ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಧುಮೇಹ ದಿನ: ಇನ್ಸುಲಿನ್‌ ಸಂಶೋಧನೆಗೆ ನೂರು ವರ್ಷ!

ಮಧುಮೇಹಿಗಳ ಜೀವದಾಯಕ ಔಷಧಿ
Last Updated 14 ನವೆಂಬರ್ 2021, 2:02 IST
ಅಕ್ಷರ ಗಾತ್ರ

ನವೆಂಬರ್ 14. ವಿಶ್ವ ಮಧುಮೇಹ ದಿನ. ಇನ್ಸುಲಿನ್‌ ಕಂಡು ಹಿಡಿದ ಡಾ.ಫ್ರೆಡರಿಕ್ ಬ್ಯಾಂಟಿಂಗ್ ಜನ್ಮದಿನ. ಆತ ಚಾರ್ಲ್ಸ್ ಬೆಸ್ಟ್ ಜೊತೆಗೂಡಿ 1921-22 ರಲ್ಲಿ ಮಧುಮೇಹಕ್ಕೆ ಔಷಧಿ ಕಂಡುಹಿಡಿದ ಸುದೀರ್ಘ ಸಾಹಸಗಾಥೆಗೆ ನೂರು ವರ್ಷ ತುಂಬಿದೆ.

1889ರಲ್ಲಿ ಫಿಸಿಶಿಯನ್‌ ಆಸ್ಕರ್ ಮಿಂಕೋವ್‍ಸ್ಕಿ, ಮೇದೋಜೀರಕಾಂಗವನ್ನು ದೇಹದಿಂದ ಬೇರ್ಪಡಿಸಿದಾಗ ಮಧುಮೇಹ ಬರಬಹುದೆಂದು ಹೇಳಿದ್ದರು. 1900ರಲ್ಲಿ ನಾಯಿಯ ದೇಹದಿಂದ ಮೇದೋಜೀರಕಾಂಗವನ್ನು ಬೇರ್ಪಡಿಸಿ ಅದನ್ನು ಸಾಬೀತುಗೊಳಿಸಿದ್ದರು.

1908ರಲ್ಲಿ ಅವರು ಯುಜೀನ್ ಓಪಿ ಎಂಬುವರೊಂದಿಗೆ ಮೇದೋಜೀರಕಾಂಗದ ಸಾರವನ್ನು ಸಂಸ್ಕರಿಸಿ ಅದರಲ್ಲಿರುವ ಚೋದಕಸ್ರಾವ (ಹಾರ್ಮೋನ್)ದಿಂದ ಮಧುಮೇಹವನ್ನು ನಿಯಂತ್ರಿಸುವುದರ ಕುರಿತ ಸಂಶೋಧನೆಗಳನ್ನು ನಡೆಸಿದರು. ಆಗ ತರಬೇತಿನಿರತ ವೈದ್ಯನಾಗಿದ್ದ ಜಾರ್ಜ್ ಲುಡ್‍ವಿಗ್, ಚೋದಕಸ್ರಾವಕ್ಕೆ ಅಕೋಮೆಟ್ರಾಲ್ ಎಂದು ಹೆಸರಿಟ್ಟು ಐವರು ಮಧುಮೇಹಿಗಳ ಮೇಲೆ ಪ್ರಯೋಗಿಸಿದ ಬಳಿಕ, ಅದರಲ್ಲಿ ಗ್ಲೂಕೋಸನ್ನು ಕಡಿಮೆ ಮಾಡುವ ಅಂಶವಿದೆ ಎಂಬುದು ಗೊತ್ತಾಯಿತು.

1921ರಲ್ಲಿ ಬ್ಯಾಂಟಿಂಗ್, ನಾಯಿಯ ಮೇದೋಜೀರಕಾಂಗವನ್ನು ಹೊರತೆಗೆದು ಕಚ್ಚಾಸಾರವನ್ನು ಬೇರ್ಪಡಿಸಿದಾಗ ಮಧುಮೇಹ ಬಂದಿದ್ದನ್ನು ಗುರುತಿಸಿದರು. ಸಾರವನ್ನು ಸಂಸ್ಕರಿಸಿ ಚುಚ್ಚುಮದ್ದಿನ ಮೂಲಕ ನೀಡಿದಾಗ ಮಧುಮೇಹ ಕಡಿಮೆಯಾಗಿದ್ದನ್ನು ವಿಶ್ಲೇಷಿಸಿದರು.

1922ರ ಜನವರಿ 11ರಂದು ಟೋರಾಂಟೋನಲ್ಲಿ ಸಾವಿನ ದವಡೆಯಲ್ಲಿದ್ದ 14 ವರ್ಷದ ಬಾಲಕ ಲಿಯೋನಾರ್ಡ್ ಥಾಮ್ಸನ್‌ನಿಗೆ ಇನ್ಸುಲಿನ್ ನೀಡಲಾಯಿತು. ಥಾಮ್ಸನ್‌ 13 ವರ್ಷ ಬದುಕಿದ್ದ. ಅಂದಿನಿಂದ ಇನ್ಸುಲಿನ್‌ ಜೀವರಕ್ಷಕ ಔಷಧಿಯಾಯಿತು.

ಈ ಸಂಶೋಧನೆಗಾಗಿ ನೋಬೆಲ್ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಬ್ಯಾಂಟಿಂಗ್‌, ಜಾನ್ ಮೆಕ್ಲಾಯ್ಡ್ ಜೊತೆ ಅದನ್ನು ಹಂಚಿಕೊಂಡರು.

ಎರಡನೇ ಹಂತದ ಸಂಶೋಧನೆಯಿಂದ ಮಾನವ ಇನ್ಸುಲಿನ್‍ ಹುಟ್ಟಿ, ಪ್ರಾಣಿಗಳ ಮೇದೋಜೀರಕಾಂಗಗಳ ಸಾರವುಳ್ಳ ಇನ್ಸುಲಿನ್‌ನಿಂದ ಎದುರಾಗುತ್ತಿದ್ದ ‘ಇನ್ಸುಲಿನ್ ಅಲರ್ಜಿ’ಯೂ ಕೊನೆಯಾಯಿತು.

ಅಂಕಿ–ಅಂಶ
* 790 ಕೋಟಿ: ವಿಶ್ವದ ಜನಸಂಖ್ಯೆ
*46.3 ಕೋಟಿ: ಮಧುಮೇಹಿಗಳು
* 12.3 ಕೋಟಿ:ಇನ್ಸುಲಿನ್‌ ಅಗತ್ಯವುಳ್ಳವರು
* 70 ಕೋಟಿ:2045ರ ಹೊತ್ತಿಗೆ ಮಧುಮೇಹಿಗಳ ಸಂಖ್ಯೆ

(ಲೇಖಕರು: ಮಧುಮೇಹ ತಜ್ಞರು, ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT