ಉತ್ತಮವಾಗಿ ನಿದ್ದೆ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡನ್ನೂ ಆರೋಗ್ಯವಾಗಿಡಬಹುದು. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 8 ಗಂಟೆಯಾದರೂ ಸರಿಯಾದ ನಿದ್ದೆ ಮಾಡಬೇಕು ಎಂದು  ಮನೋವಿಜ್ಞಾನ ಹೇಳುತ್ತದೆ. ನಿದ್ರೆಯಿಂದ ವಂಚಿತವಾಗುವುದನ್ನು ಇಂಸೋಮ್ನಿಯಾ (Insomnia) ಅಥವಾ ನಿದ್ರಾಹೀನತೆ ಎಂದು ಕರೆಯಲಾಗುತ್ತದೆ.  ಇದಕ್ಕೆ ಕಾರಣ, ಪರಿಣಾಮ ಹಾಗೂ ಪರಿಹಾರಗಳೇನು ಎಂಬುದನ್ನು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ.
.ನಿದ್ರಾಹೀನತೆ ತೊಲಗಲು ನಿದ್ರಾಟೋಪಿ.ಅತಿಯಾದ ಮೊಬೈಲ್ ಬಳಕೆ: ನಿದ್ರಾಹೀನತೆ, ಖಿನ್ನತೆ.
ನಿದ್ರಾಹೀನತೆಗೆ ಕಾರಣಗಳು:

ಮಾನಸಿಕ ಒತ್ತಡ ಅಥವಾ ಚಿಂತೆ: ಯಾವುದೋ ಒಂದು ಘಟನೆಗೆ ಸಂಬಂಧಿಸಿದ ಚಿಂತೆ, ಕೆಲಸದ ಒತ್ತಡ ಹಾಗೂ ಕುಟುಂಬದ ಸಮಸ್ಯೆಗಳು ಮನಸ್ಸಿನಲ್ಲಿ ಚಕ್ರದಂತೆ ಸುತ್ತುತ್ತಿರುತ್ತವೆ. ಇದರಿಂದಾಗಿ ಮನಸ್ಸು ಅಶಾಂತವಾಗಿ ನಿದ್ರಾಹೀನತೆಗೆ ಕಾರಣವಾಗುತ್ತದೆ.

ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಅತಿಯಾದ ಬಳಕೆ: ಮಲಗುವ ಮುನ್ನ ಫೋನ್ ಅಥವಾ ಟಿವಿ ನೋಡುವ ಅಭ್ಯಾಸ ಕಣ್ಣಿನ ನರ ಹಾಗೂ ಮೆದುಳನ್ನು ಸಕ್ರಿಯವಾಗಿಡುತ್ತದೆ. ಇದು ನಿದ್ರೆಯ ಹಾರ್ಮೋನ್ (melatonin) ಬಿಡುಗಡೆಗೆ ಅಡ್ಡಿಯಾಗುತ್ತದೆ.

ಅನಿಯಮಿತ ಜೀವನ ಶೈಲಿ: ಮಲಗುವ ಮತ್ತು ಎಚ್ಚರವಾಗುವ ಸಮಯದಲ್ಲಿ ಬದ್ದತೆ ಇಲ್ಲದಿದ್ದರೆ ದೇಹದ ಜೀವಚಕ್ರ (biological clock) ಅಸ್ತವ್ಯಸ್ತವಾಗುತ್ತದೆ. ಇದೂ ಕೂಡ ನಿದ್ರಾಹೀನತೆಗೆ ಕಾರಣವಾಗಬಲ್ಲದು.

ಆತಂಕ ಮತ್ತು ಭಾವನಾತ್ಮಕ ಅಶಾಂತಿ: ಭಯ, ದುಃಖ, ಅಥವಾ ನಿರಾಶೆಯಂತಹ ಭಾವನೆಗಳು ಮನಸ್ಸಿನಲ್ಲಿ ಗಾಢವಾಗಿ ಉಳಿದರೆ ಅದು ನಿದ್ರಾಹೀನತೆಗೆ ಕಾರಣವಾಗುತ್ತದೆ.

ಅತಿಯಾದ ನಿಕೋಟಿನ್ ಅಥವಾ ಕೆಫೀನ್ ಸೇವನೆ: ಚಹಾ, ಕಾಫಿ ಅಥವಾ ಧೂಮಪಾನದಲ್ಲಿರುವ ರಾಸಾಯನಿಕಗಳು ಮೆದುಳನ್ನು ಚುರುಕಾಗಿಸುತ್ತವೆ. ಇದು ನಿದ್ರಾಹೀನತೆಗೆ ಕಾರಣವಾಗಬಹುದು.

ನಿದ್ರಾಹೀನತೆಯಿಂದಾಗುವ  ಪರಿಣಾಮಗಳು:

ದೇಹದಲ್ಲಿ ಆಯಾಸ ಹಾಗೂ ಆಲಸ್ಯ

ಕೋಪ, ಆತಂಕ ಮತ್ತು ಏಕಾಗ್ರತೆ ಕೊರತೆ

ಸ್ಮರಣೆ ಶಕ್ತಿ ಕುಗ್ಗುವುದು

ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು

ದೀರ್ಘಕಾಲದಲ್ಲಿ ಮಾನಸಿಕ ಆರೋಗ್ಯದ ಹಾನಿ (ಉದಾ: ಡಿಪ್ರೆಶನ್, ಆಂಗ್ಸೈಟಿ)

ನಿದ್ರಾಹೀನತೆಯಿಂದ ಹೊರಬರುವ ಮಾರ್ಗಗಳು:

ನಿಯಮಿತ ನಿದ್ರೆಯ ರೂಟೀನ್ (Sleep Hygiene): ಸರಿಯಾದ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳುವುದು. ‘ಬಯಾಲಾಜಿಕಲ್ ಕ್ಲಾಕ್’ ಅನ್ನು ಸ್ಥಿರವಾಗಿಡುವುದು. ಇದು ಮೆದುಳಿಗೆ ‘ನಿದ್ರೆಯ ಸಮಯ ಬಂದಿದೆ’ ಎಂಬ ಸಂದೇಶ ನೀಡುತ್ತದೆ.

ಆತ್ಮಶಾಂತಿ ತಂತ್ರ (Relaxation Technique): ಮಲಗುವ ಮುನ್ನ ದೀರ್ಘ ಉಸಿರಾಟ (Deep Breathing), ‘ಪ್ರೋಗ್ರೆಸಿವ್ ಮಸಲ್ ರಿಲಾಕ್ಸೇಶನ್’ ಅಥವಾ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಅರಿವಿನ ವರ್ತನಾ ಚಿಕಿತ್ಸೆ (CBT for Insomnia): ‘ನನಗೆ ನಿದ್ರೆ ಬರಲ್ಲ’ ಎಂಬ ನಕಾರಾತ್ಮಕ ಆಲೋಚನೆಯಿಂದ ಹೊರಬನ್ನಿ. ‘ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ’ ‘ನಿದ್ರೆ ಬರುವುದು ಖಚಿತ’ ಎಂದು ಧನಾತ್ಮಕವಾಗಿ ಆಲೋಚಿಸಿ. ಇದು ಮನೋವಿಜ್ಞಾನದಲ್ಲಿ ಅತಿ ಪರಿಣಾಮಕಾರಿ ತಂತ್ರ.

ಆಟೋಸಜೆಶನ್ (Autosuggestion): ಮಲಗುವ ಮುನ್ನ ಮನಸ್ಸಿನಲ್ಲಿ ಧನಾತ್ಮಕ ವಾಕ್ಯಗಳನ್ನು ಹೇಳಿಕೊಳ್ಳುವುದು. ‘ನಾನು ಶಾಂತವಾಗಿದ್ದೇನೆ’, ’ನನ್ನ ದೇಹ ವಿಶ್ರಾಂತಿ ಪಡೆಯುತ್ತದೆ’, ‘ನನಗೆ ನಿದ್ರೆ ಬರುತ್ತಿದೆ’. ಈ ತಂತ್ರ ಮೆದುಳಿಗೆ ವಿಶ್ರಾಂತಿಯ ಸೂಚನೆ ನೀಡುತ್ತದೆ.

ಉತ್ತೇಜಕ ಪದಾರ್ಥಗಳ ನಿಯಂತ್ರಣ: ಕೆಫೀನ್, ಎನರ್ಜಿ ಡ್ರಿಂಕ್ಸ್ ಅಥವಾ ಧೂಮಪಾನ ರಾತ್ರಿ ವೇಳೆ ಮಾಡುವುದನ್ನು ತಪ್ಪಿಸಿ.

ಟೆಕ್ನಾಲಜಿ ಡಿಟಾಕ್ಸ್: ಮಲಗುವ ಮುನ್ನ ಕನಿಷ್ಠ ಅರ್ಧ ಗಂಟೆ ಮೊಬೈಲ್, ಟಿವಿ ಅಥವಾ ಲ್ಯಾಪ್ಟಾಪ್ನಿಂದ ದೂರವಿರಬೇಕು. ಬದಲಿಗೆ ಪುಸ್ತಕ ಓದಿ ಅಥವಾ ಸಂಗೀತ ಕೇಳಿ.

ಸ್ವಯಂ-ಪರಿಶೀಲನೆ (Self-Reflection): ದಿನದ ಕೊನೆಯಲ್ಲಿ ತಮ್ಮ ಭಾವನೆಗಳನ್ನು ಕಾಗದದಲ್ಲಿ ಬರೆಯುವುದರಿಂದ ಮನಸ್ಸಿನ ಭಾರ ಕಡಿಮೆ ಮಾಡಿ ಶಾಂತಿ ತರಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.