ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋಟೀನ್‌ಯುಕ್ತ ಉಪಹಾರ ಸೇವನೆಯಿಂದಾಗುವ ಪ್ರಯೋಜನ: ಇಲ್ಲಿದೆ ಮೊಳಕೆ ಕಾಳಿನ ಸಲಾಡ್

ಅಕ್ಷರ ಗಾತ್ರ

ಪ್ರೋಟೀನ್ ನಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಅತ್ಯಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ. ಸ್ನಾಯುಗಳ ಬಲಿಷ್ಠತೆ ಮತ್ತು ಚೇತರಿಕೆಗೆ ಇದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ಭರಿತ ಉಪಹಾರ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಪೌಷ್ಟಿಕತಜ್ಞೆ ಲವ್‌ನೀತ್ ಬಾತ್ರಾ ಅವರು ಹೇಳುವಂತೆ, 'ಹೆಚ್ಚಿನ ಪ್ರೋಟೀನ್‌ಯುಕ್ತ ಉಪಹಾರ ಸೇವನೆಯು ಸ್ನಾಯುವಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸ್ನಾಯುವಿನ ಬಲಿಷ್ಠತೆ, ಶಕ್ತಿಯ ವ್ಯಯ (ಕ್ಯಾಲೊರಿಗಳನ್ನು ಬರ್ನ್‌), ಅತ್ಯಧಿಕ ಹಾರ್ಮೋನುಗಳು, ಗ್ಲೂಕೋಸ್ ನಿಯಂತ್ರಣ ಮತ್ತು ರಾತ್ರಿಯಲ್ಲಿ ಸೇವಿಸುವ ಬಯಕೆಯನ್ನು ಕಡಿಮೆ ಮಾಡುವ ಮೂಲಕ ತೂಕ ಕಡಿಮೆ ಮಾಡಲು ನೆರವಾಗುತ್ತದೆ' ಎನ್ನುತ್ತಾರೆ.

ಹೆಚ್ಚಿನ ಪ್ರೋಟೀನ್‌ಯುಕ್ತ ಉಪಹಾರ ಸೇವನೆ

ನಿಮ್ಮ ಉಪಾಹಾರಕ್ಕೆ ನೀವು ಅನೇಕ ವಿಧಗಳಲ್ಲಿ ಪ್ರೋಟೀನ್ ಅನ್ನು ಸೇರಿಸಬಹುದು. ಪ್ರೋಟೀನ್ ಶೇಕ್ಸ್ ಮತ್ತು ಸ್ಮೂಥಿಗಳನ್ನು ಹೊರತುಪಡಿಸಿ, ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವ ಹಲವಾರು ಅಗ್ಗದ ಪದಾರ್ಥಗಳಿವೆ. ಅದಕ್ಕೆ ಪೂರಕವಾಗಿ ಮೊಳಕೆ ಕಾಳುಗಳನ್ನು ಬಳಸಬಹುದು. ಇದರಲ್ಲಿ ಕೇವಲ ಪ್ರೋಟೀನ್ ಮಾತ್ರವಲ್ಲದೆ, ಅನೇಕ ಇತರ ಪೋಷಕಾಂಶಗಳನ್ನು ನೀಡುತ್ತವೆ.

ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು

1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೊಳಕೆ ಕಾಳುಗಳಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 'ಮೊಳಕೆ ಕಾಳುಗಳು ದೇಹದಲ್ಲಿನ ಬಿಳಿ ರಕ್ತ ಕಣಗಳಿಗೆ ಶಕ್ತಿಯುತ ಉತ್ತೇಜಕಗಳನ್ನು ಉಂಟುಮಾಡುತ್ತವೆ, ಇದು ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಅಂತಿಮವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಚರ್ಮದ ಆರೋಗ್ಯ ಕಾಪಾಡುತ್ತದೆ

ಆರೋಗ್ಯಕರವಾಗಿರುವುದನ್ನು ತಿನ್ನುವುದು ನಮ್ಮ ಚರ್ಮಕ್ಕೂ ಪ್ರಯೋಜನಕಾರಿ. ಅತ್ಯುತ್ತಮವಾದ ಪೋಷಕಾಂಶಗಳ ಸೇವನೆಯಿಂದಾಗಿ ನಮ್ಮ ಚರ್ಮ ನೈಸರ್ಗಿಕವಾಗಿ ಹೊಳೆಯಲು ಸಹಾಯ ಮಾಡುತ್ತದೆ. ಪೌಷ್ಟಿಕತಜ್ಞೆ ಪ್ರಕಾರ, 'ನಿಮ್ಮ ದೇಹಕ್ಕೆ ನೀವು ಏನನ್ನು ನೀಡುತ್ತೀರೋ ಅದು ನಿಮ್ಮ ಚರ್ಮದಲ್ಲಿ ಪ್ರತಿಬಿಂಬಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗಿ ಚರ್ಮದ ಹೊಳಪನ್ನು ಉಂಟುಮಾಡುವ ಸಾಕಷ್ಟು ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗುತ್ತವೆ' ಎನ್ನುತ್ತಾರೆ.

3. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕ್ರಿಯೆಯನ್ನು ಸುಧಾರಿಸಲು ಫೈಬರ್ ಸಹಾಯ ಮಾಡುತ್ತದೆ. ಮೊಳಕೆ ಕಾಳುಗಳನ್ನು ಸೇವಿಸುವುದರಿಂದಾಗಿ ದೇಹದಲ್ಲಿ ನಾರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇದು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮೊಳಕೆ ಕಾಳುಗಳನ್ನು ಡಯೆಟ್‌ನಲ್ಲಿ ಸೇರಿಸುವುದೇಗೆ?

ಮೊದಲಿಗೆ ಕಾಳುಗಳನ್ನು ನೆನೆಸಿ ಮೊಳಕೆ ಕಟ್ಟಬೇಕು. ಬಳಿಕ ಮೊಳಕೆ ಕಾಳುಗಳನ್ನು ಕತ್ತರಿಸಿದ ಸೌತೆಕಾಯಿ, ಟೊಮೆಟೊ ಮತ್ತು ಈರುಳ್ಳಿಯನ್ನು ಸೇರಿಸಬೇಕು. ಅಗತ್ಯವಿರುವಷ್ಟು ನಿಂಬೆ ಮತ್ತು ಮಸಾಲೆಯನ್ನು ಸೇರಿಸಬೇಕು. ಚೆನ್ನಾಗಿ ಮಿಕ್ಸ್ ಮಾಡಿದರೆ ಮೊಳಕೆ ಕಾಳಿನ ಸಲಾಡ್ ಸವಿಯಲು ಸಿದ್ಧವಾಗುತ್ತದೆ.

(ವಿಶೇಷ ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಜವಾಬ್ದಾರಿಯನ್ನು 'ಪ್ರಜಾವಾಣಿ' ಹೊತ್ತುಕೊಳ್ಳುವುದಿಲ್ಲ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT