ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಗ್ಸೈಲಿಟಾಲ್ ಬಳಕೆಯಿಂದ ದಂತ ಕುಳಿ ನಿಯಂತ್ರಣ ಸಾಧ್ಯ

Last Updated 11 ನವೆಂಬರ್ 2021, 10:21 IST
ಅಕ್ಷರ ಗಾತ್ರ

ದಂತ ಕುಳಿ ಅತ್ಯಂತ ಸಾಮಾನ್ಯವಾದ ಹಲ್ಲಿನ ಸಮಸ್ಯೆ. ಪ್ರಪಂಚದಶೇಕಡ 36 ರಷ್ಟು ಜನ ದಂತ ಕುಳಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಶೇಕಡ 60-65 ರಷ್ಟು ಜನರಲ್ಲಿ ದಂತ ಕುಳಿ ಸಮಸ್ಯೆಯನ್ನು ಕಾಣಬಹುದಾಗಿದೆ. ದಂತ ಕುಳಿಯನ್ನು ತೆಗೆದು ದಂತ ಪುನಃಶ್ಚೇತನಾ ವಸ್ತುವಿನಿಂದ ತುಂಬಿಸುವುದು ಅಂದರೆ ಸಾಮಾನ್ಯವಾಗಿ ಇದನ್ನು ಫಿಲ್ಲಿಂಗ್ ಎಂದು ಕರೆಯುತ್ತಾರೆ. ಈ ಚಿಕಿತ್ಸೆಯು ಪ್ರಚಲಿತವಾಗಿದೆ. ಆದರೆ ದಂತ ಕುಳಿ ಬರದಂತೆ ತಡೆಯುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿದ್ದು ಗ್ಸೈಲಿಟಾಲ್‌ನ (XYLITOL) ಬಳಕೆ ಬಹಳ ಮನ್ನಣೆಯನ್ನು ಪಡೆದಿದೆ. ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವು ಮೂಡಿಸುವ ಒಂದು ಪುಟ್ಟ ಪ್ರಯತ್ನ ಇದಾಗಿದೆ.

ಏನಿದು ಗ್ಸೈಲಿಟಾಲ್?
ಗ್ಸೈಲಿಟಾಲ್ ಎಂಬುದು ಐದು ಕಾರ್ಬನ್‌ವುಳ್ಳ ಸಕ್ಕರೆಯ ಅಂಶವಾಗಿದ್ದು ಇದನ್ನು ಕಾರ್ಬೋಹೈಡ್ರೇಟ್‌ (CARBOHYDRATE) ಎಂದು ಪರಿಗಣಿಸಬಹುದಾಗಿದೆ. ಇದು ಸಾಮಾನ್ಯವಾಗಿ ಹಣ್ಣುಗಳು, ತರಕಾರಿಗಳು, ಬೆರ್ರಿಗಳಲ್ಲಿ ಲಭ್ಯ. ಕೃತಕವಾಗಿ ಇದನ್ನು ಬರ್ಚ್ ಅಥವಾ ಬೀಚ್‌ವುಡ್ ಮರಗಳಿಂದ ತಯಾರಿಸಬಹುದಾಗಿದೆ. ಯುನೈಟೆಡ್ ಸ್ಟೇಟ್ಸ್‌ನ (US) ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್‌ನಿಂದ ಮನ್ನಣೆ ಪಡೆದಿದೆ. ಇದು ಸಾಮಾನ್ಯ ಸಕ್ಕರೆಗಿಂತ 300-400 ಪಟ್ಟು ಸಿಹಿಯಾಗಿದ್ದು ಆಹಾರದ ಬಳಕೆಯಲ್ಲಿ ಕ್ಯಾಲೋರಿ ಮುಕ್ತ ರುಚಿಯನ್ನು ನೀಡಬಹುದಾಗಿದೆ. ಪ್ರಪಂಚದ 35ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಆಹಾರ ಪದಾರ್ಥಗಳಲ್ಲಿ ಹಾಗೂ ದಂತ ಉತ್ಪನ್ನಗಳಾದ ಟೂತ್‌ ಪೇಸ್ಟ್, ಚೂಯಿಂಗ್‌ಗಮ್, ಸಿರಪ್‌ಗಳಲ್ಲಿ ಬಳಕೆಯಾಗುತ್ತಿದೆ. ದಂತ ಕುಳಿಯಿಂದ ದೂರ ಉಳಿಯಲು ದಿನಕ್ಕೆ 6-10 ಗ್ರಾಂ ಬಳಕೆ ಸೂಕ್ತ ಎಂದು ಅಧ್ಯಯನಗಳು ತಿಳಿಸುತ್ತಿವೆ.

ದಂತ ಕುಳಿಯನ್ನು ತಪ್ಪಿಸಲು ಗ್ಸೈಲಿಟಾಲ್‌ನ ಪಾತ್ರ
ದಂತ ಕುಳಿಗೆ ಮುಖ್ಯ ಕಾರಣವಾದ ಸೂಕ್ಷ್ಮಜೀವಿಯನ್ನು (STREPTOCOCCUS MUTANS) ನಾಶಮಾಡುತ್ತದೆ ಹಾಗೂ ಅದು ಹಲ್ಲನ್ನು ಕರಗಿಸಲು ಸ್ರವಿಸುವ ಆಮ್ಲವನ್ನು ಕಡಿಮೆ ಮಾಡುತ್ತದೆ.ಗ್ಸೈಲಿಟಾಲ್ ಗಮ್‌ಗಳ ಬಳಕೆಯಿಂದ ಎಂಜಲಿನ ಉತ್ಪತ್ತಿಯನ್ನು ಹೆಚ್ಚು ಮಾಡುವುದರಿಂದ ಬಾಯಿಯ ಸ್ವಚ್ಛತೆಗೆ ಕಾರಣವಾಗುತ್ತದೆ.

ಯಾವೆಲ್ಲಾ ರೂಪದಲ್ಲಿ ಗ್ಸೈಲಿಟಾಲ್ ಬಳಕೆ ಮಾಡಬಹುದಾಗಿದೆ?
ಮಾರುಕಟ್ಟೆಯಲ್ಲಿ ಗ್ಸೈಲಿಟಾಲ್ ಗಮ್‌ಗಳು ಲಭ್ಯವಿದ್ದು ಅದನ್ನು 20 ನಿಮಿಷ ಅಗಿಯುವುದರಿಂದ ದಂತ ಕುಳಿ ಸಮಸ್ಯೆಯನ್ನು ದೂರ ಇಡಬಹುದಾಗಿದೆ. ಜೊತೆಗೆ ಹಲ್ಲಿನ ಖನಿಜಾಂಶ ಮರುಪೂರಣಕ್ಕೆ (REMINERALISATION) ಸಹಾಯಕವಾಗುತ್ತದೆ.

ಗ್ಸೈಲಿಟಾಲ್ ಗಮ್ಮಿ ಬೇರ್ ಸ್ಯಾಕ್‌ನ (XYLITOL GUMMY BARE SNACK) ರೂಪದಲ್ಲಿ ಲಭ್ಯವಿದ್ದು ಮಕ್ಕಳಿಗೆ ನೀಡಬಹುದಾಗಿದೆ.

ಗ್ಸೈಲಿಟಾಲ್ ಸಿರಪ್‌ಗಳ ರೂಪದಲ್ಲಿ ಲಭ್ಯವಿದ್ದು ಮಕ್ಕಳಿಗೆ ದಿನಕ್ಕೆರಡು ಬಾರಿ 8 ಗ್ರಾಂ ಗಳಿಗೆ ಮೀರದಂತೆ ನೀಡಬಹುದಾಗಿದೆ. ಗ್ಸೈಲಿಟಾಲ್ ಟೂತ್ ಪೇಸ್ಟ್‌ಗಳು ಲಭ್ಯವಿದ್ದು ಫ್ಲೋರೈಡ್‌ನೊಂದಿಗೆ ಬಳಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ತಾಯಂದಿರಲ್ಲಿ ದಂತ ಕುಳಿ ಸಮಸ್ಯೆಗೆ ಕಾರಣವಾದ ಸ್ಟ್ರೆಪ್ಟೊಕಾಕಸ್ ಬ್ಯಾಕ್ಟೀರಿಯಾ ಅಧಿಕವಿದ್ದಾಗ ಹಸುಗೂಸುಗಳಿಗೆ ಅಥವಾ ಚಿಕ್ಕ ಮಕ್ಕಳಿಗೆ ಮುತ್ತಿಡುವುದು, ಚಮಚ ಮುಂತಾದ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಎಳೆಯ ಕಂದಮ್ಮಗಳ ಬಾಯಿಗೂ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದೆ. ಆದ್ದರಿಂದ ತಾಯಂದಿರು ಗ್ಸೈಲಿಟಾಲ್ ಬಳಸುವುದರಿಂದ ಚಿಕ್ಕ ಮಕ್ಕಳಿಗೆಬ್ಯಾಕ್ಟೀರಿಯಾಹರಡುವಿಕೆಯನ್ನು ತಡೆಯಬಹುದಾಗಿದೆ.

ಇದಲ್ಲದೆ ಬುದ್ಧಿಮಾಂದ್ಯ ಮಕ್ಕಳಲ್ಲಿ ದಂತ ಕುಳಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಇದರ ತಡೆಗಾಗಿ ಗ್ಸೈಲಿಟಾಲ್‌ ಬಳಸಬಹುದಾಗಿದೆ.

ಇದೆಲ್ಲದರ ಜೊತೆಗೆ ದಿನಕ್ಕೆರಡು ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಿ ದಂತದ ಸಂದುಗಳಲ್ಲಿನ ಆಹಾರ ಪದಾರ್ಥವನ್ನು ಡೆಂಟಲ್‌ ಫ್ಲಾಸಿಂಗ್‌ನ ಸಹಾಯದಿಂದ ತೆಗೆಯುವುದು ಬಾಯಿಯ ಆರೋಗ್ಯಕ್ಕೆ ಪೂರಕ.ದಂತ ವೈದ್ಯರೊಂದಿಗೆ ಸಮಾಲೋಚಿಸಿ ಗ್ಸೈಲಿಟಾಲ್‌ ಬಳಸುವುದು ಉತ್ತಮ.

ಲೇಖಕಿ:ಡಾ. ಸ್ಮಿತಾ ಜೆ.ಡಿ,ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ತಜ್ಞರು,ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT