ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆಗೆ ಸನ್‌ ಫಾರ್ಮಾದಿಂದ ‘ಫವಿಪಿರಾವಿರ್’ ಬಿಡುಗಡೆ: ಮಾತ್ರೆಗೆ ₹35

Last Updated 4 ಆಗಸ್ಟ್ 2020, 11:54 IST
ಅಕ್ಷರ ಗಾತ್ರ

ದೆಹಲಿ: ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೋವಿಡ್‌–19 ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ‘ಫ್ಲೂಗಾರ್ಡ್’ ಎಂಬ ಹೆಸರಿನಲ್ಲಿ ಫವಿಪಿರಾವಿರ್ (200ಎಂಜಿ)ಮಾತ್ರೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ‘ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್’ ಮಂಗಳವಾರ ತಿಳಿಸಿದೆ.

ವೈರಾಣು ನಿರೋಧಕವಾಗಿರುವ ಫ್ಲೂಗಾರ್ಡ್‌ನ ಒಂದು ಮಾತ್ರೆಗೆ ₹35ಗಳನ್ನು ನಿಗದಿ ಮಾಡಲಾಗಿದ್ದು, ಈ ವಾರದಿಂದ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆಗೆ ಸನ್ ಫಾರ್ಮಾ ತಿಳಿಸಿದೆ.

ಸೌಮ್ಯ ಮತ್ತು ಮಧ್ಯಮ ಪ್ರಮಾಣದ ಕೋವಿಡ್‌–19ನ ಸಂಭಾವ್ಯ ಚಿಕಿತ್ಸೆಗಾಗಿ ಭಾರತದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮಾತ್ರೆ ಫವಿಪಿರಾವಿರ್ ಆಗಿದೆ.

‘ಮಾತ್ರೆಯು ಹೆಚ್ಚಿನ ಜನರಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ‘ಫ್ಲೂ ಗಾರ್ಡ್‌’ ಹೆಸರಿನಲ್ಲಿ ಫವಿಪಿರಾವಿರ್ ಅನ್ನು ನಾವು ಬಿಡುಗಡೆ ಮಾಡಿದ್ದೇವೆ. ಕೋವಿಡ್‌ ಮೂಲದಿಂದ ಜನರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ ಇದರಿಂದ ತಗ್ಗುವ ವಿಶ್ವಾಸವಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಕಾರ್ಯಕ್ಕೆ ಇದು ಪೂರಕ ಪ್ರಯತ್ನವಾಗಿದೆ,’ ಎಂದು ಸನ್ ಫಾರ್ಮಾ ಇಂಡಿಯಾದ ವ್ಯವಹಾರ ವಿಭಾಗದ ಸಿಇಒ ಕೀರ್ತಿ ಗಾನೋರ್ಕರ್ ಹೇಳಿದ್ದಾರೆ.

ಭಾರತದಲ್ಲಿ ಮಂಗಳವಾರ 52,050 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾದವು. ಈ ಮೂಲಕ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 18,55,745ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT