆರಿಗೆಯವರೆಗೂ ಸೂಕ್ಷ್ಮ ಪ್ರಕೃತಿಯಿಂದ ಕೂಡಿರುವುದು) ಕೂಡ ಕಾಣಿಸಿಕೊಳ್ಳಬಹುದು.

ಅಧಿಕ ದೇಹತೂಕ ಇರುವ ಮಹಿಳೆಯರು ಮತ್ತು 30 ವರ್ಷದ ನಂತರ ಮಗು ಹೊಂದಲು ಬಯಸುವ ದಂಪತಿ ವೈದ್ಯರನ್ನು ಭೇಟಿ ಮಾಡಿ ಚರ್ಚಿಸಿಕೊಳ್ಳುವುದು ಸೂಕ್ತ.

ಡಾ.ಅಪೂರ್ವ ಸತೀಶ್ ಅಮರನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT