ಮೂತ್ರನಾಳದ (ಯುಟಿಐ) ಸೋಂಕು ಸಾಮಾನ್ಯವಾಗಿ ಕಂಡುಬರುವಂತಹದ್ದಾದರೂ ನಿರ್ಲಕ್ಷಿಸುವ ಸಮಸ್ಯೆ ಅಲ್ಲವೇ ಅಲ್ಲ. ಯುಟಿಐ ಎನ್ನುವುದು ಮಹಿಳೆ ಮತ್ತು ಪುರುಷರಲ್ಲೂ ಕಂಡುಬರುವ ಸಮಸ್ಯೆಯೇ, ಆದರೆ ಮಹಿಳೆಯರಿಗೆ ಈ ಸೋಂಕು ತಗುಲುವ ಸಾಧ್ಯತೆ ಅಧಿಕವಾಗಿರುತ್ತದೆ. ಪುರುಷರಲ್ಲಿ ಮೂತ್ರನಾಳದ ಸೋಂಕು ಕಂಡುಬಂದಲ್ಲಿ ಅದು ಜಟಿಲ ಸಮಸ್ಯೆಯಾಗಬಹುದು. ಸಾಮಾನ್ಯ ಸೋಂಕು ಎನಿಸಿದರೂ ಯುಟಿಐ ನಿರ್ಲಕ್ಷಿಸಿದ್ದಲ್ಲಿ ಕಿಡ್ನಿ ಸಮಸ್ಯೆಗೂ ಕಾರಣವಾಗಬಹುದು.
.Karnataka Diabetes | ಗೃಹ ಆರೋಗ್ಯ: 27 ಲಕ್ಷ ಜನರಲ್ಲಿ ಮಧುಮೇಹ ಪತ್ತೆ.Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು.
ಮೂತ್ರನಾಳದ ಸೋಂಕಿಗೆ ಕಾರಣಗಳೇನು ?

ಯುಟಿಐ ಅಥವಾ ಮೂತ್ರನಾಳದ ಸೋಂಕು 50 ಮತ್ತು 60ನೇ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇದು ನವಜಾತ ಶಿಶುಗಳಲ್ಲಿ, ಮಕ್ಕಳಲ್ಲಿ, ಹಾಗೂ ಪ್ರೌಢಾವಸ್ಥೆಯಲ್ಲೂ ಕಂಡುಬರಬಹುದು. ಹದಿಹರೆಯದವರಲ್ಲಿ ಮೂತ್ರನಾಳದಲ್ಲಿನ ಜನ್ಮಜಾತ ಸಮಸ್ಯೆಗಳು ಮತ್ತು ಜೀವನಶೈಲಿಯ ಬದಲಾವಣೆಗಳಿಂದಾಗಿ ಯುಟಿಐಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಋತುಬಂಧದ ನಂತರ ಹಾರ್ಮೋನ್ ಬದಲಾವಣೆಯ ಕಾರಣಕ್ಕೆ ಮಹಿಳೆಯರು ಯುಟಿಐಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 50 ವರ್ಷ ವಯಸ್ಸಿನ ನಂತರ ಪುರುಷರು ಪ್ರಾಸ್ಟೇಟ್ ಹಿಗ್ಗುವಿಕೆಯಿಂದಾಗಿ ಯುಟಿಐಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಡಯಾಬಿಟಿಸ್, ರೋಗನಿರೋಧಕ ಶಕ್ತಿ ಕಡಿಮೆಯಾದ ಸ್ಥಿತಿ, ಮೂತ್ರಕೋಶದಲ್ಲಿ ಕಲ್ಲು, ಕಡಿಮೆ ನೀರಿನ ಸೇವನೆ, ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು, ಶುಚಿತ್ವ ಇಲ್ಲದ ಸಾರ್ವಜನಿಕ ಶೌಚಾಲಯ ಬಳಕೆ, ದೀರ್ಘಕಾಲದ ಕ್ಯಾತೆಟರ್ಗಳ ಬಳಕೆ, ಹಾಸಿಗೆ ಹಿಡಿದ ಸ್ಥಿತಿ, ದೀರ್ಘಕಾಲದ ಕಿಡ್ನಿ ಕಾಯಿಲೆ ಕೂಡ ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತವೆ.

ನಿರ್ಲಕ್ಷಿಸಿದರೆ ಕಿಡ್ನಿ ಹಾನಿ ಸಾಧ್ಯತೆ

ಯುಟಿಐ ಸಮಸ್ಯೆಯನ್ನು ನಿರ್ಲಕ್ಷಿಸಿದ್ದಲ್ಲಿ ಅಥವಾ, ಸರಿಯಾದ ಮತ್ತು ಸೂಕ್ತವಾದ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಕಿಡ್ನಿ ಕಾರ್ಯದ ಮೇಲೆ ತಾತ್ಕಾಲಿಕ ಅಥವಾ ಸಂಪೂರ್ಣವಾಗಿ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ಯುಟಿಐ ಸಮಸ್ಯೆಗೆ ಪೂರ್ಣ ಪ್ರಮಾಣದ ಸೂಕ್ತವಾದ ಆ್ಯಂಟಿ ಬಯೋಟಿಕ್ ಚಿಕಿತ್ಸೆಯ ಅವಶ್ಯಕತೆ ಇದೆ. ಸೂಕ್ತವಲ್ಲದ ಆ್ಯಂಟಿ ಬಯೋಟಿಕ್ ಬಳಕೆ ಹಾಗೂ ಯುಟಿಐ ಕಾರಣವಾದ ಅಂಶಗಳಿಗೆ ಚಿಕಿತ್ಸೆ ನೀಡದೇ ಇದ್ದಲ್ಲಿ, ಯುಟಿಐ ಮರುಕಳಿಸಬಹುದು ಅಥವಾ ಸಮಸ್ಯೆ ಉಲ್ಬಣಗೊಂಡು ಕಿಡ್ನಿ ಕಾರ್ಯಕ್ಕೆ ತಡೆಯೊಡ್ಡಬಹುದು. ಚಿಕಿತ್ಸೆ ಪಡೆಯದೇ ಇದ್ದಲ್ಲಿ ದೀರ್ಘಕಾಲದ ಕಿಡ್ನಿ ಸಮಸ್ಯೆಗೆ ಒಳಗಾಗಿ ಡಯಾಲಿಸಿಸ್ ಅಗತ್ಯದವರೆಗೆ ಮುಂದುವರೆಯಬಹುದು.

ಆರಂಭಿಕ ಲಕ್ಷಣಗಳು ಹಾಗೂ ಪರಿಹಾರ

ಮೂತ್ರವಿಸರ್ಜನೆ ಸಮಯದಲ್ಲಿ ಉರಿ

ಪದೇ ಪದೇ ಮೂತ್ರವಿಸರ್ಜನೆ

ಕೆಳ ಕಿಬ್ಬೊಟ್ಟೆ ಅಥವಾ ಸೊಂಟ ನೋವು

ಜ್ವರ

ಮೂತ್ರದಲ್ಲಿ ರಕ್ತ

ಈ ಮೇಲಿನ ಐದು ಅಂಶಗಳು ಯುಟಿಐ ಸಮಸ್ಯೆಯ ಆರಂಭಿಕ ಲಕ್ಷಣಗಳಾಗಿವೆ. ಯುಟಿಐ ಸಮಸ್ಯೆಗೆ ಮುಂಜಾಗ್ರತೆಯೇ ಬಹಳ ಮುಖ್ಯ ಯುಟಿಐ ಬರದಂತೆ ತಡೆಯಲು ನಿತ್ಯ 2-3 ಲೀಟರ್ ನೀರು ಸೇವನೆ ಮಾಡಿ. ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಲಿ ಹಾಗೇ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ. ಯುಟಿಐ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.

(ಲೇಖಕರು: ಡಾ ಸನ್ಮಾನ್ ಗೌಡ, ಕನ್ಸಲ್ಟೆಂಟ್- ಯೂರೋಲಾಜಿ , ಕೆಎಂಸಿ ಆಸ್ಪತ್ರೆ ಮಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.