ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.10 ವಿಶ್ವ ಮಾನಸಿಕ ಆರೋಗ್ಯ ದಿನ | ಮಾನಸಿಕ ಆರೋಗ್ಯಕ್ಕೂ ಬೇಕು ಪೌಷ್ಟಿಕ ಆಹಾರ

Last Updated 10 ಅಕ್ಟೋಬರ್ 2020, 11:43 IST
ಅಕ್ಷರ ಗಾತ್ರ

ನಮ್ಮ ದೇಹವನ್ನು ಕಾರಿಗೂ, ಮನಸನ್ನು ಎಂಜಿನ್‌ಗೂ ಹೋಲಿಕೆ ಮಾಡೋಣ. ಎಂಜಿನ್‌ಗೆ ಉತ್ತಮ ಗುಣಮಟ್ಟದ ಇಂಧನ ಬಳಸುವುದರಿಂದ ಕಾರಿನ ಕಾರ್ಯಕ್ಷಮತೆಚೆನ್ನಾಗಿರುತ್ತದೆ. ಅದೇ ರೀತಿ ನಾವು ಕೂಡ ಗುಣಮಟ್ಟದ ಆಹಾರ ಸೇವಿಸುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

ಕಳಪೆ ಆಹಾರ ಸೇವನೆಯು ಮನಸ್ಸು ಮತ್ತು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಬೊಜ್ಜು ಸೇರಿದಂತೆ ಅಪೌಷ್ಟಿಕತೆಗೆ ಸಂಬಂಧಿತ ಕಾಯಿಲೆಗಳು,ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ಅಧ್ಯಯನಗಳು ದೃಢಪಡಿಸಿವೆ.

ಪ್ರೋಟಿನ್‌, ಕಾರ್ಬೊಹೈಡ್ರೇಟ್‌, ನಾರಿನ ಪದಾರ್ಥ ಸೇವನೆ ದೇಹದ ಬೆಳವಣಿಗೆಗೆ ಅಗತ್ಯವಾಗಿದ್ದು ನಮ್ಮ ಮನಸ್ಸನ್ನು ಚೈತನ್ಯಗೊಳಿಸುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರೆತೆ ಎದುರಾದರೆ ಮಿದುಳಿಗೆ ಆಮ್ಲಜನಕ ನಿಯಮಿತವಾಗಿ ಪೂರೈಕೆಯಾಗುವುದಿಲ್ಲ. ಆಗ ಮನಸ್ಸಿಗೆ ಸಂಬಂಧಿಸಿದ ವ್ಯಾದಿಗಳು ಎದುರಾಗುತ್ತವೆ ಎಂದು ಹಾರ್ವರ್ಡ್ ಹೆಲ್ತ್ ಬ್ಲಾಗ್ ಅಧ್ಯಯನ ವರದಿ ತಿಳಿಸಿದೆ.

ಕಾರ್ಬೊಹೈಡ್ರೇಟ್‌ಗಳು ಸೆರೊಟೋನಿನ್ ಬಿಡುಗಡೆ ಮಾಡುವುದರಿಂದ ಮಿದುಳ ಶಾಂತವಾಗುತ್ತದೆ. ಹಾಗೇ ಪ್ರೋಟಿನ್‌ಯುಕ್ತ ಆಹಾರ ಕೂಡ ಮಿದುಳನ್ನು ಜಾಗೃತಗೊಳಿಸತ್ತದೆ. ಪ್ರೋಟಿನ್‌ನಲ್ಲಿ ಇರುವ ಒಮೆಗಾ-3, ಒಮೆಗಾ-6 ಎಂಬ ಆರೋಗ್ಯಕರ ಕೊಬ್ಬಿನಾಂಶ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಹಾರ್ವರ್ಡ್ ಹೆಲ್ತ್ ಬ್ಲಾಗ್ ತಿಳಿಸಿದೆ.

ಮೆಡಿಟರೇನಿಯನ್, ಪಾಶ್ಚಿಮಾತ್ಯ ಹಾಗೂ ಸಾಂಪ್ರದಾಯಿಕ ಜಪಾನಿ ಆಹಾರ ಪದ್ಧತಿಯಲ್ಲಿ ಖಿನ್ನತೆಯ ಅಪಾಯವು ಶೇ. 35ರಷ್ಟು ಕಡಿಮೆ ಇದೆ ಎಂದು ಅಧ್ಯಯನಗಳು ತಿಳಿಸಿವೆ. ತರಕಾರಿ, ಹಣ್ಣು, ಸಂಸ್ಕರಿಸಿದ ಧಾನ್ಯಗಳು, ಮೀನು, ಸಮುದ್ರ ಆಹಾರ, ತೆಳುವಾದ ಮಾಂಸ, ಹಾಲು ಮತ್ತು ಮೊಸರು ಸೇವನೆ ಮಾಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ವಿವಿಧ ರೀತಿಯ ಧಾನ್ಯಗಳು, ಬ್ಲೂಬೆರಿ, ಮೀನು, ಅರಿಶಿನ, ಬ್ರೊಕೋಲಿ, ಡಾರ್ಕ್ ಚಾಕೊಲೇಟ್, ಮೊಟ್ಟೆ, ಬಾದಾಮಿ ಸೇವನೆ ಮನಸ್ಸಿನ ಆರೋಗ್ಯವನ್ನು ಸಮತೋಲನದಲ್ಲಿ ಇರಿಸುತ್ತವೆ. ಮಿದುಳುಆರೋಗ್ಯವಾಗಿರಬೇಕಾದರೆ ಮೇಲಿನ ಪದಾರ್ಥಗಳು ಅಗತ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನಾವು ಸೇವಿಸುವ ಆಹಾರ ನಮ್ಮ ದೈಹಿಕ ಬೆಳವಣಿಗೆಗೆಮಾತ್ರ ಸೀಮಿತವಾಗಿಲ್ಲ, ಮಾನಸಿಕ ಬೆಳವಣಿಗೆಗೂ ಪೂರಕವಾಗಿದೆ.ಸಮತೋಲಿತ ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ದೇಹಕ್ಕೆ ಸಕ್ಕರೆಯುಕ್ತ ಹಾಗೂ ಪ್ರತಿಕೂಲ ಪರಿಣಾಮ ಬೀರುವ ಕೊಬ್ಬಿನ ಪದಾರ್ಥಗಳು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇಂತಹ ಪದಾರ್ಥಗಳ ಸೇವನೆಯಲ್ಲಿಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹಾರ್ವರ್ಡ್ ಹೆಲ್ತ್ ಬ್ಲಾಗ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT