ಏನಿದು e-ಸಿಗರೇಟ್? ಇದನ್ನು ಬಳಸುವ ಮುನ್ನ ಎಚ್ಚರವಹಿಸಿ..

ತಂಬಾಕು ಬಳಕೆಯಲ್ಲಿ ಅತ್ಯಂತ ಸಾಮಾನ್ಯವಾದ ವಸ್ತುವೆಂದರೆ ಅದು ಸಿಗರೇಟ್, ಬೀಡಿ, ಹುಕ್ಕಾ ಮುಂತಾದವುಗಳು. ಅವುಗಳು ಹೊಗೆಯನ್ನು ಹೊರಹಾಕಬಲ್ಲದಾಗಿದ್ದು ಅದರಲ್ಲಿನ 400 ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಕಾರಕ ಎಂದು ದೃಢಪಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾರುಹೋಗಿರುವುದು e-ಸಿಗರೇಟ್ಗಳ ಹಿಂದೆ.
ಏನಿದು e-ಸಿಗರೇಟ್?
e- ಸಿಗರೇಟ್ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, e-ಸಿಗಾರ್, e- ಪೈಪ್ ಎಂಬ ಹೆಸರಿನಲ್ಲಿ ಕರೆಯಬಹುದಾಗಿದೆ. ಈ ಸಾಧನಗಳು e- ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್ಗಳನ್ನು ಉತ್ಪತ್ತಿಮಾಡಬಹುದಾಗಿದೆ. ಎ-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕುವಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ. ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
ಈ ಸಾಧನಗಳು ಶಾಖವನ್ನು ಉತ್ಪತ್ತಿ ಮಾಡಿ e-ದ್ರವವನ್ನು ಬಿಸಿ ಮಾಡುವುದರಿಂದ ಏರಸಾಲ್ ಉತ್ಪತ್ತಿಯಾಗುತ್ತದೆ. ಈ ಸಾಧನಗಳು ಎಲೆಕ್ಟ್ರಾನಿಕ್ ನಿಕೋಟಿನ್ ಉತ್ಪಾದನೆಯಾಗುತ್ತದೆ. ಈ ಸಾಧನಗಳನ್ನು ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಎಂದು ಕರೆಯಲಾಗುತ್ತದೆ.
ಈ ಸಾಧನಗಳ ಆಕಾರವನ್ನು ಸಾಧಾರಣವಾದ ಸಿಗರೇಟ್ , ಸಿಗಾರ್, ಪೈಪ್ ಗಳ ರೂಪದಲ್ಲಿ ಉತ್ಪಾದಿಸಲ್ಪಡುತ್ತದೆ. ಕೆಲವು ಯು.ಎಸ್.ಬಿ ಫ್ಲ್ಯಾಶ್ ಡ್ರೈವ್ಗಳನ್ನೂ ಸಹ ಹೋಲುವುದುಂಟು.
ಈ ಸಿಗರೇಟ್ ಗಳು ಸಾಧಾರಣ ಸಿಗರೇಟ್ಗಳಿಗಿಂತ ಭಿನ್ನವಾಗಿದ್ದು ಸಾಧಾರಣವಾಗಿ ಸಾಮಾನ್ಯವಾದ ಸಿಗರೇಟ್ಗಳಲ್ಲಿ ತಂಬಾಕನ್ನು ಸುಡುವುದರಿಂದ ಹೊರಹೊಮ್ಮುವ ಹಾನಿಕಾರಕವಾದ ಹೊಗೆಯಿಂದ ಕೂಡಿರುವುದಿಲ್ಲವಾದರೂ ಸಹ ನಿಕೋಟಿನ್ ಅಂಶವಿರುವುದರಿಂದ ಚಟ/ವ್ಯಸನಕ್ಕೆ ಎಡೆಮಾಡಬಹುದಾಗಿರುತ್ತದೆ. ಯಾವುದೇ ವಸ್ತುವಾದರೂ ಸಹ ಅದು ಚಟ/ವ್ಯಸನಕ್ಕೆ ವ್ಯಕ್ತಿಯನ್ನು ತಳ್ಳುವುದಾದರೆ ಅದನ್ನು ಆರೋಗ್ಯಕ್ಕೆ ಮಾರಕ ಎಂದೇ ಪರಿಗಣಿಸಬೇಕಾಗುತ್ತದೆ.
ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುವುದರಿಂದ e-ಸಿಗರೇಟ್ ಬಳಸುವ ಮುನ್ನ ಯುವಜನತೆ ಯೋಚಿಸಬೇಕಾಗಿದೆ.
E-ದ್ರವದಲ್ಲಿ ದಹಿಸುವಂತಹ ಗುಣವಿರುವುದರಿಂದ ಆಕ್ಸಿಜನ್ ಟ್ಯಾಂಕ್ಗಳ ಬಳಿ, ಗ್ಯಾಸ್ ಪಂಪ್ಗಳ ಬಳಿ ಉಪಯೋಗಿಸುವುದರಿಂದ ಬೆಂಕಿ ಹತ್ತಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ವಾಹನಗಳಲ್ಲಿ ಚಲಿಸುವಾಗ ಉಪಯೋಗ ಮಾಡುವುದರಿಂದ ರೋಗಗ್ರಸ್ಥ/ ಮೂರ್ಛೆ/SIEZURES ಆಗುವ ಸಂಭವ ಹೆಚ್ಚಿರುತ್ತದೆ.
ತಂಬಾಕು ಸಂಬಂಧಿತ ಸಿಗರೇಟ್, ಬೀಡಿ, ಚುಟ್ಟಾ ಅಥವಾ ಹುಕ್ಕಾ ಇರಬಹುದು ಅಥವ e-ಸಿಗರೇಟ್ಗಳಲ್ಲಿನ ನಿಕೋಟಿನ್ ಅಂಶವು ಮಿದುಳಿನಲ್ಲಿ ಡೋಪಮಿನ್ ಎಂಬ ಕ್ಷಣಿಕ ಆಹ್ಲಾದ ನೀಡುವ ಹಾರ್ಮೋನ್ಗಳನ್ನು ಸ್ರವಿಸಬಹುದಾಗಿದ್ದು ವ್ಯಕ್ತಿಯನ್ನು ಮತ್ತೆ ಮತ್ತೆ ಆ ಕ್ಷಣಿಕವಾದ ಆಹ್ಲಾದವನ್ನು ಪಡೆಯಯುವ ದಾಹವನ್ನು ಸೃಷ್ಠಿಸುತ್ತದೆ. ಇದರಿಂದ ವ್ಯಕ್ತಿ ವ್ಯಸನಿಯಾಗಲು ಕಾರಣವಾಗುತ್ತದೆ. ದೀರ್ಘಕಾಲ ಈ ದುಶ್ಚಟದಿಂದ ಆರೋಗ್ಯಕ್ಕೆ ಹಾನಿಕರವಲ್ಲದೆ ಉಪಯೋಗವಿಲ್ಲವೆಂಬುದನ್ನು ಯುವ ಜನತೆ ಮನಗೊಳ್ಳಬೇಕಾಗಿದೆ.
–ಲೇಖನ
ಡಾ. ಸ್ಮಿತಾ ಜೆ.ಡಿ
ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.