ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಾಯಾಮಪ್ರಿಯರಲ್ಲಿ ಹೃದ್ರೋಗದ ಭೀತಿ: ಮುನ್ನೆಚ್ಚರಿಕೆ ಏನು?

Published 30 ಆಗಸ್ಟ್ 2024, 21:00 IST
Last Updated 30 ಆಗಸ್ಟ್ 2024, 21:00 IST
ಅಕ್ಷರ ಗಾತ್ರ

ದೈಹಿಕ ಸದೃಢತೆ ಎಂದರೆ ಅತ್ಯುತ್ತಮ ಆರೋಗ್ಯ ಎಂದು ಊಹಿಸಿಕೊಳ್ಳುತ್ತೇವೆ.  ದೇಹದಾರ್ಢ್ಯಕ್ಕಾಗಿ ವ್ಯಾಯಾಮ ಮಾಡುವ ಉತ್ಸಾಹಿಗಳಲ್ಲಿ ಹೃದಯದ ಕಾಯಿಲೆ ಹೆಚ್ಚುತ್ತಿದೆ.  ಸದೃಢ ಆರೋಗ್ಯವಂತರೂ ಹೃದಯದ ಕಾಯಿಲೆಗೆ ತುತ್ತಾಗಬಲ್ಲರು. ಹೃದಯದ ಸಮಸ್ಯೆಗಳಿಗೆ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಪದ್ಧತಿಗಳಷ್ಟೇ ಪರಿಹಾರವಲ್ಲ. ಹಾಗೆ ನೋಡಿದರೆ, ದೈಹಿಕ ಸದೃಢತೆಯನ್ನು ಪ್ರಚೋದಿಸುವ ಜೀವನಶೈಲಿಯ ಹಿಂದೆ ಗೊತ್ತಿಲ್ಲದ ಆರೋಗ್ಯ ಸಮಸ್ಯೆಗಳು ಅಡಗಿವೆ. ಹಾಗಾಗಿ ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. 

ಭಾರತದ ಹೃದ್ರೋಗತಜ್ಞರ ಸಂಘವು ಇತ್ತೀಚೆಗೆ ತನ್ನ ಮಾರ್ಗಸೂಚಿಗಳನ್ನು ಮರುಪರಿಶೀಲಿಸಿ, 18ನೇ ವಯಸ್ಸಿನಿಂದ ಕೊಲೆಸ್ಟ್ರಾಲ್ ತಪಾಸಣೆ ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದೆ.  ಹೃದ್ರೋಗವನ್ನು ದೂರವಿಡಲು ಸಕ್ರಿಯ ಜೀವನಶೈಲಿ ಉತ್ತಮ ಮಾರ್ಗ ಎಂದು ಭಾವಿಸಿರುವ ವ್ಯಾಯಾಮಪ್ರಿಯರಿಗೆ ನಿಯಮಿತ ಕೊಲೆಸ್ಟ್ರಾಲ್‌ ತಪಾಸಣೆ ಅಗತ್ಯ.  30-35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದ ಹೃದಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸದ್ಯಕ್ಕೆ ಆತಂಕದ ವಿಚಾರವೇ.  

ತಪಾಸಣೆಯ ಪ್ರಾಮುಖ್ಯತೆ

ಹೃದಯದ ಆರೋಗ್ಯದಲ್ಲಿ ಕೊಲೆಸ್ಟ್ರಾಲ್ ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚಿನ ಮಟ್ಟದ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್, ಎಲ್‌ಡಿಎಲ್-ಸಿ, ಇದನ್ನು ಸಾಮಾನ್ಯವಾಗಿ  ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯಲಾಗುತ್ತದೆ. ಇದು ಅಪಧಮನಿಗಳಲ್ಲಿ   ಸಂಗ್ರಹಕ್ಕೆ ಕಾರಣವಾಗಬಹುದು. ಇದರಿಂದ ಅಪಧಮನಿ ನಾಳಗಳು ಕಿರಿದಾಗಿ, ಗಟ್ಟಿಯಾಗಲು ಆರಂಭಗೊಳ್ಳುತ್ತವೆ. ಇದಕ್ಕೆ ಅಪಧಮನಿ ಗಡಸಾಗುವಿಕೆ ಎನ್ನಲಾಗುತ್ತದೆ. ಇದು ಅಪಾಯದ ಸೂಚನೆಯಾಗಿದ್ದು, ಇದರ ಪತ್ತೆಗೆ ನಿಯಮಿತ ಕೊಲೆಸ್ಟಾರಲ್‌ ತಪಾಸಣೆ ಅಗತ್ಯ. 

ಏನು ಮಾಡಬಹುದು? 

ಕೊಲೆಸ್ಟ್ರಾಲ್‌ ಮಟ್ಟವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಅಗತ್ಯವಾಗಿರುತ್ತದೆ. 

 ಔಷಧಿ:  ಚುಚ್ಚುಮದ್ದಿನ ರೂಪದಲ್ಲಿ ಸುಧಾರಿತ ಚಿಕಿತ್ಸೆಯು ಶೇ 50ರಷ್ಟು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಆದರೆ ವೈದ್ಯರ ಮಾರ್ಗದರ್ಶನ ಅಗತ್ಯ. 

ಸಮತೋಲಿತ ಆಹಾರ:  ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವುದು ಬಹಳ ಮುಖ್ಯ. ಆಹಾರದ ಆಯ್ಕೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಇದರಿಂದ ದೀರ್ಘಾವಧಿಯವರೆಗೆ ಹೃದಯರಕ್ತನಾಳ ಕ್ಷೇಮದಿಂದ ಕೂಡಿರುತ್ತದೆ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕು.  

ತೂಕ ನಿರ್ವಹಣೆ: ಒಟ್ಟಾರೆ ಹೃದಯರಕ್ತನಾಳದ ಆರೋಗ್ಯಕ್ಕೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹೆಚ್ಚುವರಿ ದೇಹದ ತೂಕ, ಇದು ಕೆಲವು ಹೆಚ್ಚುವರಿ ಪೌಂಡ್‌ಗಳಾಗಿದ್ದರೂ   ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಒತ್ತಡವನ್ನು ನಿರ್ವಹಿಸಿ: ದೀರ್ಘಕಾಲದ ಒತ್ತಡವು ಹೆಚ್ಚಿನ LDL ಕೊಲೆಸ್ಟ್ರಾಲ್ ಮಟ್ಟಗಳಿಗೆ ಮತ್ತು ಕಡಿಮೆ ಎಚ್‌ಡಿಎಲ್‌ಗೆ ಕಾರಣವಾಗಬಹುದು. ಧ್ಯಾನ, ಯೋಗ ಮತ್ತು ಆಳವಾದ ಉಸಿರಾಟದಂಥ ತಂತ್ರಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಹೃದಯಕ್ಕೆ ಎಲ್‌ಡಿಎಲ್‌–ಸಿ ತಿಳಿಯಿರಿ 

ಎಲ್‌ಡಿಎಲ್‌–ಸಿಯು ಹೃದೋಗ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ವ್ಯಕ್ತಿಯ ಒಟ್ಟಾರೆ ಆರೋಗ್ಯವು ಕೌಟುಂಬಿಕ ಹಾಗೂ ಆನುವಂಶೀಯವನ್ನು ಆಧರಿಸಿರುತ್ತದೆ. ನಿಯಮಿತ ತಪಾಸಣೆಯಿಂದ ಎಲ್‌ಡಿಎಲ್‌–ಸಿ ಮಟ್ಟವನ್ನು ತಿಳಿದುಕೊಂಡರೆ ಚಿಕಿತ್ಸೆ ಪಡೆಯುವುದು ಸುಲಭ. 

ಡಾ. ರಾಜ್‌ಪಾಲ್ ಸಿಂಗ್ ,ಹಿರಿಯ ಕಾರ್ಡಿಯಾಲಜಿಸ್ಟ್, ಫೋರ್ಟಿಸ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT