ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ನಡಿಗೆ ಅಭ್ಯಾಸವುಳ್ಳವರಿಗೆ ಕೊರೊನಾದಿಂದ ಕಡಿಮೆ ಅಪಾಯ: ಅಧ್ಯಯನ

Last Updated 14 ಜುಲೈ 2020, 7:39 IST
ಅಕ್ಷರ ಗಾತ್ರ

ಲಂಡನ್: ವೇಗದ ನಡಿಗೆ ಅಭ್ಯಾಸವುಳ್ಳವರಿಗೆ ಕೊರೊನಾದಿಂದ ಕಡಿಮೆ ಅಪಾಯವಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಬ್ರಿಟನ್‌ನ ‘ಯುಕೆ ಬಯೋಬ್ಯಾಂಕ್‌’ನಲ್ಲಿ ನೋಂದಣಿ ಮಾಡಿಕೊಂಡಿರುವ 4 ಲಕ್ಷಕ್ಕೂ ಹೆಚ್ಚು ಜನರ ದತ್ತಾಂಶಗಳನ್ನು ಸಂಶೋಧಕರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಒಟ್ಟಾರೆಯಾಗಿ 973 ಮಂದಿಯಲ್ಲಿ ಮಾತ್ರ ಸೋಂಕಿನ ತೀವ್ರತೆ ಹೆಚ್ಚಿದ್ದು, ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು.

ಸಾಮಾನ್ಯ ದೇಹ ತೂಕ ಹೊಂದಿರುವ ವ್ಯಕ್ತಿಗಳಿಗಿಂತ ಸ್ಥೂಲಕಾಯ ಹೊಂದಿರುವವರು ತೀವ್ರತೆರನಾದ ಕೊರೊನಾ ಸೋಂಕಿಗೆ ಗುರಿಯಾಗುವ ಸಾಧ್ಯತೆ ಶೇ 49ರಷ್ಟು ಹೆಚ್ಚಿದೆ. ಬೊಜ್ಜಿನ ಹೊರತಾಗಿಯೂ ನಿಧಾನವಾಗಿ ನಡೆಯುವವರಿಗೆ ಕೊರೊನಾ ಬಾಧಿಸುವ ಸಾಧ್ಯತೆ ಹೆಚ್ಚು. ಉದಾಹರಣೆಗೆ; ಗಂಟೆಗೆ 3 ಮೈಲಿಗಿಂತಲೂ ಕಡಿಮೆ ನಡೆಯುವವರು ತೀವ್ರವಾದ ಕೊರೊನಾಗೆ ತುತ್ತಾಗುವ ಸಾಧ್ಯತೆ ಸಾಮಾನ್ಯ ತೂಕದ ಹಾಗೂ ಗಂಟೆಗೆ 4 ಮೈಲಿಗೂ ಹೆಚ್ಚು ನಡೆಯುವವರಿಗಿಂತಲೂ ದುಪ್ಪಟ್ಟಾಗಿದೆ. ನಿಧಾನ ನಡಿಗೆಯವರಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಇತರ ಅಂಶಗಳೂ ಇರುತ್ತವೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ವ್ಯಕ್ತಿಗಳ ದೈಹಿಕ ಸಾಮರ್ಥ್ಯ ಮತ್ತು ಭವಿಷ್ಯದ ಕಾಯಿಲೆ, ಅಂಗವೈಕಲ್ಯ ಮತ್ತು ಸಾವಿನ ಬಗ್ಗೆ ತಿಳಿದುಕೊಳ್ಳಲು ನಡಿಗೆಯ ವೇಗವನ್ನು ಬಳಸಿಕೊಳ್ಳಲಾಗುತ್ತಿದೆ. ‘ನಡಿಗೆಯ ವೇಗವು ದೈಹಿಕ ಕ್ಷಮತೆಯನ್ನು ಅಳೆಯಲು ಬಳಸುವ ಸರಳ ಮಾಪನ. ಸ್ಥೂಲಕಾಯದವರಿಗೆ ತೀವ್ರತೆರನಾದ ಕೊರೊನಾ ಬಾಧಿಸುವ ಸಾಧ್ಯತೆ ಹೆಚ್ಚು’ ಎಂದು ಅಧ್ಯಯನ ವರದಿ ಸಿದ್ಧಪಡಿಸಿದ ಲೇಖಕರು ಹೇಳಿದ್ದಾರೆ. ಮೆಡ್‌ಆರ್‌ಎಕ್ಸಿವ್ ಎಂಬ ಜರ್ನಲ್‌ನಲ್ಲಿ ಅಧ್ಯನ ವರದಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT