ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ: ಬೇವು–ಬೆಲ್ಲದ ‘ಔಷಧ’ ಗುಣ

Last Updated 1 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಸಂಕ್ರಾಂತಿ ಹಬ್ಬದಂದು ‘ಎಳ್ಳು– ಬೆಲ್ಲ’, ಯುಗಾದಿ ಹಬ್ಬಕ್ಕೆ ‘ಬೇವು–ಬೆಲ್ಲ’ ಸವಿಯುವ ಸಂಪ್ರದಾಯವಿದೆ. ಚೈತ್ರ ಮಾಸದ ಮೊದಲನೆಯ ದಿನ ಬರುವ ಈ ಹಬ್ಬದಂದು ಜನರುಬೇವು ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಸೇವಿಸುತ್ತಾರೆ; ಸಂತೋಷ ಮತ್ತು ದುಃಖವನ್ನು ವರ್ಷವಿಡೀ ಸಮಾನವಾಗಿ ಸ್ವೀಕರಿಸಬೇಕೆಂಬ ಸಂಕೇತವಾಗಿ.

ಯುಗಾದಿ ಹಬ್ಬದಲ್ಲಿ ಬೇವು–ಬೆಲ್ಲ ಸೇವಿಸುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಇದರ ಹಿಂದೆ ಆರೋಗ್ಯ ವಿಜ್ಞಾನವೂ ಅಡಗಿದೆ.

ಬೇವು ರುಚಿಯಲ್ಲಿ ಕಹಿ. ದೇಹದಲ್ಲಿರುವ ಕಫ ಕರಗಿಸುವ ಗುಣ ಹೊಂದಿದೆ. ಮಾತ್ರವಲ್ಲ, ದೇಹವನ್ನು ತಂಪಾಗಿಸುತ್ತದೆ. ಬೆಲ್ಲ, ರುಚಿಯಲ್ಲಿ ಸಿಹಿ. ಬಿಸಿಯಾಗಿರುವ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ವಸಂತ ಋತುವಿನಲ್ಲಿ ಯುಗಾದಿ ಹಬ್ಬ ಬರುತ್ತದೆ. ಈ ವೇಳೆ ತಾಪಮಾನ ತೀವ್ರವಾಗಿದ್ದು, ದೇಹವೂ ಬಿಸಿಯಾಗುತ್ತಿರುತ್ತದೆ. ಬಿಸಿಯಾದ ದೇಹವನ್ನು ಬೇವು–ಬೆಲ್ಲದ ಮಿಶ್ರಣ ತಂಪಾಗಿಸುತ್ತವೆ.

ಯುಗಾದಿ ಹಬ್ಬದಲ್ಲಿ ಬೇವಿನ ಕುಡಿ ಮತ್ತು ಹೂವುಗಳನ್ನು ಸೇವಿಸುವ ಅಭ್ಯಾಸವಿದೆ. ಈ ಎಲೆ ಮತ್ತು ಹೂವುಗಳ ಸೇವನೆಯಿಂದ ಕಫ ಪಿತ್ತ ಕಡಿಮೆಯಾಗುತ್ತದೆ. ಹಸಿವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಜಂತು ಹುಳುಗಳು ನಾಶವಾಗುತ್ತವೆ.

ಬೆಲ್ಲ, ದೇಹದಲ್ಲಿನ ವಾತ ಪಿತ್ತವನ್ನು ಶಮನ ಮಾಡುತ್ತದೆ. ಅಷ್ಟೇ ಅಲ್ಲ, ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್ ರೂಪದಲ್ಲಿ ಮಹಿಳೆಯರನ್ನು ಪೋಷಿಸುತ್ತ, ರಕ್ತಹೀನತೆ, ಆಯಾಸ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

ಬೇಸಿಗೆಯಲ್ಲಿ ಬೆವರಿನಿಂದ ಉಂಟಾಗುವ ಪೋಷಕಾಂಶಗಳ ಕೊರತೆಯನ್ನೂ ಬೆಲ್ಲವು ನೀಗಿಸುತ್ತದೆ.

ಈ ಕಾರಣಗಳಿಗಾಗಿ ಯುಗಾದಿ ಸಮಯದಲ್ಲಿ ಸವಿಯುವ ಬೇವು ಮತ್ತು ಬೆಲ್ಲದ ಮಿಶ್ರಣ ವಾತ, ಪಿತ್ತ, ಕಫ ಮೂರು ದೋಷಗಳನ್ನೂ ಶಮನಗೊಳಿಸುತ್ತದೆ.

ಇದು ಹಬ್ಬದ ನೆಪದಲ್ಲಿ ಸೇವಿಸುವ ಆಹಾರವಾಗಿದ್ದರೂ, ಆರೋಗ್ಯದ ವಿಷಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧವೂ ಆಗಿದೆ. ನಮ್ಮ ಪೂರ್ವಜರು ಅನುಸರಿಸಿದ ಸಂಪ್ರದಾಯವು ಕೇವಲ ಸಂಪ್ರದಾಯವಾಗದೆ, ಮಹಿಳೆಯರ ಆರೋಗ್ಯ ರಕ್ಷಾ ಕವಚವೂ ಆಗಿದೆ.

(ಲೇಖಕಿ ಆಯುರ್ವೇದ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT