ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ರಾಷ್ಟ್ರೀಯತೆಯ ಸಂಕೇತವಾಗಬೇಕು. ಎಲ್ಲರೂ ತಪ್ಪದೇ, ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡರೆ, ವೈರಸ್ ಕೊಂಡಿಯನ್ನು ತುಂಡರಿಸುವುದು ಸುಲಭ.

ರೋಗದ ಸೌಮ್ಯ ಲಕ್ಷಣಗಳಿದ್ದವರು ತಪಾಸಣೆಯನ್ನು ಮುಂದೂಡುವುದು ಸಲ್ಲ. ಇದರಿಂದ ಮನೆಯಲ್ಲಿರುವ ವೃದ್ಧರು, ಕುಟುಂಬದ ಸದಸ್ಯರು, ದೈನಂದಿನ ಸಂಪರ್ಕಕ್ಕೆ ಬರುವವರಿಗೆ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ, ರೆಮ್‌ಡೆಸಿವಿರ್ ಔಷಧದ ಕೊರತೆ ಇರುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು.

ಕೋವಿಡ್–19 ಗೆ ಲಸಿಕೆ ಬಂದಿದೆ. ಲಸಿಕೆ ತೆಗೆದುಕೊಂಡರೂ, ನಿಮ್ಮಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಮಾರ್ಗಸೂಚಿ ಪಾಲನೆಗೆ ಆದ್ಯತೆ ನೀಡುವುದು ಒಳ್ಳೆಯದು.

ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಕೋವಿಡ್ ರೋಗಿಗಳ ಹೆಚ್ಚಳದಿಂದ ಪರಿಸ್ಥಿತಿ ಕೈ ಮೀರುವ ಹಂತದಲ್ಲಿವೆ. ನಾವು ಪೂರ್ವದಲ್ಲೇ ಎಚ್ಚೆತ್ತುಕೊಂಡರೆ, ವೈರಸ್ ಹರಡುವಿಕೆಯನ್ನು ನಿಯಂತ್ರಿಸಬಹುದು. ನೆಗಡಿ, ಜ್ವರ, ಕೆಮ್ಮು ಇಂತಹ ರೋಗ ಲಕ್ಷಣ ಕಂಡಾಗ, ತಕ್ಷಣ ರೋಗಿಯನ್ನು ಪರೀಕ್ಷೆಗೆ ಒಳಪಡಿಸಬೇಕು, ಪ್ರತ್ಯೇಕವಾಗಿ ಉಳಿಸಬೇಕು, ಚಿಕಿತ್ಸೆಗೆ ಸಲಹೆ ನೀಡಬೇಕು. ಇದರಿಂದ ಕೋವಿಡ್ ನಿಯಂತ್ರಣಕ್ಕೆ ನಮ್ಮದೊಂದು ಕೊಡುಗೆ ನೀಡಿದಂತಾಗುತ್ತದೆ.

- ಡಾ. ಫರ್ಹಾನ್ ಫಜಲ್, ಸಹಾಯಕ ಪ್ರಾಧ್ಯಾಪಕ, ಸಾಂಕ್ರಾಮಿಕ ರೋಗಗಳ ವಿಭಾಗ, ಕೆಎಂಸಿ ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.