ಹೊಸ ವರ್ಷಾಚರಣೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ. 2026 ಅನ್ನು ಬರಮಾಡಿಕೊಳ್ಳಲು ಯುವ ಸಮುದಾಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ವರ್ಷದ ಸಂಭ್ರಮದಲ್ಲಿ ಅನೇಕರು ಮೊದಲ ಬಾರಿ ಮದ್ಯ ಸೇವಿಸುವ ಯೋಜನೆ ಕೂಡ ಮಾಡಿಕೊಂಡಿರುತ್ತಾರೆ. ಹೀಗೆ, ಮೊದಲ ಬಾರಿ ಮದ್ಯ ಸೇವನೆ ಮಾಡುವವರು ನಾವು ನೀಡುವ ಕೆಲವು ಮಹತ್ವದ ಸಲಹೆಗಳನ್ನು ಪಾಲಿಸುವುದು ಮುಖ್ಯ.

ಮಹತ್ವದ ಸಲಹೆಗಳು

ಆತಂಕ ಬಿಟ್ಟುಬಿಡಿ: ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳುವ ಮುನ್ನ, ನನಗೆ ಏನಾದರೂ ಆಗಿಬಿಡಬಹುದು. ಅನಾಹುತಗಳು ಸಂಭವಿಸಬಹುದು ಎನ್ನುವು ಆತಂಕದಿಂದ ಹೊರಬಂದು ಮನಸ್ಥಿತಿಯನ್ನು ಬಲಪಡಿಸಿಕಳ್ಳುವುದು ಮುಖ್ಯ. ಯಾವುದೇ ಆತಂಕ ಇಲ್ಲದೆ ಪಾರ್ಟಿಗೆ ಹೋಗುವುದು ಉತ್ತಮ.

ಖಾಲಿ ಹೊಟ್ಟೆಯಲ್ಲಿ ಮದ್ಯಪಾನ: ನೀವೇನಾದರು ಮೊದಲ ಬಾರಿ ಮದ್ಯ ಸೇವನೆ ಮಾಡುವ ಯೋಜನೆಯಲ್ಲಿದ್ದರೆ, ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಮದ್ಯ ಸೇವಿಸಬೇಡಿ. ಹಾಗಂತ ಕರಿದ ಪದಾರ್ಥಗಳು, ಹೆಚ್ಚಾಗುವಷ್ಟು ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ಮದ್ಯ ಸೇವನೆಗೆ ಮೊದಲು ಹಣ್ಣು, ಸಲಾಡ್, ಜ್ಯೂಸ್ನಂತ ಪದಾರ್ಥಗಳನ್ನು ಸೇವಿಸುವುದು ಉತ್ತಮ.

ಯಾವ ರೀತಿಯ ಮದ್ಯ ಉತ್ತಮ: ಮೊದಲ ಬಾರಿಗೆ ಮದ್ಯ ಸೇವನೆ ಮಾಡುವವರು ಯಾವುದೇ ಕಾರಣಕ್ಕೂ ಮತ್ತೇರಿಸುವ ಅಥವಾ ಅಧಿಕ ಆಲ್ಕೋಹಾಲ್ ಪ್ರಮಾಣ ಹೊಂದಿರುವ (ವಿಸ್ಕಿ, ಬ್ರಾಂಡಿ, ಜಿನ್) ಮದ್ಯದ ಸೇವನೆಯಿಂದ ದೂರ ಇರುವುದು ಉತ್ತಮ. ವಿಶೇಷವಾಗಿ ಬಿಯರ್ (ಪಿಂಟು ಉತ್ತಮ), ವೈನ್ (60 ರಿಂದ 100 ಮಿ.ಲೀ ಒಳಗಿನದ್ದು) ಹಾಗೂ ಮಾಕ್ಟೆಲ್ ನಂತಹ ಕಡಿಮೆ ಆಲ್ಕೋಹಾಲ್ ಪ್ರಮಾಣ ಹೊಂದಿರುವ ಮದ್ಯ ಸೇವನೆ ಉತ್ತಮ.

ಒತ್ತಾಯಕ್ಕೆ ಒಳಗಾಗದಿರಿ: ಪಾರ್ಟಿ ಅಂದಮೇಲೆ ಸ್ನೇಹಿತರು ಜೊತೆಗಿರುವುದು ಸಹಜ. ಆದರೆ, ಸ್ನೇಹಿತರು ಒತ್ತಾಯ ಮಾಡುತ್ತಾರೆ ಎಂಬ ಕಾರಣಕ್ಕೆ, ನಿಮ್ಮ ಸಾಮರ್ಥ್ಯ ಮೀರಿ ಮದ್ಯ ಸೇವನೆ ಮಾಡಿದರೆ ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ.

ಬೇಗ ಮುಗಿಸಿ ಮನೆಗೆ ಹೋಗಿ: ಹೊಸ ವರ್ಷದ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದಾಗ, ತಡರಾತ್ರಿಯವರೆಗೆ ಮನೆಗೆ ಹೋಗದೆ ಕಂಠಪೂರ್ತಿ ಮದ್ಯ ಸೇವನೆ ಮಾಡುವುದನ್ನು ತಪ್ಪಿಸಿ. ನಿಯಮಿತವಾಗಿ ಮದ್ಯ ಸೇವಿಸಿ ಬೇಗ ಮನೆಗೆ ಸೇರಿಕೊಳ್ಳುವುದು ಉತ್ತಮ.

ಕುಡಿದು ವಾಹನ ಸಂಚಾರ: ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿದ ಬಳಿಕ ವಾಹನ ಸಂಚಾರ ಮಾಡಬೇಡಿ. ಇದು ಕಾನೂನಿಗೂ ವಿರುದ್ಧ. ನೀವು ಕುಡಿದ ಬಳಿಕ ಸಮೀಪದಲ್ಲೇ ಇರುವ ಸ್ನೇಹಿತರ ಮನೆ, ಹೋಟೆಲ್ನಲ್ಲಿ ವಾಸ್ತವ್ಯ ಹೂಡುವುದು ಉತ್ತಮ ಅಥವಾ ಕ್ಯಾಬ್, ಟ್ಯಾಕ್ಸಿ ಬಳಸಿ ಮನೆಗೆ ತೆರಳುವುದು ಉತ್ತಮ.
.ಮದ್ಯಪಾನ ನಿಷೇಧಕ್ಕೆ ಕ್ರಮ ವಹಿಸಿ: ಡಾ.ಪ್ರಕಾಶ್ ಭಟ್ .ಹೊಸ ವರ್ಷ: ಜವಾಬ್ದಾರಿಯುತವಾಗಿ ಆಚರಿಸಿ– ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅಭಿಯಾನ.
ಕುಡಿತದ ಜೊತೆಗೆ ಉತ್ತಮ ಸ್ನ್ಯಾಕ್ಸ್ ಆಯ್ಕೆ ಮುಖ್ಯ: ಮೊದಲ ಬಾರಿಗೆ ಮದ್ಯಪಾನ ಮಾಡುವವರು ಕರಿದ ಪದಾರ್ಥಗಳು, ಉಪ್ಪಿನಕಾಯಿ, ಅಧಿಕ ಕಾರ ಇರುವ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು. ಮದ್ಯ ಸೇವಿಸುವಾಗ ಮಧ್ಯೆ ಮಧ್ಯೆ ನೀರನ್ನು ಕುಡಿಯುವುದು ಉತ್ತಮ. ಸಾಧ್ಯವಾದಷ್ಟು ಹಣ್ಣು, ತರಕಾರಿಗಳನ್ನು ಸೇವಿಸಿ.

ತಂಬಾಕು, ಸಿಗರೇಟ್ನಿಂದ ದೂರವಿರಿ: ಮದ್ಯ ಸೇವನೆಯ ಜೊತೆಗೆ ತಂಬಾಕು ಪದಾರ್ಥಗಳು ಹಾಗೂ ಸಿಗರೇಟ್ ಸೇವನೆ ಮಾಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ, ಕಿಕ್ ಹೆಚ್ಚಾಗಿ ತಲೆ ಸುತ್ತುವುದು. ಉಸಿರಾಟದ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಕುಡಿತ ಸಾಮರ್ಥ್ಯದ ಪ್ರದರ್ಶನವಾಗದಿರಲಿ: ಮೊದಲ ಬಾರಿ ಮದ್ಯ ಸೇವಿಸುವಾಗ ಸ್ನೇಹಿತರುಗಳು ಇನ್ನೂ ಸ್ವಲ್ಪ ಕುಡಿಯುವಂತೆ ಒತ್ತಾಯ ಮಾಡುವುದು. ನಿನ್ನ ಸಾಮರ್ಥ್ಯ ಇಷ್ಟೇ ಎಂದು ಛೇಡಿಸುತ್ತಾರೆ. ಆದರೆ, ಅದಕ್ಕೆ ಕಿವಿಕೊಡದೆ, ನಿಮ್ಮ ಸಾಮರ್ಥ್ಯ ಎಷ್ಟು ಎಂಬುದನ್ನು ಅರಿತು ಸೇವಿಸುವುದು ಉತ್ತಮ.

ಮದ್ಯ ಮಿಕ್ಸ್ ಮಾಡದಿರಿ: ಮದ್ಯ ಸೇವನೆ ಮಾಡುವಾಗ ಬಿಯರ್, ವೈನ್, ವಿಸ್ಕಿ, ವೊಡ್ಕಾ ಹೀಗೆ ಬೇರೆ ಬೇರೆ ಬಗೆಯ ಮದ್ಯಗಳನ್ನು ಮಿಶ್ರಣ ಮಾಡಿ ಕುಡಿಯಲೇಬೇಡಿ. ಒಂದುವೇಳೆ ಹಾಗೆ ಕುಡಿದರೆ, ನಿಮ್ಮ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.

ಕೌಟುಂಬಿಕ ವಾತಾವರಣ: ಹೊಸ ವರ್ಷದ ಸಂಭ್ರಮವನ್ನು ಸ್ನೇಹಿತರ ಜೊತೆ ತೆರಳಿ ಸಂಭ್ರಮಿಸುವುದರ ಬದಲು, ಸಾಧ್ಯವಾದಷ್ಟು ಕುಟುಂಬ ಸದಸ್ಯರ ಜೊತೆ ಬೆರೆತು ಸಂಭ್ರಮಿಸುವುದು ಉತ್ತಮ.

(ವಿಶೇಷ ಸೂಚನೆ: ಇದು ಮದ್ಯಪಾನ ಉತ್ತೇಜಿಸಲು ಬರೆದ ಲೇಖನವಾಗಿರುವುದಿಲ್ಲ. ಬದಲಾಗಿ, ಮಾಹಿತಿಗಾಗಿ ಬರೆದಿರುವ ಲೇಖನ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.