ವಿಟಮಿನ್ ಬಿ12 ಅತ್ಯಗತ್ಯ ಪೋಷಕಾಂಶವಾಗಿದ್ದು, ಇದು ನರ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೆಂಪು ರಕ್ತ ಕಣ ಉತ್ಪಾದನೆ ಮಾಡುವಲ್ಲಿ ಮತ್ತು ಡಿಎನ್ಎ ಸಂಶ್ಲೇಷಣೆಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ12 ಕೊರತೆಯನ್ನು ಕಡೆಗಣಿಸಬಾರದು. ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಗೆ ನಿಯಮಿತ ತಪಾಸಣೆ ನಿರ್ಣಾಯಕವಾಗಿದ್ದು, ಇದರ ಚಿಕಿತ್ಸೆ ಬಗ್ಗೆ ಜನರು ಜಾಗೃತರಾಗಬೇಕು.

ವಿಟಮಿನ್ ಬಿ12 ಕೊರತೆ ಎಂದರೇನು?

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಮುಖ ಪೋಷಕಾಂಶಗಳು ನಮ್ಮ ದೇಹಕ್ಕೆ ಪೂರೈಕೆಯಾಗದಿದ್ದಾಗ ವಿಟಮಿನ್ ಬಿ12 ಕೊರತೆ ಉಂಟಾಗುತ್ತದೆ. ಇದು ಅಸಮರ್ಪಕ ಆಹಾರ ಸೇವನೆ, ಕಳಪೆ ಆಹಾರ ಸೇವನೆ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಲೂ ಉಂಟಾಗಬಹುದು. ಸಸ್ಯಾಹಾರಿಗಳು, ವಯಸ್ಕರು ಮತ್ತು ಜಠರಗರುಳಿನ ಕಾಯಿಲೆ ಅಥವಾ ಕ್ರೋನ್ಸ್ ಕಾಯಿಲೆಯಂತಹ ಜಠರಗರುಳಿನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ವಿಟಮಿನ್ ಬಿ12ಗೆ ಹೆಚ್ಚು ಒಳಗಾಗುತ್ತಾರೆ. ದೀರ್ಘಕಾಲೀನ ಕೊರತೆಯು ರಕ್ತಹೀನತೆ, ನರ ಹಾನಿ ಮತ್ತು ಅರಿವಿನ ದೌರ್ಬಲ್ಯಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಲಕ್ಷಣಗಳು: ವಿಟಮಿನ್ ಬಿ12 ಕೊರತೆಯನ್ನು ಪತ್ತೆಹಚ್ಚುವುದು ಸವಾಲಿನ ಕೆಲಸ. ಕೆಲವೊಮ್ಮೆ ಸೂಕ್ಷ್ಮ ಮತ್ತು ನಿರ್ದಿಷ್ಟವಲ್ಲದ ಲಕ್ಷಣಗಳು ಕಂಡು ಬರುತ್ತವೆ. ಆರಂಭಿಕವಾಗಿ ಆಯಾಸ, ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಈ ಕೊರತೆ ಮುಂದುವರೆದಂತೆ, ಕೈ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟಲು ಶುರುವಾಗುತ್ತದೆ. ಜೊತೆಗೆ ಮರೆವಿನ ಸಮಸ್ಯೆ ಹೆಚ್ಚಾಗಲಿದೆ. ಮನಸ್ಥಿತಿಯ ಬದಲಾವಣೆ, ನಡೆಯುವ ತೊಂದರೆ ಸೇರಿದಂತೆ ತೀವ್ರವಾದ ಲಕ್ಷಣಗಳೂ ಕಾಣಿಸಲಾರಂಭಿಸುತ್ತವೆ. ಈ ಲಕ್ಷಣಗಳು ಇತರ ದೈಹಿಕ ಪರಿಸ್ಥಿತಿಗಳೊಂದಿಗೆ ಸೇರಿಕೊಂಡಿರುವುದರಿಂದ ನಿಖರವಾದ ರೋಗನಿರ್ಣಯಕ್ಕೆ ಸ್ಕ್ರೀನಿಂಗ್ ಅವಶ್ಯವಾಗಿದೆ.

ಯಾರಿಗೆ ಬಿ12 ಕೊರತೆಯ ಅಪಾಯವೇನು?: ವಿಟಮಿನ್ ಬಿ12 ಕೊರತೆಗಾಗಿ ಸ್ಕ್ರೀನಿಂಗ್ (ಆರಂಭಿಕ ಪತ್ತೆ) ಅತ್ಯಗತ್ಯ. ಇದರಿಂದ ಮುಂದಾಗುವ ದೊಡ್ಡ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಒಂದು ವೇಳೆ ಈ ಸಮಸ್ಯೆಯನ್ನು ಸ್ಕ್ರೀನಿಂಗ್ ಮಾಡಿ ಪತ್ತೆ ಹಚ್ಚದೇ ಹೋದಲ್ಲಿ ನರಗಳ ಹಾನಿ ಮತ್ತು ಮರೆವಿನ ಕಾಯಿಲೆ ಹೆಚ್ಚಾಗಲಿದೆ. ಅದರಲ್ಲೂ ವಯಸ್ಸಾದವರು ಹಾಗೂ ಜಠರಗರುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಮೆಟ್ಫಾರ್ಮಿನ್ ಅಥವಾ ಪ್ರೋಟಾನ್ ಪಂಪ್ ಪ್ರತಿರೋಧಕಗಳಂತಹ ಔಷಧಿ ತೆಗೆದುಕೊಳ್ಳುವವರು ವಿಟಮಿನ್ ಬಿ12 ಕೊರತೆ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು.

ತಪಾಸಣೆ ಬಗ್ಗೆ ನಿರ್ಲಕ್ಷ್ಯ ಬೇಡ: ಸಾಮಾನ್ಯವಾಗಿ ವಿಟಮಿನ್ ಬಿ12 ಮಟ್ಟವನ್ನು ಅಳೆಯುವ ಸ್ಕ್ರೀನಿಂಗ್, ಸರಳ ರಕ್ತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಕೆಲವು ಸಂದರ್ಭಗಳಲ್ಲಿ, ರೋಗನಿರ್ಣಯವನ್ನು ದೃಢೀಕರಿಸಲು ಮೀಥೈಲ್ ಮಲೋನಿಕ್ ಆಸಿಡ್ (ಎಂಎಂಎ) ಅಥವಾ ಹೋಮೋಸಿಸ್ಟೈನ್ ಮಟ್ಟಗಳಂತಹ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಬೇಕಾಗಬಹುದು.

ಕೊರತೆಯನ್ನು ಪರಿಹರಿಸುವುದು ಹೇಗೆ?: ವಿಟಮಿನ್ ಬಿ12 ಕೊರತೆಗೆ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಕೊರತೆಯ ತೀವ್ರತೆ ಅವಲಂಬಿಸಿ, ಆಹಾರ ಬದಲಾವಣೆ, ವಿಟಮಿನ್ ಬಿ12 ನ ಇಂಟ್ರಾಮಸ್ಕುಲರ್ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಆರಂಭಿಕ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿವಾರಿಸುವುದಲ್ಲದೆ, ದೀರ್ಘಕಾಲೀನ ತೊಡಕುಗಳನ್ನು ತಡೆಯುತ್ತದೆ.

ಜಾಗೃತಿ ಅಗತ್ಯ: ಸಾಕಷ್ಟು ಜನರಿಗೆ ವಿಟಮಿನ್ ಬಿ12 ಕೊರತೆಯ ಬಗ್ಗೆ ಮಾಹಿತಿಯೇ ಇಲ್ಲ. ಈ ಕೊರತೆಯಿಂದ ಆಗುವ ಆರೋಗ್ಯದ ಅಪಾಯಗಳ ಬಗ್ಗೆಯೂ ನಿರ್ಲಕ್ಷಿಸುತ್ತಾರೆ. ಇದರಿಂದ ದೀರ್ಘಕಾಲದ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಬಿ12 ಕೊರತೆ ಬಗ್ಗೆ ಹಾಗೂ ಅದರ ತಪಾಸಣೆ, ಚಿಕಿತ್ಸೆಗಳ ಬಗ್ಗೆ ಜಾಗೃತಿ ಅಗತ್ಯ. ಶಾಲಾ ಕಾಲೇಜುಗಳಲ್ಲಿಯೇ ಈ ಬಗ್ಗೆ ಜಾಗೃತಿ ಮೂಡಿಸಿದರೆ ಮಕ್ಕಳಿಂದಲೇ ಅರಿವು ಬೆಳೆಸಿದಂತಾಗಲಿದೆ.

ವಿಟಮಿನ್ ಬಿ 12 ಕೊರತೆಯು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಿ ಗುಣಪಡಿಸಬಹುದಾದ ಸ್ಥಿತಿಯಾಗಿದೆ. ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಮೊದಲು ಈ ಕೊರತೆಯನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ನಿಯಮಿತ ಸ್ಕ್ರೀನಿಂಗ್ ಶಕ್ತಿಯುತ ಸಾಧನವಾಗಿದೆ. ವಿಟಮಿನ್ ಬಿ12 ಸ್ಕ್ರೀನಿಂಗ್ಗೆ ಆದ್ಯತೆ ನೀಡುವ ಮೂಲಕ, ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ವಿಟಮಿನ್ ಬಿ12 ಯಾವುದರಿಂದ ಲಭ್ಯ?: ಹಾಲು, ಮೊಸರು, ಮೊಟ್ಟೆ, ಸಾಲ್ಮನ್ ಮೀನು, ಕೋಳಿ ಮಾಂಸ, ಚೀಸ್, ಅಣಬೆ, ಬಾಳೆಹಣ್ಣು, ಬೆರಿ ಹಣ್ಣು, ಮಸಾಲೆ ಪದಾರ್ಥಗಳಾದ ದಾಲ್ಚಿನಿ, ಕರಿಮೆಣಸು, ಚಕ್ಕೆ, ಲವಂಗ, ಪುದೀನ ಸೋಂಪುಗಳಲ್ಲಿ ಬಿ12 ಉತ್ತಮ ಪ್ರಮಾಣದಲ್ಲಿದ್ದು, ಅವುಗಳನ್ನು ಸೇವಿಸುವುದು ಅನುಕೂಲಕರ.

ಮುನ್ನೆಚ್ಚರಿಕೆ ಏನು?: ಸೂಕ್ತ ಆಹಾರ ಸೇವಿಸುವುದೇ ಇದರ ಮುನ್ನೆಚ್ಚರಿಕೆಯಾಗಿದೆ. ಕೇವಲ ಕಾರ್ಬೋಹೈಡ್ರೇಟ್ ಆಹಾರಗಳಾದ ಅನ್ನ, ಚಪಾತಿಯನ್ನೇ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಕಡಿಮೆ ಮಾಡಿದರೆ ವಿಟಮಿನ್ ಬಿ12 ಕೊರತೆ ಉಂಟಾಗಲಿದೆ.

ಲೇಖಕರು: ಕನ್ಸಲ್ಟೆಂಟ್-ಇಂಟರ್ನಲ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.