ಬೆಂಗಳೂರಿನಲ್ಲಿ ಪಾರಿವಾಳಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ. ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) 270, 271 ಮತ್ತು 271ರಂತೆ ಪ್ರಕರಣ ದಾಖಲಿಸಿ, ದಂಡ ಹಾಕುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಅಷ್ಟಕ್ಕೂ ಇಷ್ಟು ಕಟ್ಟುನಿಟ್ಟಾದ ಕ್ರಮಕೈಗೊಳ್ಳಲು ಕಾರಣವೇನು? ಹಾಗಾದರೆ, ನಿಜಕ್ಕೂ ಪರಿವಾಳದ ಹಿಕ್ಕೆಯಿಂದ ಯಾವೆಲ್ಲ ಕಾಯಿಲೆಗಳು ಹರಡಲಿವೆ ಎಂಬುದನ್ನು ತಿಳಿಯೋಣ.

ಬೆಂಗಳೂರಿನಲ್ಲಿ ಸೆನ್ಸಿಟಿವಿಟಿ ನ್ಯುಮೋನಿಟಿಸ್ ಪ್ರಕರಣಗಳು 5 ಪಟ್ಟು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ನಗರದಲ್ಲಿ ವೇಗವಾಗಿ ಹೆಚ್ಚುತ್ತಿರುವ ಪಾರಿವಾಳಗಳ ಸಂಖ್ಯೆಯೆ ನೇರ ಕಾರಣವಾಗಿರುವುದು ಕಂಡುಬಂದಿದೆ. ಇದು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ. 2000 ರಿಂದ 2023ರ ನಡುವೆ ಭಾರತದಲ್ಲಿ ಪಾರಿವಾಳಗಳ ಸಂಖ್ಯೆ ಶೇ 150 ಪಟ್ಟು ಹೆಚ್ಚಾಗಿದೆ. ಪಾರಿವಾಳಗಳು ಪಕ್ಷಿ ಜಾತಿಗಳಲ್ಲಿ ಅತಿ ಹೆಚ್ಚು ಏರಿಕೆ ಕಂಡ ಪಕ್ಷಿಯಾಗಿದೆ. ಪಾರಿವಾಳಗಳ ಹಿಕ್ಕೆಯಿಂದ ಉಂಟಾಗುವ ಶ್ವಾಸಕೋಶ ಸೋಂಕಿನ ಪ್ರಕರಣಗಳು ಶೇ 30 ರಷ್ಟು ಹೆಚ್ಚಾಗಿವೆ ಎಂದು ವರದಿಗಳು ಹೇಳುತ್ತವೆ.
.ಹುಬ್ಬಳ್ಳಿ | ಪಕ್ಷಿ ರಕ್ಷಣೆಗಿಲ್ಲ ಸೂಕ್ತ ವ್ಯವಸ್ಥೆ.ಬೆಂಗಳೂರು: ಪಾರಿವಾಳ ನಿಯಂತ್ರಣಕ್ಕೆ ಶಾಸಕ ಎಸ್.ಸುರೇಶ್ ಕುಮಾರ್ ಮನವಿ.
ಪರಿವಾಳಗಳು ಬಾಲ್ಕನಿ, ಮನೆಯ ಮೇಲ್ಛಾವಣಿ, ಕಿಟಕಿಯ ಅಂಚುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಿಕ್ಕೆ ಇಡುತ್ತವೆ. ಈ ಹಿಕ್ಕೆ ಒಣಗಿ, ಕಾಲಕ್ರಮೇಣ ಗಂಭೀರ ಆರೋಗ್ಯದ ಅಪಾಯಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದುತ್ತದೆ. ಇದು ವಿಶೇಷವಾಗಿ ಶ್ವಾಸಕೋಶ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಒಣಗಿದ ಹಿಕ್ಕೆಯಿಂದ ಸೂಕ್ಷ್ಮಾಣುಗಳು ಮತ್ತು ಶಿಲೀಂಧ್ರ ಬೀಜಾಣುಗಳು ಗಾಳಿಯಲ್ಲಿ ಹರಡಬಹುದು. ಇದು ತೀವ್ರ ಕಳವಳಕಾರಿ ವಿಷಯವಾಗಿದೆ.

ಇದರಿಂದ ಹರಡುವ ಶ್ವಾಸಕೋಶದ ಕಾಯಿಲೆಗಳು ಗುಣಮುಖವಾಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ನಗರ ಪ್ರದೇಶಗಳಲ್ಲಿ ಪಾರಿವಾಳಗಳೊಂದಿಗೆ ಜನರು ನಿರಂತರ ಸಂಪರ್ಕದಲ್ಲಿರುವುದರಿಂದ ಇವುಗಳ ಹಿಕ್ಕೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಕುರಿತು ಅರಿವು ಅತ್ಯಂತ ಅಗತ್ಯ.

ಪಾರಿವಾಳ ಹಿಕ್ಕೆಯಿಂದ ಉಂಟಾಗುವ ಸಾಮಾನ್ಯ ರೋಗ:

ಹಿಸ್ಟೋಪ್ಲಾಸ್ಮಾಸಿಸ್ ಎಂಬುದು ಹಿಸ್ಟೋ ಪ್ಲಾಸ್ಮಾ ಕ್ಯಾಪ್ಸುಲೇಟೆಡ್ ಎಂಬ ಶಿಲೀಂಧ್ರದಿಂದ ಉಂಟಾಗುವ ಸೋಂಕಾಗಿದೆ. ಇದು ಪಕ್ಷಿ ಅಥವಾ ಬಾವಲಿಗಳು ಮಾಡುವ ಹಿಕ್ಕೆ ಮಣ್ಣಿನೊಂದಿಗೆ ಸೇರುವುದರೊಂದಿಗೆ ಈ ಶೀಲಿಂಧ್ರ ಬೆಳೆಯುತ್ತದೆ. ಬಾಲ್ಕನಿಗಳು, ಹಳೆಯ ಕಟ್ಟಡಗಳು, ಸೇತುವೆಗಳು, ಗೋದಾಮುಗಳು ಮತ್ತು ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಈ ಶಿಲೀಂಧ್ರ ಸಾಮಾನ್ಯವಾಗಿ ಕಂಡುಬರುತ್ತದೆ. ನಗರಗಳಲ್ಲಿ ಪಾರಿವಾಳಗಳ ಹಿಕ್ಕೆಯ ನಿರಂತರ ಸಂಗ್ರಹಣೆಯಿಂದ ಈ ಶಿಲೀಂಧ್ರ ಬೆಳೆಯಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ.
.ಮೂರು ವರ್ಷದ ಬಾಲಕಿ ಜೀವಕ್ಕೆ ಕುತ್ತು ತಂದ ಪಾರಿವಾಳ ‘ಪ್ರೀತಿ’.
ಸೋಂಕು ಹೇಗೆ ಹರಡುತ್ತದೆ:

ಹಿಸ್ಟೋಪ್ಲಾಸ್ಮಾಸಿಸ್ ಪಾರಿವಾಳಗಳನ್ನು ನೇರವಾಗಿ ಮುಟ್ಟುವುದರಿಂದ ಹರಡುವುದಿಲ್ಲ. ಬದಲಾಗಿ ಒಣಗಿದ ಪಾರಿವಾಳಗಳ ಹಿಕ್ಕೆಯನ್ನು ಸ್ವಚ್ಛಗೊಳಿಸುವಾಗ, ಗಾಳಿ ಬೀಸುವಾಗ ಅಥವಾ ಕಟ್ಟಡ ನಿರ್ಮಾಣ ಕಾರ್ಯಗಳ ವೇಳೆ ಹಿಕ್ಕೆಯನ್ನು ಕೆದಕಿದಾಗ ಶಿಲೀಂಧ್ರದ ಸೂಕ್ಷ್ಮ ಬೀಜಾಣುಗಳು ಗಾಳಿಗೆ ಬಿಡುಗಡೆಯಾಗುತ್ತವೆ. ಅವು ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಪ್ರವೇಶಿಸಿ ಸೋಂಕು ಉಂಟು ಮಾಡುತ್ತವೆ.

ಇತರೆ ಅಪಾಯಕಾರಿ ರೋಗಗಳು:

ಅಧ್ಯಯನಗಳ ಪ್ರಕಾರ, ಪಾರಿವಾಳಗಳೊಂದಿಗೆ ನಿರಂತರವಾಗಿ ಒಡ್ಡಿಕೊಳ್ಳುವವರಿಗೆ ಶ್ವಾಸಕೋಶ ರೋಗಗಳ ಅಪಾಯವು ಶೇ 55ರಷ್ಟು ಹೆಚ್ಚಾಗಿರುತ್ತದೆ. ಪಾರಿವಾಳಗಳಿಗೆ ದಿನವೂ ಆಹಾರ ನೀಡುವ ಅಭ್ಯಾಸವಿದ್ದರೆ, ಸರಾಸರಿ ಕೇವಲ 1.6 ವರ್ಷಗಳಲ್ಲಿ ತೀವ್ರ ರೋಗಕ್ಕೆ ತುತ್ತಾಗಬಹುದು.

ಕ್ರಿಪ್ಟೋಕೊಕಸ್:

ಕ್ರಿಪ್ಟೋಕೊಕಸ್, ನಿಯೋಫಾರ್ಮನ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುವ ಸೋಂಕಾಗಿದೆ. ಇದು ಪಾರಿವಾಳ ಹಿಕ್ಕೆಯಲ್ಲಿ ಕಂಡುಬರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಹೆಚ್ಐವಿ, ಕ್ಯಾನ್ಸರ್ ರೋಗಿಗಳು ಅಥವಾ ದೀರ್ಘಕಾಲ ಸ್ಟೀರಾಯ್ಡ್ ಔಷಧ ಸೇವಿಸುವವರು ಹೆಚ್ಚು ಅಪಾಯದಲ್ಲಿರುತ್ತಾರೆ. ಈ ಸೋಂಕು ಶ್ವಾಸಕೋಶದಿಂದ ಮಿದುಳಿಗೆ ಹರಡಿ ಮೆನಿಂಜೈಟಿಸ್ ಉಂಟು ಮಾಡಬಹುದು.
.ಒಡಿಶಾದಲ್ಲಿ ಮತ್ತೊಂದು ಗೂಢಚಾರಿ ಪಾರಿವಾಳ ಪತ್ತೆ: ಪೊಲೀಸರಿಂದ ತನಿಖೆ.
ಬರ್ಡ್ ಫ್ಯಾನ್ಸಿಯರ್ಸ್ ಲಂಗ್:

ಇದು ಸೋಂಕಲ್ಲ, ಆದರೆ ಪಕ್ಷಿಗಳ ರೆಕ್ಕೆ, ಹಿಕ್ಕೆ ಅಥವಾ ಧೂಳಿನಲ್ಲಿರುವ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಸೇರಿ ದೀರ್ಘಕಾಲದ ಉರಿಯೂತ ಮತ್ತು ಶ್ವಾಸಕೋಶದ ಗಾಯಕ್ಕೆ ಕಾರಣವಾಗಬಹುದು.

ಸಿಟ್ಟಾಕೋಸಿಸ್:

ಇದು ತೀವ್ರ ನ್ಯೂಮೋನಿಯವಾಗಿದ್ದು, ಎದೆ ಮೇಲೆ ಭಾರವಾದ ಒತ್ತಡವಿರುವಂತೆ ಅನಿಸಿಕೊಳ್ಳುವಷ್ಟು ಗಂಭೀರವಾಗಿರುತ್ತದೆ.

ನೀವು ಅಪಾಯದಲ್ಲಿದ್ದೀರಾ?

ಬಾಲ್ಕನಿ, ಟೆರೆಸ್ ಅಥವಾ ಉದ್ಯಾನವನದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವವರು, ಪಾರಿವಾಳಗಳು ಗೂಡು ಕಟ್ಟುವ ಸ್ಥಳಗಳ ಬಳಿ ವಾಸಿಸುವವರು, ರಕ್ಷಣಾ ಸಾಧನಗಳಿಲ್ಲದೆ ಪಾರಿವಾಳದ ಹಿಕ್ಕೆಯನ್ನು ಸ್ವಚ್ಛಗೊಳಿಸುವವರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ನಿರ್ವಹಣಾ ಕೆಲಸಗಾರರು ಅಸ್ತಮಾ, ಮಧುಮೇಹ ಇರುವವರು ಅಥವಾ ಸ್ಟೀರಾಯ್ಡ್ ಔಷಧ ಸೇವಿಸುವವರು ಮಕ್ಕಳು ಮತ್ತು ವೃದ್ಧರು ಅತ್ಯಂತ ಹೆಚ್ಚು ಅಪಾಯದಲ್ಲಿದ್ದಾರೆ.

ದೀರ್ಘಕಾಲದ ಪರಿಣಾಮಗಳು

ಪಾರಿವಾಳದ ಹಿಕ್ಕೆಯಲ್ಲಿರುವ ರೋಗಾಣುಗಳು ಮತ್ತೆ ಮತ್ತೆ ಒಡ್ಡಿಕೊಳ್ಳುತ್ತವೆ. ಒಂದು ವೇಳೆ ಚಿಕಿತ್ಸೆ ವಿಳಂಬವಾದರೆ ಶ್ವಾಸಕೋಶದ ಮೇಲೆ ದೀರ್ಘಕಾಲದ ಪರಿಣಾಮಗಳು ಕಾಣಿಸಿಕೊಳ್ಳಬಹುದು. ನಿರಂತರ ಉರಿಯೂತದಿಂದ ಶ್ವಾಸಕೋಶದಲ್ಲಿ ಶಾಶ್ವತ ಗಾಯ ಉಂಟಾಗಿ ದೀರ್ಘಕಾಲ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

ಕೆಲವರಿಗೆ ಗುಣಮುಖವಾದ ನಂತರವೂ ಕೆಮ್ಮು, ಸೀಳು–ಸೀಳು ಶಬ್ದದೊಂದಿಗೆ ಉಸಿರಾಟ ಅಥವಾ ಶ್ರಮವನ್ನು ಸಹಿಸದ ಸ್ಥಿತಿ ಮುಂದುವರಿಯುತ್ತದೆ. ಹಿಸ್ಟೋಪ್ಲಾಸ್ಮೋಸಿಸ್ನಿಂದ ಶ್ವಾಸಕೋಶದಲ್ಲಿ ಗುಳ್ಳೆಗಳು ಉಂಟಾಗಿ, ಅವು ಕ್ಷಯರೋಗ ಅಥವಾ ಕ್ಯಾನ್ಸರ್ ಎಂದು ತಪ್ಪಾಗಿ ಅರ್ಥವಾಗುವ ಸಾಧ್ಯತೆಯೂ ಇದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಇತರ ಅಂಗಾಂಗಗಳಿಗೆ ಹರಡಿ ದೀರ್ಘಕಾಲದ ಅಸ್ವಸ್ಥತೆಗೆ ಕಾರಣವಾಗಬಹುದು.
.ಕತ್ತು ಕೊಯ್ದು 23 ಪಾರಿವಾಳ ಹತ್ಯೆ.
ಸ್ವಚ್ಛಗೊಳಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಹಿಕ್ಕೆಯನ್ನು ಸ್ವಚ್ಛಗೊಳಿಸುವುದು ಅನಿವಾರ್ಯವಾದರೆ, ಮೊದಲು ನೀರನ್ನು ಸಿಂಪಡಿಸಿ. ಒಣಗಿದ ಹಿಕ್ಕೆಯನ್ನು ಗಾಳಿಗೆ ತೂರಬೇಡಿ. ಎನ್95 ಮಾಸ್ಕ್ ಮತ್ತು ಡಿಸ್ಪೋಸಬಲ್ ಗ್ಲೌಸ್ ಧರಿಸುವುದು ಅತ್ಯವಶ್ಯಕ. ಕ್ಲೀನಿಂಗ್ ನಂತರ ಕಾಲಿನ್ ಅಥವಾ ಲಿಜೋಲ್ ಅನ್ನು ನೀರಿಗೆ ಸೇರಿಸಿ, ಆ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ತಕ್ಷಣ ಸ್ನಾನ ಮಾಡಬೇಕು. ಮೂರು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಮೆಟ್ಟಿಲೇರುವಾಗ ಉಸಿರಾಟದ ತೊಂದರೆ, ಎದೆಯಲ್ಲಿ ಬಿಗಿತ ಅಥವಾ ಉಸಿರಾಟದ ತೊಂದರೆಯೊಂದಿಗೆ ಜ್ವರ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಬಹುತೇಕ ಸೋಂಕುಗಳು ಲಘುವಾಗಿದ್ದರೂ, ನಿರ್ಲಕ್ಷ್ಯದಿಂದ ಶಾಶ್ವತ ಶ್ವಾಸಕೋಶ ಹಾನಿಯುಂಟು ಮಾಡಬಹುದು.

ಲೇಖಕರು: ಡಾ. ಪೂಜಾ ಟಿ., ಹಿರಿಯ ತಜ್ಞ ಶ್ವಾಸಕೋಶಶಾಸ್ತ್ರಜ್ಞರು, ಆಸ್ಟರ್ ಆರ್ವಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.