ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day 2021 | ಚೀನಾದಲ್ಲಿ ಜನಪ್ರಿಯ ‘ಯೋಗ’

Last Updated 21 ಜೂನ್ 2021, 2:08 IST
ಅಕ್ಷರ ಗಾತ್ರ

ರೇಷ್ಮೆ ಮಾರ್ಗದ ಕಾಲದಿಂದಲೂ ಭಾರತ–ಚೀನಾ ನಡುವೆ ಸಾಂಸ್ಕೃತಿಕ ಸಂಬಂಧ ಇದೆ. ಚೀನಾಕ್ಕೆ ಬೌದ್ಧ ಧರ್ಮ ಪ್ರಸಾರದ ಬಳಿಕ ಅದು ಇನ್ನಷ್ಟು ಬಲಗೊಂಡಿತು. ಈಗಂತೂ ‘ಯೋಗ’ ಎಂಬುದು ಚೀನಾದಲ್ಲಿ ಮನೆ ಮಾತಾಗಿದೆ. ಒಲಿಂಪಿಕ್ಸ್‌ನಿಂದ ಹಿಡಿದು, ಕ್ರೆಡಿಟ್ ಕಾರ್ಡ್ ಜಾಹೀರಾತಿಗೂ ಯೋಗ ಬಳಕೆಯಾಗುತ್ತಿದೆ. ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾನುವಾರವೇ ಯೋಗ ದಿನಾಚರಣೆ ನಡೆಯಿತು. ನೂರಾರು ಯೋಗಪಟುಗಳು ಭಾಗವಹಿಸಿದ್ದರು. ಸೋಮವಾರದಂದು ಬೃಹತ್ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

1970ರ ದಶಕದಲ್ಲಿ ಚೀನಾಕ್ಕೆ ಯೋಗವನ್ನು ಮೊದಲು ಪರಿಚಯಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿವೈ ಲಾನಾ ಎಂದು ಗುರುತಿಸಿಕೊಂಡಿದ್ದ ಯೋಗ ಶಿಕ್ಷಕ ಜಾಂಗ್ ಹುಯಿಲಾನ್ ಅವರು ಇದಕ್ಕೆ ಕಾರಣರು. ‘ಯೋಗ’ ಎಂಬ ಹೆಸರಿನ ಅವರ ಟಿ.ವಿ. ಕಾರ್ಯಕ್ರಮ ಸರಣಿಯು 1985ರಿಂದ 2000ರವರೆಗೆ ಚೀನಾದ ಸಿಸಿಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು. ಚೀನಾದ ಟಿ.ವಿ ಇತಿಹಾಸದಲ್ಲಿ ಅತಿ ಹೆಚ್ಚುಕಾಲ ಪ್ರಸಾರವಾದ ಕಾರ್ಯಕ್ರಮ ಸರಣಿ ಎನಿಸಿತು. ಹುಯಿಲನ್ ಅವರಿಗೆ ಭಾರತ ಸರ್ಕಾರವು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

* ಚೀನಾದಾದ್ಯಂತ ಲಕ್ಷಾಂತರ ಯೋಗಪಟುಗಳು ಮತ್ತು 10,000ಕ್ಕೂ ಹೆಚ್ಚು ಅಧಿಕೃತ ಯೋಗ ಶಾಲೆಗಳಿದ್ದು, ಚೀನಾ ಮತ್ತೊಂದು ಯೋಗ ಮಹಾಶಕ್ತಿಯಾಗಿ ಪರಿವರ್ತನೆಗೊಳ್ಳುತ್ತಿದೆ

* ಸಮರ ಕಲೆಗಳು, ಕಿಗಾಂಗ್ ಮತ್ತು ತೈ ಚಿ ಸೇರಿದಂತೆ ವಿವಿಧ ದೈಹಿಕ ಹಾಗೂ ಮಾನಸಿಕ ಶಕ್ತಿ ನೀಡುವ ಕಲೆಗಳು ಚೀನಾದಲ್ಲಿ ಇದ್ದರೂ, ಇವೆಲ್ಲವುಗಳ ಜತೆ ಯೋಗ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ

* ಜೂನ್ 21ನೇ ತಾರೀಖನ್ನು ಅಂತರರಾಷ್ಟ್ರಿಯ ಯೋಗ ದಿನ ಎಂದು 2015ರಲ್ಲಿ ವಿಶ್ವಸಂಸ್ಥೆ ಘೋಷಿಸಿದ ಬಳಿಕ ಯೋಗಕ್ಕೆ ಮತ್ತಷ್ಟು ಬಲ ಸಿಕ್ಕಿತು

* 2015ರಲ್ಲಿ ಯೋಗಕ್ಕೆಂದೇ ಮೀಸಲಾದ ಮೊದಲ ‘ಭಾರತ-ಚೀನಾ ಯೋಗ ಕಾಲೇಜು’ (ಐಸಿವೈಸಿ) ಶುರುವಾಯಿತು. ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಇದಕ್ಕಾಗಿ ಒಪ್ಪಂದ ಏರ್ಪಟ್ಟಿತ್ತು

* ಐದು ವರ್ಷಗಳಲ್ಲಿ ಚೀನಾದ ಮಧ್ಯಮವರ್ಗದ ಜನರು ಯೋಗಕ್ಕೆ ಹೆಚ್ಚು ಮನಸೋತಿದ್ದಾರೆ. ಶಾಂಘೈ, ಬೀಜಿಂಗ್, ಇತರೆ ಪ್ರಮುಖ ನಗರಗಳಲ್ಲಿ ‘ಯೋಗ ಸ್ಟುಡಿಯೊ’ಗಳು ಬೃಹದಾಕಾರವಾಗಿ ತಲೆ ಎತ್ತಿವೆ

* ಯೋಗ ಅಭ್ಯಾಸ ಮಾಡುವವರ ಪೈಕಿ ಮಹಿಳೆಯರು ಅಧಿಕ. 25–40 ವರ್ಷ ವಯೋಮಾನದವರು ಹೆಚ್ಚು. ಬಹುತೇಕರು ದೊಡ್ಡ ಪಟ್ಟಣಗಳಿಗೆ ಸೇರಿದವರು ಎಂದು ‘ಚೀನಾದ ಯೋಗ ಉದ್ಯಮ ಅಭಿವೃದ್ಧಿ ವರದಿ’ ತಿಳಿಸುತ್ತದೆ

* ಸ್ಥಳೀಯ ಸರ್ಕಾರಗಳು ಚೀನಾ-ಭಾರತ ಯೋಗ ಸಮ್ಮೇಳನಗಳನ್ನು ಪ್ರಾಯೋಜಿಸುತ್ತವೆ. ಜನರಿಗಾಗಿ ಯೋಗ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ

* ಬಡತನದಿಂದ ಕೂಡಿದ ಚೀನಾದ ಪಶ್ಚಿಮ ಪ್ರಾಂತ್ಯಗಳು ಮತ್ತು ಸ್ವಾಯತ್ತ ಪ್ರದೇಶಗಳಾದ ಟಿಬೆಟ್, ಕ್ಸಿನ್‌ಜಿಯಾಂಗ್ ಮತ್ತು ಕಿಂಗ್‌ಹೈಗಳಲ್ಲಿ ಇದರ ಪ್ರಭಾವ ಕಡಿಮೆ

* ಪ್ರಪಂಚದಾದ್ಯಂತ ‘ಯೋಗ’ ವ್ಯಾಪಾರೀಕರಣ ಆಗುತ್ತಿರುವ ಬಗ್ಗೆ ಬಹಳ ಹಿಂದಿನಿಂದಲೂ ತಜ್ಞರು ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಚೀನಾ ಇದಕ್ಕೆ ಹೊರತಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT