ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ ಅಂಕಣ | ಗಂಡನಿಂದ ಲೈಂಗಿಕ‌ತೃಪ್ತಿ ಸಿಗುತ್ತಿಲ್ಲ; ಪರಿಹಾರವೇನು?

Published 6 ಅಕ್ಟೋಬರ್ 2023, 23:30 IST
Last Updated 6 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ನನ್ನ ಗಂಡನ ವಯಸ್ಸು 41, ನನ್ನದು 25. ಆದರೆ, ನನ್ನ ಗಂಡನಿಂದ ಲೈಂಗಿಕ ಸುಖ ಸಿಗುತ್ತಿಲ್ಲ. ಲೈಂಗಿಕತೆಯಲ್ಲಿ ಅವರಿಗೆ ಆಸಕ್ತಿಯೇ ಇಲ್ಲ. ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?

ನಿಮ್ಮಿಬ್ಬರಲ್ಲಿ 10 ವರ್ಷಕ್ಕೂ ಹೆಚ್ಚು ಅಂತರವಿದೆಯಾದರೂ ಅದರಿಂದ ಲೈಂಗಿಕ ಕ್ರಿಯೆ ಹಾಗೂ ತೃಪ್ತಿಗೆ ಏನೂ ತೊಂದರೆ ಆಗಲಾರದು. ಆರೋಗ್ಯವಂತ ಪುರುಷರಲ್ಲಿ ಲೈಂಗಿಕಕ್ರಿಯೆ ನಡೆಸುವ ಸಾಮರ್ಥ್ಯ 55ರಿಂದ 60 ವರ್ಷದವರೆಗೂ ಚೆನ್ನಾಗಿರುತ್ತದೆ. ಲೈಂಗಿಕ ಆಸಕ್ತಿ ಲೈಂಗಿಕ ಅಭಿವ್ಯಕ್ತಿಯ ಮೊದಲ ಘಟ್ಟ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ಮೊದಲು ನೀವು ಈ ಬಗ್ಗೆ ವೈದ್ಯಕೀಯ ಅರಿವು ಮೂಡಿಸಿಕೊಳ್ಳಬೇಕು.
ಯಾವುದೇ ವ್ಯಕ್ತಿಯ ಲೈಂಗಿಕ ಚೋಧಕ ಶಕ್ತಿ ಮೆದುಳಿನ ಲಿಂಬಿಕ್‌ವ್ಯವಸ್ಥೆ, ನರಮಂಡಲ ವ್ಯವಸ್ಥೆಯ ಹೊಂದಾಣಿಕೆಯನ್ನು ಅವಲಂಬಿಸಿದೆ, ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್ ಮಟ್ಟವನ್ನು ಅವಲಂಬಿಸಿದೆ. ನಿಮ್ಮ ಹೇಳಿಕೆಗೆ ವ್ಯತಿರಿಕ್ತ ಎನಿಸಿದರೂ ಪುರುಷರಲ್ಲಿಯೇ ಸಾಮಾನ್ಯವಾಗಿ ಲೈಂಗಿಕ ಚೋದಕ ಶಕ್ತಿ ಸ್ತ್ರೀಯರಿಂದ 3ರಿಂದ 5ಪಟ್ಟು ಹೆಚ್ಚಿರುತ್ತದೆ. ಮತ್ತು ಹೆಚ್ಚಿನ ಸಂದರ್ಭದಲ್ಲಿ ಗಂಡಸರೇ ಮೊದಲು ಲೈಂಗಿಕ ಬಯಕೆ ವ್ಯಕ್ತಪಡಿಸುತ್ತಾರೆ. ಹೆಂಗಸರಲ್ಲಿಯೂ ಲೈಂಗಿಕ ಚೋಧಕ ಶಕ್ತಿ ಟೆಸ್ಟೋಸ್ಟಿರಾನ್ ಮಟ್ಟವನ್ನು ಅವಲಂಬಿಸಿದೆ. ಮಹಿಳೆಯರಲ್ಲಿ ಋತುಚಕ್ರಕ್ಕೆ ಹೊಂದಿಕೊಂಡ ಹಾಗೆ ಲೈಂಗಿಕ ಆಸಕ್ತಿಯಲ್ಲಿ ಬದಲಾವಣೆಗಳಾಗುತ್ತವೆ. ಮಹಿಳೆಯರಲ್ಲಿ ಅಂಡಾಶಯದಿಂದ ಪ್ರತಿತಿಂಗಳು ಅಂಡಾಣು ಬಿಡುಗಡೆಯಾಗುವ ಸಂದರ್ಭದಲ್ಲಿ ಲೈಂಗಿಕ ಭಾವನೆಗಳು ಉತ್ಕಟಗೊಳ್ಳಬಹುದು. ಇದು ಜೀವ ವಿಕಾಸ ಸೂತ್ರಕ್ಕೆ ಪೂರಕವಾದದ್ದು.  ಮುಟ್ಟಿನ ಮುನ್ನಾ ದಿನಗಳಲ್ಲೂ ಲೈಂಗಿಕ ಆಸಕ್ತಿ ಹೆಚ್ಚಬಹುದು.  

ಹೆಚ್ಚಿನ ಮಹಿಳೆಯರು ತಮ್ಮಲ್ಲಿರುವ ಲೈಂಗಿಕ ಆಸಕ್ತಿಯನ್ನ ಪುರುಷರ ಕಾರಣದಿಂದಾಗಿ ಅದುಮಿಡುವ ಸಂದರ್ಭಗಳೇ ಹೆಚ್ಚಾಗಿ ಕಂಡುಬರುತ್ತದೆ. ನೀವು ಈ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಂಡಿರುವುದು ಶ್ಲಾಘನೀಯ. ಇನ್ನು ನಿಮ್ಮ ಪತಿಯಲ್ಲಿ ಲೈಂಗಿಕ ಚೇತನ, ಚೋಧಕ ಶಕ್ತಿ ಕಡಿಮೆಯಾಗಿದ್ದರೆ ಅದು ಕಾಯಿಲೆಯ ಲಕ್ಷಣವೂ ಇರಬಹುದು. ಅತಿಯಾದ ತೂಕ, ಅತಿ ಕಡಿಮೆತೂಕ, ಮಧುಮೇಹ, ಅತಿಯಾದರಕ್ತದೊತ್ತಡ, ನಿಶ್ಯಕ್ತಿ ಇತ್ಯಾದಿಗಳು ಇದ್ದಾಗಲೂ ಕೂಡ ಲೈಂಗಿಕ ಚೋದಕತೆ ಕಡಿಮೆಯಾಗುತ್ತದೆ. ಇದಲ್ಲದೆ ಹಲವು ಮಾನಸಿಕ, ಸಾಮಾಜಿಕ, ಕಾರಣಗಳಿಂದಲೂ ಲೈಂಗಿಕ ನಿಶ್ಯಕ್ತಿ ಉಂಟಾಗಬಹುದು. ಉದಾಹರಣೆಗಾಗಿಖಿನ್ನತೆ, ಆತಂಕ, ನಿಶ್ಚಿತವಿಕಲತೆ ಇತ್ಯಾದಿಗಳಿಂದಲೂ ಲೈಂಗಿಕ ನಿಶಕ್ತಿ ಆಗಬಹುದು. ನಿಮ್ಮ ಪತಿಗೆ ಅತಿಯಾದ ಧೂಮಪಾನ, ಮದ್ಯಪಾನಗಳ ಚಟಗಳಿವೆಯೇ? ಅವು ಕೂಡ ಲೈಂಗಿಕ ಶಕ್ತಿ ಕಡಿಮೆ ಮಾಡಬಲ್ಲವು. ನಿದ್ರೆಮಾತ್ರೆಸೇವನೆ, ಕೆಲವು ರಕ್ತದೊತ್ತಡದ ಔಷಧಗಳು ಲೈಂಗಿಕ ಚೋದಕ ಶಕ್ತಿ ಕಡಿಮೆ ಮಾಡಬಲ್ಲವು. ಇವೆಲ್ಲವುಗಳ ಬಗ್ಗೆ ನೀವು ಗಮನವಹಿಸಿ. ಇಷ್ಟೇ ಅಲ್ಲದೇ ಬೆಳವಣಿಗೆ, ವಾತಾವರಣ, ವಂಶಪಾರಂಪರಿಕತೆ ಎಲ್ಲವೂ ಲೈಂಗಿಕಶಕ್ತಿ ನಿರ್ಧರಿಸುತ್ತದೆ. ಹೆಚ್ಚು ಲೈಂಗಿಕಶಕ್ತಿ ಇರುವವರಲ್ಲಿ ಲೈಂಗಿಕ ಕಾಮನೆ, ಕನಸುಗಳು ಅಧಿಕವಾಗಿರುತ್ತದೆ.

ಹಾಗೆಯೇ ಲೈಂಗಿಕ ಕ್ರಿಯೆಯಿಂದ ವಿಮುಖರಾಗಿ ದೂರ ಉಳಿದಂತೆಲ್ಲ ಲೈಂಗಿಕ ಆಸಕ್ತಿ, ಶಕ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ. ಇವೆಲ್ಲದರ ಜೊತೆಗೆ ನಿಮ್ಮಿಬ್ಬರಲ್ಲಿ ಪರಸ್ಪರ ಅನ್ಯೋನ್ಯತೆ, ಒಬ್ಬರನ್ನೊಬ್ಬರು ಅರಿತು ಸ್ಪಂದಿಸುವುದು, ಹೊಂದಾಣಿಕೆ ತೋರುವುದು ಇವೆಲ್ಲಾ ಲೈಂಗಿಕ ಅನ್ಯೋನ್ಯತೆಗೆ ಅತಿ ಅವಶ್ಯಕಸಂಗತಿಗಳು. ನೀವಿಬ್ಬರೂ ಸ್ನೇಹಪೂರ್ಣ ಭಾವನೆಯಿಂದ ಇದ್ದೀರಲ್ಲವೇ? ಲೈಂಗಿಕಕ್ರಿಯೆಯ ಬಗ್ಗೆ ನಿಮಗೆ ಏನಾದರೂ ತಪ್ಪು ಕಲ್ಪನೆಗಳು ಇವೆಯೇ? ನಿಮಗೆ ವಿವಾಹವಾಗಿ ಎಷ್ಟು ಸಮಯ ಆಯಿತು? ಯಾವುದನ್ನು ನೀವು ತಿಳಿಸಿಲ್ಲ. . ನಿಮ್ಮಿಬ್ಬರಲ್ಲಿ ಪರಸ್ಪರ ನಂಬಿಕೆ, ಸಾಂಗತ್ಯ, ಪರಸ್ಪರ ಗುಣನಡವಳಿಕೆ ಅರಿಯುವುದು ಸೂಕ್ತವಾಗಿ ಸ್ಪಂದಿಸುವುದು ಇತ್ಯಾದಿ ಈ ವಿಷಯದಲ್ಲಿ ಸಹಾಯವಾಗಬಹುದು. ಜೊತೆಗೆ ಹಾರ್ಮೋನುಗಳ ಇನ್ನಿತರ ದೈಹಿಕ ಸಮಸ್ಯೆಗಳಿವೆಯೇ ಎಂದು ತಜ್ಞವೈದ್ಯರ ಸಲಹೆ ಪಡೆಯಿರಿ.  ನಿಮ್ಮ ಮುಂದಿನ ಜೀವನ ಸುಗಮವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT