ದುಬೈ: ಏಷ್ಯಾ ಕಪ್ 2025ರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಶುಕ್ರವಾರ) ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಒಮಾನ್ ತಂಡಗಳು ಮುಖಾಮುಖಿಯಾಗಿವೆ.

'ಎ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನದ ತಂಡದ ನಾಯಕ ಸಲ್ಮಾನ್ ಆಘಾ ಮೊದಲು ಭ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಟೂರ್ನಿಯಲ್ಲಿ ಇತ್ತಂಡಗಳಿಗೂ ಇದು ಮೊದಲ ಪಂದ್ಯವಾಗಿದೆ. ಅಲ್ಲದೆ ಒಮಾನ್ ತಂಡವು ಪಾಕಿಸ್ತಾನಕ್ಕೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಭಾರತ ಹಾಗೂ ಯುಎಇ ತಂಡಗಳು ಇದೇ ಗುಂಪಿನಲ್ಲಿವೆ. ಅಫ್ಗಾನಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವು ಭಾನುವಾರ ದುಬೈಯಲ್ಲಿ ನಡೆಯಲಿದೆ.
.ಆಳ–ಅಗಲ | ಭಾರತ–ಪಾಕ್ ಕ್ರಿಕೆಟ್: ಕ್ರೀಡಾಸ್ಫೂರ್ತಿ ಗೆಲ್ಲುವುದೇ?.Asia Cup | IND vs UAE: ಯುಎಇ 57ಕ್ಕೆ ಆಲೌಟ್; 4.3 ಓವರ್ನಲ್ಲೇ ಗೆದ್ದ ಭಾರತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.