ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ಗರ್ಭಿಣಿ ಆರೈಕೆ ಕುರಿತು ತಜ್ಞರ ಸಲಹೆ

Last Updated 25 ನವೆಂಬರ್ 2022, 14:10 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಅವಧಿಯಲ್ಲಿ ಹಲವು ರೀತಿಯ ಸೋಂಕು, ವೈರಸ್‌ ಅಂಟುವ ಸಾಧ್ಯತೆ ಇರುತ್ತದೆ. ಶೀತ, ಜ್ವರ ಸಾಮಾನ್ಯವಾಗಿರುತ್ತದೆ. ಅದರಲ್ಲೂ ತನ್ನ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿರುವುದರಿಂದ ಗರ್ಭಿಣಿಯರು ಈ ಅವಧಿಯಲ್ಲಿ ತಮ್ಮ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುವುದು ಅತ್ಯಂತ ಅವಶ್ಯಕ. ಈ ಬಗ್ಗೆ ವೈದ್ಯರು ಒಂದಷ್ಟು ಸಲಹೆ ನೀಡಿದ್ದಾರೆ.

ಹೆಚ್ಚು ನೀರು ಕುಡಿಯುತ್ತಿರಿ:
ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗದೆ ಇರುವ ಕಾರಣದಿಂದಾಗಿ ಕಡಿಮೆ ನೀರು ಕುಡಿಯುತ್ತೇವೆ. ಆದರೆ ಗರ್ಭಿಣಿಯರ ವಿಷಯದಲ್ಲಿ ಇದು ಸರಿಯಲ್ಲ. ಗರ್ಭಿಣಿಯರು ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ನಿರ್ಜಲೀಕರಣದಿಂದಾಗಿ ಗರ್ಭಿಣಿಯರಲ್ಲಿ ಆಮ್ನಿಯೊಟಿಕ್ ದ್ರವದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ಅಕಾಲಿಕ ಹೆರಿಗೆ ಅಥವಾ ಸ್ತನ ಹಾಲು ಉತ್ಪತ್ತಿಯು ಕಡಿಮೆ ಆಗುತ್ತದೆ. ಚಳಿಗಾಲದಲ್ಲಿ ದೇಹವು ಒಣಗುವ ಪರಿಣಾಮವಾಗಿ ಹೆಚ್ಚು ನೀರು ಬೇಕಾಗುವುದು. ನೀರಿನಿಂದ ದೇಹವನ್ನು ಹೈಡ್ರೇಟ್ ಆಗಿಡಬಹುದು. ಎಳನೀರು ಮತ್ತು ಜ್ಯೂಸ್ ಗಳನ್ನು ಕೂಡ ಸೇವನೆ ಮಾಡಬಹುದು.

ಪ್ರೋಟಿನ್‌ಯುಕ್ತ ಆಹಾರ ಸೇವನೆ:
ಗರ್ಭಿಣಿಯರು ತಮ್ಮ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಪ್ರೋಟಿನ್‌ಯುಕ್ತ ಆಹಾರ ಸೇವನೆ ಅತ್ಯಂತ ಅವಶ್ಯಕ. ಹಣ್ಣು ಹಾಗೂ ತರಕಾರಿಗಳು ನಮ್ಮ ದೇಹದ ಆರೋಗ್ಯ ವೃದ್ಧಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಚಳಿಗಾಲದಲ್ಲಿ ಗರ್ಭಿಣಿಯರು ಹಣ್ಣುಗಳು ಹೆಚ್ಚಿರುವಂತಹ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ವೃದ್ಧಿಸುವುದು. ಪ್ರಮುಖವಾಗಿ ವಿಟಮಿನ್ ಸಿ ಇರುವಂತಹ ನೆಲ್ಲಿಕಾಯಿಯನ್ನು ನೀವು ಬಳಸಿ. ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಪ್ರತಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು.

ವ್ಯಾಯಾಮವಿರಲಿ:
ಗರ್ಭಿಣಿಯರು ಪೌಷ್ಠಿಕ ಆಹಾರ ಸೇವನೆ ಜೊತೆಗೆ ದೈಹಿಕ ಚಟುವಟಿಕೆ ಹೊಂದಿರುವುದು ಮುಖ್ಯವಾದದ್ದು. ಹೀಗಾಗಿ ವ್ಯಾಯಾಮ, ಯೋಗ, ಧ್ಯಾನ, ಜಿಮ್‌ನಂತಹ ಯಾವುದಾದರೊಂದು ದೈಹಿಕ ಚಟುವಟಿಕೆಯನ್ನು ಹೊಂದಿರುವುದು ಒಳಿತು.

ಬೆಚ್ಚಗಿನ ಬಟ್ಟೆ ತೊಡಿ:
ಚಳಿಗಾಲದಲ್ಲಿ ದೇಹವನ್ನು ಚಳಿಗೆ ಒಡ್ಡುವುದು ಒಳ್ಳೆಯದಲ್ಲ. ಹೀಗಾಗಿ ಸಾಧ್ಯವಾದಷ್ಟು ದೇಹವನ್ನು ಚೆಚ್ಚಗಿಡಲು ಉಲ್ಲನ್‌ ಬಟ್ಟೆಗಳನ್ನು ತೊಡಬಹುದು. ತುಂಬಾ ಶೀತ ವಾತಾವರಣಕ್ಕೆ ನೀವು ಒಗ್ಗಿಕೊಂಡರೆ ಅದು ರಕ್ತ ಸಂಚಾರದ ಮೇಲೆ ಪರಿಣಾಮ ಬೀರುವುದು. ಇದರಿಂದ ಚರ್ಮದಲ್ಲಿನ ರಕ್ತನಾಳಗಲ್ಲಿ ಸಮಸ್ಯೆ ಉಂಟಾಗುವುದು ಮತ್ತು ಉರಿಯೂತ ಕಾಣಿಸಬಹುದು. ಇದರ ಪರಿಣಾಮವಾಗಿ ತುರಿಕೆ, ಚರ್ಮ ಕೆಂಪಾಗುವುದು, ಊತ ಮತ್ತು ಬೊಕ್ಕೆಗಳು ಕಂಡು ಬರುವುದು. ಇದನ್ನು ತಪ್ಪಿಸುವ ಸಲುವಾಗಿ ನೀವು ಪಾದಗಳು ಹಾಗೂ ಕೈಗಳನ್ನು ಸರಿಯಾಗಿ ಬಟ್ಟೆಯಿಂದ ಮುಚ್ಚಿಕೊಳ್ಳಿ. ಮಲಗುವ ಮೊದಲು ಬಿಸಿ ನೀರಿನಲ್ಲಿ ಕಾಲನ್ನು ಅದ್ದಿಕೊಂಡರೆ ಉತ್ತಮ.

ಲಸಿಕೆ ಪಡೆಯಿರಿ:
ಜ್ವರಕ್ಕೆ ಲಸಿಕೆ ಪಡೆದುಕೊಂಡರೆ ಅದರಿಂದ ನೀವು ಹಾಗೂ ಮಗು ಆರೋಗ್ಯವಾಗಿ ಇರಬಹುದು. ಗರ್ಭಧಾರಣೆ ವೇಳೆ ನೀವು ಇಂತಹ ಲಸಿಕೆ ತೆಗೆದುಕೊಂಡರೆ ಆಗ ಮಗುವನ್ನು ಅದು ಜನನದ ಆರು ತಿಂಗಳ ಕಾಲ ಜ್ವರದಿಂದ ಕಾಪಾಡುವುದು. ಶ್ವಾಸಕೋಶ ಸಂಬಂಧಿ ಸೋಂಕಿನ ಸಮಸ್ಯೆಯು ಕಡಿಮೆ ಆಗುವುದು. ಜ್ವರದ ಲಸಿಕೆಯು ಮಗು ಹಾಗೂ ತಾಯಿಗೆ ಸುರಕ್ಷಿತ.


(ಲೇಖಕರು ಫೋರ್ಟಿಸ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT