ಆರೋಗ್ಯವಿದ್ದರೆ ವರ್ಷವೆಲ್ಲ ಹೊಸತನದಿಂದಲೇ ಕೂಡಿರುತ್ತದೆ. ಆರೋಗ್ಯ ಪಾಲನೆಗೆ ಕೆಲವು ಸೂತ್ರಗಳನ್ನಾದರೂ ಕಟ್ಟುನಿಟ್ಟಾಗಿ ಪಾಲಿಸಲು ಹೊಸವರ್ಷ ನೆಪವಾಗಲಿ.

ಈ ವರ್ಷ ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಒಂದೆಡೆ ಈ ವರ್ಷ ಸುಸೂತ್ರವಾಗಿ ಉರುಳಿದ ಸಂತಸವಿದ್ದರೆ ಮತ್ತೊಂದೆಡೆ ಮುಂದಿನ ವರ್ಷದ ಬಗ್ಗೆ ಕಾತರ, ಕನಸುಗಳ ನಿರೀಕ್ಷೆಯಿದೆ. ಈ ಹಿಂದಿನ ಎರಡು ವರ್ಷಗಳು ಹೇಗಿದ್ದವು ಎಂಬುದು ಜಗತ್ತಿಗೇ ಗೊತ್ತಿದೆ. ಕೊರೊನಾ ಈ ಅಮೂಲ್ಯ ವರ್ಷಗಳನ್ನು ಬಹುಮಟ್ಟಿಗೆ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿತ್ತು. ಈ ವರ್ಷದ ಆರಂಭದಲ್ಲಿ ಕೊರೊನಾ ತನ್ನ ಗತ್ತು ತೋರಿಸಿದರೂ ಹೆಚ್ಚು ಕಾಡಲಿಲ್ಲವೆನ್ನಬಹುದು. ಏಕೆಂದರೆ ಪ್ರಾರಂಭದಲ್ಲಿ ಕೊರೊನಾ ಪ್ರಕರಣ ಕಂಡರೂ ಅವೆಲ್ಲ ಸೌಮ್ಯ ಸ್ವರೂಪದ್ದಾಗಿತ್ತು. ಲಸಿಕಾ ಅಭಿಯಾನ, ದೇಹದಲ್ಲಿ ಪ್ರತಿರೋಧಕ ಕಾಯಗಳ ಉತ್ಪತ್ತಿಯಿಂದಾಗಿ ರೋಗ ಬಹುತೇಕ ಅಳಿವಿನ ಅಂಚಿಗೆ ಬಂದು ನಿಂತಿದೆ.

ಹಾಗೆಂದು ಮೈಮರೆಯುವ ಹಾಗಿಲ್ಲ. ಜಗತ್ತಿನ ಇನ್ನೂ ಅನೇಕ ಕಡೆ ಕೊರೊನಾ ಹೊಸ ಪ್ರಭೇದಗಳು ಕಾಣಿಸಿಕೊಳ್ಳುತ್ತಿವೆ. ಇಂದಿನ ಜೆಟ್ ಯುಗದಲ್ಲಿ ಇವುಗಳ ಹರಡುವಿಕೆಯೂ ವೇಗವಾಗಿಯೇ ಇರುತ್ತದೆ. ನಮ್ಮನ್ನು ಕಾಡಿದ ಕೊರೊನಾ ಜೀವನದ ಕೆಲವು ಪಾಠಗಳನ್ನು ಕಲಿಸಿದೆ. ಈ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷವನ್ನು ಹರುಷದಿಂದಲೇ ಸ್ವಾಗತಿಸಲು ಸಜ್ಜಾಗುವುದು ಒಳ್ಳೆಯದು.

ನಾವೆಲ್ಲರೂ ಆರೋಗ್ಯವಂತರಾಗಿರಲು ಬಯಸುತ್ತೇವೆ. ಅದಕ್ಕನುಗುಣವಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಕೆಲವು ಗುರಿಗಳನ್ನು ಇಟ್ಟುಕೊಳ್ಳುತ್ತೇವೆ. ಮುಂದಿನ ವರ್ಷಗಳಲ್ಲೂ ನಾವು ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಹಾಗೆ ಕಾಪಾಡಿಕೊಳ್ಳಲು ಇರುವ ಸವಾಲುಗಳೇನು ಎಂಬುದರ ಕುರಿತು ಕೊಂಚ ತಿಳಿದುಕೊಳ್ಳೋಣ.

ಶುಚಿತ್ವ ಪಾಲನೆ

ಕೊರೊನಾ ಕಲಿಸಿದ ಮೊದಲ ಪಾಠವೇ ವೈಯಕ್ತಿಕ ಶುಚಿತ್ವ ವನ್ನು ಕಾಪಾಡಿಕೊಳ್ಳುವುದು ನಾವು ವೈಯಕ್ತಿಕವಾಗಿ ಇತರರೊಂದಿಗೆ ಹೇಗೆ ಬೆರೆಯುತ್ತೇವೆ ಎನ್ನುವುದರ ಮೇಲೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಅವಲಂಬಿಸಿವೆ. ಪರರ ವಸ್ತುಗಳನ್ನು ಬಳಸದೇ ಇರುವುದು, ಊಟ-ಪಾನೀಯಗಳ ಬಳಕೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಂತಾದ ಕ್ರಮಗಳಿಂದ, ಮತ್ತೊಬ್ಬರ ಬೆವರು, ಜೊಲ್ಲು ಮತ್ತು ಕಫದ ಮೂಲಕ ಬರಬಹುದಾದ ರೋಗಗಳನ್ನು ತಡೆಗಟ್ಟಬಹುದು. ಇದರಿಂದ ಕೊರೊನಾ ಅಷ್ಟೆ ಅಲ್ಲ, ಮುಂದೆ ಬರಬಹುದಾದ ಇನ್ನಿತರ ಸಾಂಕ್ರಾಮಿಕ ರೋಗಗಳಿಂದಲೂ ದೂರವಿರಬಹುದು.

ವ್ಯಾಯಾಮ

ನಿಯಮಿತ ವ್ಯಾಯಾಮಕ್ಕೂ ಮತ್ತು ಆರೋಗ್ಯಕ್ಕೂ ಅವಿನಾಭಾವ ಸಂಬಂಧ. ವ್ಯಾಯಾಮವು ದೇಹದ ಮಾಂಸಖಂಡಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ವ್ಯಾಯಾಮದಿಂದ ಹೃದಯ ಮತ್ತು ಶ್ವಾಸಕೋಶದ ಕ್ಷಮತೆ ಹೆಚ್ಚುತ್ತದೆ. ಕರೋನಾಪೀಡಿತ ಅನೇಕ ರೋಗಿಗಳು ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಮರಳಿ ಪಡೆಯಲು Spirometryಯಂತಹ ಲಘು ವ್ಯಾಯಾಮಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಕೆಲವು ಆಧುನಿಕ ಜಿಮ್ ಗಳು ಕೇವಲ ಮಾಂಸಖಂಡಗಳ ಬಲವರ್ಧನೆ ಮತ್ತು ಸೌಂದರ್ಯಕ್ಕೆ ಒತ್ತು ಕೊಡುತ್ತವೆ. ಇದರಿಂದನೈಜಸೌಂದರ್ಯ ಅನಾವರಣಗೊಳ್ಳುವುದು ಅನುಮಾನ. ಬರಿ ಬಾಹ್ಯಸೌಂದರ್ಯದ ಆಮಿಷಕ್ಕೆ ಬಲಿಯಾಗದೆ ನೈಸರ್ಗಿಕವಾಗಿ ದೇಹದಾರ್ಢ್ಯವನ್ನು ಹೆಚ್ಚಿಸುವ ವಿಧಾನಗಳಿಗೆ ಹೊಂದಿಕೊಳ್ಳುವುದೇ ಉತ್ತಮ. ಯೋಗ, ಪ್ರಾಣಾಯಾಮ, ಈಜುಗಳಂಥವು ಸ್ವಾಭಾವಿಕವಾಗಿಯೇ ನಮ್ಮ ದೇಹವನ್ನು ಹುರಿಗೊಳಿಸುತ್ತವೆ. ಜಿಮ್ಮಿನ ಹವಾನಿಯಂತ್ರಿತ ಗಾಳಿಯ ಬದಲು ಮುಂಜಾನೆಯ ತಂಗಾಳಿಯಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಿರಿ. ಆಗ ಪ್ರಕೃತಿಯ ಮಡಿಲಲ್ಲಿ ಹುದುಗಿರುವ ನಿಷ್ಕಲ್ಮಶ ಪ್ರೀತಿ ಅರಿವಿಗೆ ಬರುತ್ತದೆ.

ಸಮತೋಲಿತ ಆಹಾರ

ಉತ್ತಮ ಆರೋಗ್ಯಕ್ಕೆ ವ್ಯಾಯಾಮದಷ್ಟೆ ಆಹಾರವೂ ಮುಖ್ಯ. ಪೌಷ್ಟಿಕಾಂಶಗಳುಳ್ಳ ಸಮತೋಲಿತ ಆಹಾರದಿಂದ ದೇಹದ ರಾಸಾಯನಿಕ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಅಷ್ಟೇ ಅಲ್ಲ; ಮಾಂಸಖಂಡಗಳ ಬಲವರ್ಧನೆ ಮತ್ತು ಪ್ರತಿರೋಧ ಕಾಯಗಳ ಮತ್ತು ಕಿಣ್ವಗಳ ಉತ್ಪತ್ತಿಗೂ ಸಹಾಯ ಮಾಡುತ್ತವೆ. ಆದರೆ ಪೌಷ್ಟಿಕಾಂಶಗಳ ನೆಪದಲ್ಲಿ ಕೆಲವು ಪೌಡರ್, ಲೇಹ್ಯಗಳ ಸೇವನೆ ಬಗ್ಗೆ ಎಚ್ಚರದಿಂದಿರಿ. ಇನ್ನು ಫಾಸ್ಟ್ ಫುಡ್ ಮತ್ತು ಜಂಕ್ಫುಡ್ಗಳಿಂದ ದೂರವಿರಿ. ಇದು ಆಹಾರದ ಸೇವನೆಯ ಮೇಲೆದುಷ್ಪರಿಣಾಮ ಬೀರುತ್ತದೆ.

ಕುಟುಂಬದೊಂದಿಗೆ ಬೆರೆಯಿರಿ

ಸಾಧ್ಯವಾದಷ್ಟು ಮಟ್ಟಿಗೆ ಸಾವಯವ, ರಾಸಾಯನಿಕರಹಿತ ಆಹಾರವನ್ನು ಸೇವಿಸಬೇಕು. ಆರೋಗ್ಯವಂತರಾಗಿರಲು ಇನ್ನೊಂದು ಸೂತ್ರವೆಂದರೆ ಕುಟುಂಬದ ಜೊತೆ, ಸ್ನೇಹಿತರ ಜೊತೆ ಸಮಯವನ್ನು ಕಳೆಯುವುದು. ಲಾಕ್ಡೌನ್ ಸಮಯದಲ್ಲಿ ಇದರ ಮಹತ್ವ ಅರಿವಿಗೆ ಬಂದಿರಬಹುದು. ಪ್ರೀತಿಪಾತ್ರರೊಂದಿಗೆ ಒಂದಾಗಿ ಬೆರೆಯುವ ಕ್ಣಗಳಿಂದ ದೇಹದಲ್ಲಿ ಸಂತೋಷಸೂಚಕ
ರಸವಾಹಿಗಳು ಹೆಚ್ಚು ಸ್ರವಿಸುತ್ತವೆ.

ಹೊಸ ಹವ್ಯಾಸ

ಪ್ರತಿ ವರ್ಷವೂ ಹೊಸ ಹವ್ಯಾಸಗಳನ್ನು ರೂಢಿಗೊಳಿಸಿಕೊಳ್ಳುವುದು ಒಳ್ಳೆಯದು. ಅದು ಪ್ರವಾಸ ಆಗಿರಬಹುದು; ಆಟ ಆಗಿರಬಹುದು ಅಥವಾ ಪುಸ್ತಕಗಳ ಓದು, ಕಲೆಯಲ್ಲಿ ಆಸಕ್ತಿಯಂಥ ಹವ್ಯಾಸಗಳು ಆಗಿರಬಹುದು.

ಇಂದಿನ ಯುಗದಲ್ಲಿ ಜಿಮ್ ಮತ್ತು ಸಂಸ್ಕರಿಸಿದ ಆಹಾರಕ್ಕೆ ದಾಸರಾಗಿದ್ದೇವೆ. ನಮ್ಮ ಜೀವನಶೈಲಿ ಯಾಂತ್ರಿಕವಾದಷ್ಟು
ರೋಗಗಳಿಗೆ ತುತ್ತಾಗುತ್ತೇವೆ. ಹಿತ-ಮಿತವಾದ ಪ್ರಕೃತಿದತ್ತ ಆಹಾರ, ಸರಳ–ಒತ್ತಡರಹಿತ ಜೀವನಶೈಲಿ ಮತ್ತು ದೇಹ- ಮನಸ್ಸುಗಳಿಗೆ ಮುದ ನೀಡುವ ಹವ್ಯಾಸಗಳಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಪ್ರೊಟೀನ್ ಪೌಡರ್, ಸಂಸ್ಕರಿಸಿದ ಆಹಾರ ಪದಾರ್ಥಗಳು, ದಿಢೀರ್ ತೂಕವನ್ನು ಕಳೆದುಕೊಳ್ಳಲು ಪ್ರಚೋದಿಸುವ ಆಫರ್ಗಳುಮತ್ತು
ಆಧುನಿಕತೆಯ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರಗಳಿಂದ ದೂರವಿರೋಣ.

ಈ ಆರೋಗ್ಯಸೂತ್ರಗಳು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರನ್ನಾಗಿಸುತ್ತವೆ. ಇದು ಬದುಕು ಒಡ್ಡುವ ಸವಾಲುಗಳನ್ನು ಎದುರಿಸುವ ತಾಕತ್ತನ್ನೂ ನೀಡುವುದು ನಿಸ್ಸಂಶಯ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.