ಅತಿ ವೇಗದ ಅನಿಯಮಿತ ಹೃದಯ ಬಡಿತ ಪ್ರಕರಣಗಳು ( Atrial Fibrillation (AF) ಹೆಚ್ಚುತ್ತಿದ್ದು, ಆರೋಗ್ಯದ ಮೇಲೆ ತೀವ್ರ ತೊಂದರೆಯನ್ನು ಉಂಟು ಮಾಡುತ್ತಿದೆ.

ಒಂದು ಅಧ್ಯಯನದ ಪ್ರಕಾರ ಶೇ 10 ರಿಂದ 25ರಷ್ಟು ಪಾರ್ಶ್ವವಾಯು ರೋಗಿಗಳಲ್ಲಿ ಈ ಏಟ್ರಿಯಲ್ ಫಿಬ್ರಿಲೇಷನ್ ಕಂಡುಬರುತ್ತದೆ. ಈ ಸಮಸ್ಯೆ ಇದ್ದವರಿಗೆ ರಕ್ತನಾಳಗಳಲ್ಲಿ ಸರಾಗವಾಗಿ ರಕ್ತದ ಹರಿವು ಆಗುವುದಿಲ್ಲ. ಹಾಗಾಗಿ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಲು ಪ್ರಮುಖ ಕಾರಣವಾಗುತ್ತದೆ.

ಈ ರೋಗದ ಗಂಭೀರತೆ ಪಾರ್ಶ್ವವಾಯುವಿಗಿಂತ ಐದು ಪಟ್ಟು ಹೆಚ್ಚಿರುತ್ತದೆ. ಹೀಗಾಗಿ ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುತ್ತದೆ. ಇಂತಹ ಸಮಸ್ಯೆಯ ನಿವಾರಣೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ಕರಗಿಸುವ ಔಷಧಿಗಳನ್ನು ಬಳಸುವುದು ಸೂಕ್ತವಾಗಿದೆ. ಇದರಿಂದ ಪಾರ್ಶ್ವವಾಯುಗಳನ್ನು ತಡೆಯಲು ಸಾಧ್ಯವಿದೆ.

ಆರಂಭಿಕ ಹಂತದಲ್ಲಿಯೇ ಈ ಏರ್ಟಿಯಲ್ ಫಿಬ್ರಿಲೇಶನ್ ಅನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಔಷಧಿಗಳನ್ನು ಪಡೆದರೆ ಅಪಾಯದಿಂದ ಪಾರಾಗಬಹುದು. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಬೊಜ್ಜು, ಟೈಪ್ 2 ಮಧುಮೇಹ, ಹೃದ್ರೋಗ ಹಾಗೂ ಶ್ವಾಸಕೋಶ ಸಮಸ್ಯೆ, ಹೈಪರ್ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವರಲ್ಲಿ ಏರ್ಟಿಯಲ್ ಫಿಬ್ರಿಲೇಷನ್ ಕಂಡುಬರುವ ಸಾಧ್ಯತೆ ಹೆಚ್ಚು.

ಈ ಬಗ್ಗೆ ಮಾತನಾಡಿದ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ ನ ಎಚ್ಒಡಿ ಡಾ.ರಂಜನ್ ಶೆಟ್ಟಿ ಹೇಳುವುದಿಷ್ಟು ‘ನಿತ್ಯ ಏರ್ಟಿಯಲ್ ಫಿಬ್ರಿಲೇಷನ್ ಲಕ್ಷಣವಿರುವ ಸುಮಾರು 5ರಿಂದ 10 ರೋಗಿಗಳ ತಪಾಸಣೆ ನಡೆಸಲಾಗುತ್ತದೆ. ಸಕಾಲದಲ್ಲಿ ರೋಗ ಪತ್ತೆ ಮಾಡದಿದ್ದರೆ ಅವರು ತೀವ್ರರೀತಿಯ ಪಾರ್ಶ್ವವಾಯು ಅಪಾಯವನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಮರಣಕ್ಕೆ ತುತ್ತಾಗಬಹುದು. ಅಧಿಕ ತೂಕ , ರಕ್ತದೊತ್ತಡ, ಮಧುಮೇಹ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಅನುಭವ ಹೊಂದಿರುವವರು ಈ ತಪಾಸಣೆಗೆ ಒಳಗಾಗುವುದು ಮುಖ್ಯ.

ಏರ್ಟಿಯಲ್ ಫಿಬ್ರಿಲೇಷನ್ ಹೊಂದಿರುವವರಲ್ಲಿ ಸಾಮಾನ್ಯ ಲಕ್ಷಣಗಳೆಂದರೆ, ಆಯಾಸ, ಅನಿಯಮಿತ ಹೃದಯ ಬಡಿತ, ತಲೆ ತಿರುಗುವಿಕೆ, ಮೂರ್ಛೆ, ಉಸಿರಾಟದ ತೊಂದರೆ, ಎದೆನೋವು. ಕೆಲವೊಮ್ಮೆ ಭಾಗಗಳಲ್ಲಿ ಮರಗಟ್ಟುವಿಕೆ, ದೌರ್ಬಲ್ಯ, ಗೊಂದಲ, ಮಾತಿನಲ್ಲಿ ಉಂಟಾಗುವ ತೊಂದರೆಗಳು, ದೃಷ್ಟಿ ಸಮಸ್ಯೆಗಳು, ನಡಿಗೆ ಸಮಸ್ಯೆಗಳು ಉಂಟಾಗಬಹುದು.

ಏರ್ಟಿಯಲ್ ಫಿಬ್ರಿಲೇಶನ್ ಮೂರು ಪ್ರಮುಖವಾದ ಔಷಧಿಗಳಿವೆ. ರೇಟ್ ಕಂಟ್ರೋಲ್ ಮೆಡಿಕೇಶನ್ಸ್ (ಹೃದಯದ ಬಡಿತದ ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ), ರಿದಂ ಕಂಟ್ರೋಲ್ ಮೆಡಿಕೇಶನ್ಸ್ (ಹೃದಯದ ಬಡಿತದ ಲಯವನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತದೆ) ಮತ್ತು ರಕ್ತವನ್ನು ತೆಳುವಾಗಿಸುವಂತಹ ಹೆಪ್ಪುನಿರೋಧಕ ಔಷಧಿಗಳು (ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.