ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗಾಲದ ಸೊಳ್ಳೆಗಳಿಂದ ಮಕ್ಕಳ ರಕ್ಷಣೆ ಹೇಗೆ?

ಡಾ.ಶಿಲ್ಪಾ ಪಾಂಡ್ಯ
Published 25 ಮೇ 2024, 0:41 IST
Last Updated 25 ಮೇ 2024, 0:41 IST
ಅಕ್ಷರ ಗಾತ್ರ
ಮಲೇರಿಯಾವು ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಎಂಬುದು ಇದಕ್ಕೆ ಕಾರಣವಾಗಿದೆ. ಈ ಕಾಯಿಲೆಯು ಮಕ್ಕಳು ಮತ್ತು ವಯಸ್ಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವ್ಯಕ್ತಿಯು ಸೊಳ್ಳೆಯ ಕಡಿತಕ್ಕೆ ಒಳಗಾದ ನಂತರ ಮಲೇರಿಯಾದ ಪರಾವಲಂಬಿಗಳು ಆ ವ್ಯಕ್ತಿಯ ಯಕೃತ್ ಅನ್ನು ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳನ್ನು ಸೋಂಕಿಗೆ ಒಳಪಡಿಸುತ್ತವೆ. ‌

ಜ್ವರ, ತಲೆನೋವು, ವಾಕರಿಕೆ, ವಾಂತಿ ಮತ್ತು ಕೆಲವೊಮ್ಮೆ ಅತಿಸಾರ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳು. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ.

ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳನ್ನೂ ಹೊಂದಿರಬಹುದು.


ಆರೈಕೆ ಹೀಗಿರಲಿ: 


ಮಲೇರಿಯಾಪೀಡಿತ ಮಗುವಿನ ಆರೈಕೆಯಲ್ಲಿ ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ. ಕಾಯಿಲೆಯಿಂದ ಕೂಡಿರುವ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಜ್ವರ ನಿಯಂತ್ರಿಸುವ ಔಷಧಗಳನ್ನು ನೀಡುವುದು, ಮಗುವಿಗೆ ಸಾಕಷ್ಟು ವಿಶ್ರಾಂತಿ ಸಿಗಬೇಕು. ನಿರ್ಜಲಿಕರಣವಾಗದಂತೆ ತಡೆಯಲು ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಬೇಕು.   ವೈದ್ಯರ ಸಲಹೆಯ ಮೇರೆಗೆ ಮಗುವನ್ನು ಆರೈಕೆ ಮಾಡುವ ಮೂಲಕ ಸೋಂಕು ಮುಕ್ತವಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ.

ಅಪಾಯಕಾರಿ ಲಕ್ಷಣಗಳು ಯಾವುವು? 

ಮಲೇರಿಯಾದಿಂದ ಬಳಲುತ್ತಿರುವ ಮಗುವು ಕಾಮಾಲೆ (ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು), ರೋಗಗ್ರಸ್ತವಾಗುವಿಕೆ, ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು ಅಥವಾ ಸೂಕ್ತ ಔಷಧಿಗಳನ್ನು ತೆಗೆದುಕೊಂಡರೂ ನಿರಂತರವಾಗಿ ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ನೋಡಿ. 

ನಿಮಗಿದು ತಿಳಿದಿರಲಿ

ಮಲೇರಿಯಾವು ಸೊಳ್ಳೆ ಕಡಿತ ಅಥವಾ ರಕ್ತ ವರ್ಗಾವಣೆಯ ಮೂಲಕ ಮಾತ್ರ ಹರಡುತ್ತದೆ. ನೀರು ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ. ಮಲೇರಿಯಾ ಪರಾವಲಂಬಿಗಳು ಎದೆ ಹಾಲಿನ ಮೂಲಕ ಹರಡುವುದಿಲ್ಲ. ಆದರೆ ತಾಯಿಯು ಮಗುವಿಗೆ ಹಾಲುಣಿಸುವಾಗ ಕೆಲವು ಔಷಧಿಗಳ ಸೇವನೆ ಬಗೆಗೆ ಎಚ್ಚರಿಕೆವಹಿಸಿ. 

ಸೋಂಕಿತ ಮಗುವಿನ ಸಂಪರ್ಕದಿಂದ, ಸೋಂಕಿತ ಮಗು ಬಳಸುವ ಬಟ್ಟೆ ಅಥವಾ ಪಾತ್ರೆಗಳಂಥ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ. ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು.  ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಲಸಿಕೆ ಲಭ್ಯವಿಲ್ಲ.

ಸೊಳ್ಳೆಗಳಿಂದ ಮಕ್ಕಳನ್ನು ರಕ್ಷಿಸಲು ಸಲಹೆಗಳಿವು

  • ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.

  • ಬೆಳಿಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.

  • ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.

  • ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.

  • ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.

ಡೆಂಗಿ ಲಕ್ಷಣಗಳು

ಡೆಂಗಿ ಸೋಂಕಿತ ಮಕ್ಕಳಲ್ಲಿ ಆಗಾಗ್ಗೆ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಜಠರದಲ್ಲಿ ಉರಿತದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದಾಗಿ ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕೆಲವೊಮ್ಮೆ ಸಡಿಲವಾದ ಮಲದ ಸಮಸ್ಯೆ ಉಂಟಾಗಲಿದೆ.

ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಮೊದಲ 2 ರಿಂದ 4 ವಾರಗಳ ಕಾಲ ಹೆಚ್ಚು ಜಾಗ್ರತೆವಹಿಸಬೇಕು. ಪ್ಯಾರಾಸಿಟಮಲ್‌ ನಂತಹ ಜ್ವರ ವಿರೋಧಿ ಔಷಧಿಗಳನ್ನು ಮಕ್ಕಳಿಗೆ ನೀಡಬೇಕು. ಮಗುವಿಗೆ ಸಾಕಷ್ಟು ವಿಶ್ರಾಂತಿ ಜೊತೆಗೆ ನೀರು ಕುಡಿಯುವಂತೆ ಕಾಳಜಿವಹಿಸಬೇಕು.

ರೋಗಲಕ್ಷಣಗಳು

ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.

  • ಊಟ ಸೇವನೆಗೆ ನಿರಾಕರಿಸುವುದು ಅಥವಾ ವಾಂತಿ ಮಾಡುವುದು.

  • ನಿದ್ರಾಹೀನತೆ ಅಥವಾ ಚಡಪಡಿಕೆಗೆ ಒಳಗಾಗುವುದು.

  • ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ, ವಾಂತಿ ಅಥವಾ ಮಲದಲ್ಲಿ ರಕ್ತಸ್ರಾವ ಕಂಡುಬರುವುದು.

  • ಹೊಟ್ಟೆ ನೋವು

  • ಚರ್ಮದ ಬಣ್ಣ ಬದಲಾವಣೆ, ಕೈ ಮತ್ತು ಪಾದಗಳು ತಣ್ಣಗಾಗುವುದು.

  • ಕನಿಷ್ಠ 6 ಗಂಟೆಗಳ ಕಾಲ ಮೂತ್ರ ಕಟ್ಟಿಕೊಂಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT