ಮಧುಮೇಹದಿಂದಾಗಿ ಪ್ರಪಂಚದಾದ್ಯಂತ ದೇಹದ ಅಂಗವನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಕಾಲನ್ನೇ ಕಳೆದುಕೊಳ್ಳುತ್ತಾರೆ. ಕಾಲಿನಲ್ಲಿ ಉಂಟಾಗುವ ಹುಣ್ಣಿನಿಂದಾಗಿ ಈ ಕ್ರಮಕೈಗೊಳ್ಳಲಾಗುತ್ತದೆ. ಕಾಲಿಗೆ ಹುಣ್ಣಾಗದಂತೆ ಕಾಯ್ದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲುಗಳ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ರಾಷ್ಟ್ರೀಯ ರಕ್ತನಾಳ ರೋಗ ಜಾಗೃತಿ ದಿನದ ನೆನಪಿಗಾಗಿ ಸಿಎಂಐ ಆಸ್ಪತ್ರೆಯು ಡಯಾಬಿಟಿಕ್ ಫೂಟ್‌ಕೇರ್ ಕ್ಲಿನಿಕ್ (ಡಿಎಫ್‌ಸಿ) ಅನ್ನು ಉದ್ಘಾಟಿಸಿದೆ.
'ಭಾರತದಲ್ಲಿ ಮಧುಮೇಹದಿಂದ ಇಅಂಗಚ್ಛೇದನಗಳಿಗೆ ಕಾರಣವಾಗುತ್ತಿದೆ. ಡಯಾಬಿಟಿಕ್ ಪಾದದ ಹುಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಡಯಾಬಿಟಿಕ್ ಫೂಟ್‌ಕೇರ್ ಕ್ಲಿನಿಕ್ ಮಹತ್ವದ ಬೆಳವಣಿಗೆಯಾಗಿದೆ. ಸುಧಾರಿತ ತಂತ್ರಜ್ಞಾನವನ್ನು ತಜ್ಞರ ಮೇಲ್ವಿಚಾರಣೆಯೊಂದಿಗೆ ಮಧುಮೇಹಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಮಧುಮೇಹ–ಸಂಬಂಧಿತ ಅಂಗಚ್ಛೇದನ- ಮುಕ್ತ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ’ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ರಕ್ತನಾಳ ಮತ್ತು ಎಂಡೋವಾಸ್ಕುಲರ್ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹಾತಜ್ಞ ಡಾ. ಕೃಷ್ಣ ಚೈತನ್ಯ ಹೇಳಿದ್ದಾರೆ.
ಮಧುಮೇಹ ಪೀಡಿತ ಪಾದದ ಆರೈಕೆ ಮಾಡುವ ಸಾಂಪ್ರದಾಯಿಕ ವಿಧಾನಗಳಲ್ಲಿ ಹಲವಾರು ಇತಿಮಿತಿಗಳಿವೆ. ಇದರಿಂದ ಸಾಮಾನ್ಯವಾಗಿ ಅತ್ಯುತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಕೃತಕ ಬುದ್ಧಿಮತ್ತೆ ಮತ್ತು 3ಡಿ ಸಿಎಡಿ ಅನ್ನು ಸದುಪಯೋಗಪಡಿಸಿ, ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಹಾಗೂ ರೋಗಿ-ಕೇಂದ್ರಿತ ಪರಿಹಾರವನ್ನು ನೀಡುವ ಮೂಲಕ ಈ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಗುರಿ ಈ ಕ್ಲಿನಿಕ್ ಹೊಂದಿದೆ.
ರೋಗಿಗಳ ಪಾದಗಳನ್ನು ನಿಖರವಾಗಿ ಸ್ಕ್ಯಾನ್ ಮಾಡುವ ಹಾಗೂ ಎಐ ಲೆಕ್ಕಪದ್ಧತಿಯಲ್ಲಿ ಮಾಹಿತಿಯನ್ನು ವಿಶ್ಲೇಷಿಸಿ, ಕ್ಲಿನಿಕ್ ಅಗತ್ಯಕ್ಕೆ ಅನುಸಾರವಾಗಿ ಪಾದರಕ್ಷೆಗಳನ್ನು ರಚಿಸುತ್ತದೆ. ಅದು ದುರ್ಬಲ ಪ್ರದೇಶಗಳಿಗೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಹುಣ್ಣಾಗುವುದನ್ನು ತಡೆಯುತ್ತದೆ. ಬೇಗ ಗುಣವಾಗಲು ಕಾರಣವಾಗುತ್ತದೆ. ಈ ವಿಧಾನ ಅಂಗಚ್ಛೇದನದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಗಾಯದ ನಿರ್ವಹಣೆ, ರಕ್ತನಾಳದ ಮೌಲ್ಯಮಾಪನ ಮತ್ತು ರೋಗಿಗಳಿಗೆ ಶಿಕ್ಷಣ ಸೇರಿದಂತೆ ಸಮಗ್ರ ಮಧುಮೇಹ ಪೀಡಿತ ಪಾದದ ಆರೈಕೆ ಸೇವೆಗಳನ್ನೂ ನೀಡುತ್ತದೆ.
ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್‌ಕೇರ್ ಇಂಡಿಯಾದ ಸಿಇಒ ಡಾ. ನಿತೀಶ್ ಶೆಟ್ಟಿ, "ಡಯಾಬಿಟಿಕ್ ಫೂಟ್‌ಕೇರ್ ಕ್ಲಿನಿಕ್ ಮಹತ್ವದ ಮೈಲಿಗಲ್ಲಾಗಿದೆ. ಮಧುಮೇಹ ಪೀಡಿತ ಕಾಲು ಸಮಸ್ಯೆಯ ನಿರ್ವಹಣೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿದ್ದೇವೆ ಮತ್ತು ಭಾರತದಲ್ಲಿ ರೋಗದ ವ್ಯಾಪಕ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದ ಮೇಲೆ ನಮ್ಮ ಕಾರ್ಯತಂತ್ರದಲ್ಲಿ ಹೆಚ್ಚಿನ ಗಮನಹರಿಸಿದ್ದೇವೆ. ಈ ಕ್ಲಿನಿಕ್ ಮಧುಮೇಹ ಪೀಡಿತ ಕಾಲುಗಳ ಆರೈಕೆಯಲ್ಲಿ ನಮ್ಮ ಆರೋಗ್ಯ ರಕ್ಷಣೆಯ ಗುಣಮಟ್ಟ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಹೇಳಿದರು.
’ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ನಮ್ಮದು. ಮಧುಮೇಹ ನಮ್ಮ ಓಡಾಟ ಅಥವಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಸುರಕ್ಷಿತ ಮತ್ತು ಸುಖಕರ ಭವಿಷ್ಯವನ್ನು ಸೃಷ್ಟಿಸುವುದು ಇದರ ಉದ್ದೇಶ’ ಎಂದು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳ ಸಿಇಒ ಎಸ್.ರಮೇಶ್ ಕುಮಾರ್ ಹೇಳಿದರು.
ಕೃತಕ ಬುದ್ಧಿಮತ್ತೆ(ಎಐ)ಯಂತಹ ಅತ್ಯಾಧುನಿಕ ಸಾಧನಗಳನ್ನು, ಸಹಾನುಭೂತಿಯ ಆರೈಕೆಯೊಂದಿಗೆ ಸಂಯೋಜಿಸುತ್ತದೆ. ನೈತಿಕತೆಯೊಂದಿಗೆ ವೈಯಕ್ತಿಕ ಪರಿಹಾರಗಳನ್ನು ಕಂಡುಕೊಂಡು ಭವಿಷ್ಯವನ್ನು ರೂಪಿಸಲಾಗುತ್ತಿದೆ. ಪ್ರತಿ ಹೊಸತರಲ್ಲಿ ನಂಬಿಕೆ, ರೋಗಿಗಳಿಗೆ ಮೊದಲು ಸೇವೆ ಸಲ್ಲಿಸಲು ಸಾಧ್ಯವಾಗುವ ಪ್ರಗತಿಯಲ್ಲಿ ಭರವಸೆ ಮೂಡಿಸುವ ಉದ್ದೇಶವನ್ನು ಆಸ್ಟರ್ ಸಿಎಂಐ ಆಸ್ಪತ್ರೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.