ಸಾಮಾನ್ಯವಾಗಿ ಮನೆಯ ಹಿತ್ತಲಲ್ಲೆ ಬೆಳೆಸಬಹುದಾದ ಬಹುಪ್ರಯೋಜನಕಾರಿ ಗಿಡ ಎಂದರೆ ದಾಸವಾಳ. ಇದು ಕೇವಲ ಪೂಜೆಗೆ ಅಥವಾ ಅಲಂಕಾರಕ್ಕಷ್ಟೇ ಸೀಮಿತವಲ್ಲ. ದಾಸವಾಳ ಗಿಡದ ಹೂ, ಎಲೆ, ಬೇರುಗಳೂ ಔಷಧೀಯ ಪ್ರಯೋಜನಗಳನ್ನು ಹೊಂದಿವೆ. ಬಹುಮುಖ್ಯವಾಗಿ ಹೂವು ಆಯುರ್ವೆದದಲ್ಲಿ ಇದಕ್ಕೆ ಅದರದ್ದೆ ಆದ ಪ್ರಾಮುಖ್ಯತೆ ಇದೆ.

ಸ್ತ್ರೀಯರ ಆರೋಗ್ಯದಲ್ಲಿ ದಾಸವಾಳ ಹೂ ಮಹತ್ವದ ಪಾತ್ರ ವಹಿಸುತ್ತದೆ. ಮಾಸಿಕ ಋತು ಧರ್ಮದ ಅಸಮತೋಲನ, ಹೊಟ್ಟೆನೋವು ಮತ್ತು ಅತಿ ರಕ್ತಸ್ರಾವದ ಸಮಸ್ಯೆಗಳಿಗೆ ದಾಸವಾಳದ ಬಳಕೆ ಉಪಕಾರಿಯಾಗಿದೆ. ದಾಸವಾಳದ ಕಷಾಯವು ಗರ್ಭಾಶಯದ ಆರೋಗ್ಯವನ್ನು ಕಾಪಾಡುತ್ತದೆ. ಎಳೆ ದಾಸವಾಳದ ಹೂವುಗಳನ್ನು ಹಾಲಿನೊಂದಿಗೆ ರುಬ್ಬಿ ಕುಡಿಯುವುದರಿಂದ ಅನಿಯಮಿತ ಅಥವಾ ಅನಿಯಂತ್ರಿತ ರಕ್ತಸ್ರಾವವನ್ನು ಕಡಿಮೆ ಮಾಡಬಹುದು.
.ಬಸವಕಲ್ಯಾಣ | ಸ್ತ್ರೀಯರ ರಕ್ಷಣೆ ತ್ವರಿತ ಕಾರ್ಯಾಚರಣೆಗೆ ‘ಅಕ್ಕ ಪಡೆ’.ಮಹಾ ಶಿವರಾತ್ರಿ ಹಬ್ಬದ ವಿಶೇಷ: ಹೀಗಿರಲಿ ಭಕ್ತರ ಲಘು ಉಪವಾಸದ ಉಪಾಹಾರ.
ಕೇಶಸೌಂದರ್ಯಕ್ಕೆ ದಾಸವಾಳ ಅತ್ಯುತ್ತಮ ಔಷಧಿ. ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಇದ್ದಲ್ಲಿ ದಾಸವಾಳದ ಹೂವು ಮತ್ತು ಎಲೆಗಳನ್ನು ಎಳ್ಳೆಣ್ಣೆಯೊಂದಿಗೆ ಕುದುಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುಕೆ ತಡೆಯಬಹುದು, ಹೊಸ ಕೂದಲು ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕೂದಲು ಸುಸ್ಥಿರ ಮತ್ತು ಸಮೃದ್ಧವಾಗಿ ಬೆಳೆಯುತ್ತದೆ.

ದಾಸವಾಳ ಹೂವಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫ್ಲೇವನಾಯ್ಡ್ಗಳು ಸಮೃದ್ಧವಾಗಿವೆ. ಇವು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿಯಾಗುತ್ತವೆ. ನಿಯಮಿತವಾಗಿ ದಾಸವಾಳದ ಕಷಾಯ ಅಥವಾ ಚಹಾ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
.ಅಧಿಕ ರಕ್ತದೊತ್ತಡ: ಏಮ್ಸ್ಗೆ ದಾಖಲಾದ ದತ್ತಾತ್ರೇಯ ಹೊಸಬಾಳೆ.ಅಧಿಕ ರಕ್ತದೊತ್ತಡ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು; ಬಿಡುಗಡೆ.
ದಾಸವಾಳ ಹೂವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಆ ನೀರನ್ನು ಸೋಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಿಸಬಹುದು. ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ದಾಸವಾಳದ ಚಹಾ ಉತ್ತಮ ಪರಿಹಾರ ನೀಡುತ್ತದೆ. ದಾಸವಾಳದಲ್ಲಿ ಇರುವ ನೈಸರ್ಗಿಕ ತಂಪು ಗುಣ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಚರ್ಮದ ಆರೈಕೆಯಲ್ಲಿಯೂ ದಾಸವಾಳ ಉಪಯುಕ್ತ. ಮುಖದ ಮೊಡವೆ, ಕಲೆಗಳನ್ನು ಕಡಿಮೆ ಮಾಡಲು ದಾಸವಾಳದ ಹೂವಿನ ಪೇಸ್ಟ್ ಬಳಸಲಾಗುತ್ತದೆ. ಇದು ಚರ್ಮ ಶುಷ್ಕವಾಗದಂತೆ ತಡೆದು ನೈಸರ್ಗಿಕ ಕಾಂತಿಯನ್ನೂ ನೀಡುತ್ತದೆ.

(ಲೇಖಕರು: ಡಾ. ಸಂಹಿತಾ ಉಲ್ಲೋಡು, ಸಹಾಯಕ ಪ್ರಾಧ್ಯಾಪಕಿ, ಸಂಹಿತಾ ಸಿದ್ಧಾಂತ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಅಂಚೆಪಾಳ್ಯ, ಬೆಂಗಳೂರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.