ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಧಾನ್ಯ ವರ್ತಕರಿಗೆ ಉತ್ತಮವಾದ ಲಾಭ ಸಿಗಲಿದೆ
Published 28 ಜುಲೈ 2023, 23:33 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ಯಾವುದೇ ರೀತಿಯ ವಿದೇಶಿ ಒಪ್ಪಂದಗಳನ್ನು ಮಾಡಿಕೊಳ್ಳದಿರುವಂತೆ ತೀರ್ಮಾನಿಸುವುದು ಲೇಸು. ಪ್ರತಿಪಕ್ಷಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡುವಿರಿ.  ಅನಿಶ್ಚತೆಯ ಭಾವ ದೂರಾಗಲಿದೆ.
ವೃಷಭ
ಸಿವಿಲ್ ಎಂಜಿನಿಯರುಗಳಿಗೆ ಹೆಚ್ಚು ಲಾಭದಾಯಕದ ದಿನ. ಲಕ್ಷ್ಮಿ ವೆಂಕಟೇಶ್ವರನನ್ನು ಅನನ್ಯ ಭಕ್ತಿಯಿಂದ ಆರಾಧಿಸಿ ದಾರಿದ್ರ್ಯ ದೂರವಾಗುವುದು ಮತ್ತು ಸಾಮಾಜಿಕವಾಗಿ ಗೌರವವು ಇಮ್ಮುಡಿಗೊಳ್ಳಲಿದೆ.
ಮಿಥುನ
ಕ್ಷುಲ್ಲಕ ಕಾರಣಕ್ಕೆ ಉಂಟಾದ ಮನಸ್ತಾಪಗಳು ಬಗೆಹರಿದು ನೆಮ್ಮದಿ ಕಾಣುವಿರಿ. ಅದೃಷ್ಟ ದೇವತೆ ನಿಮ್ಮ ಕೈ ಹಿಡಿದಿದ್ದಾಳೆ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನಗಳನ್ನು ತರಲಿದೆ. ಆಕಸ್ಮಿಕ ಧನಲಾಭ ಉಂಟಾಗಲಿದೆ.
ಕರ್ಕಾಟಕ
ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದರೂ  ಅದೃಷ್ಟವು ಕೈ ಕೊಡಲಿದೆ. ವನಸ್ಪತಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು.
ಸಿಂಹ
ಮಗಳ ಮದುವೆಯ ವಿಷಯದಲ್ಲಿ ಜವಾಬ್ದಾರಿಯ ಹಂಚಿಕೆಗೆ ಸಂಬಂಧಿಸಿದಂತೆ ಮಗನೊಡನೆ ಮುಕ್ತ ಮನಸ್ಸಿನ ಮಾತುಕತೆ ನಡೆಯುವುದು. ನೀವಿಂದು ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರವು ಸಿಗಲಿದೆ.
ಕನ್ಯಾ
ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕಾಗಿ ಹರಸಾಹಸ ಪಡಬೇಕಾಗುವುದು.  ನೇರ ನಡೆ-ನುಡಿಯು ವ್ಯವಹಾರವನ್ನು ಕುಂಠಿತಗೊಳಿಸಬಹುದು. ಹಣದ ಅಡಚಣೆ ಇರುವುದಿಲ್ಲ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
ತುಲಾ
ಲೇಖನ ಬರೆಯುವುದರಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ.ಮದುವೆಯ ನಿಮಿತ್ತ  ಒಡವೆಗಳ ಖರೀದಿ ಮಾಡುವಿರಿ. ಸುಗಂಧದ ವ್ಯಾಪಾರದಿಂದ ಲಾಭ. ಧಾನ್ಯ ವರ್ತಕರಿಗೆ ಉತ್ತಮವಾದ ಲಾಭವಿರುವುದು.
ವೃಶ್ಚಿಕ
ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ಮುಖ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿಕೊಂಡಲ್ಲಿ ಯಶಸನ್ನು ಪಡೆಯುವಿರಿ.
ಧನು
ಕೆಲಸದಲ್ಲಿ ಬದಲಾವಣೆ ಬಯಸಿದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇನ್ನಿತರೇ ವಿಷಯಗಳಿಗೂ ಅಷ್ಟೇ ಪ್ರಾಮುಖ್ಯ  ನೀಡಿ. ಮಗನಿಂದ ಶುಭ ಸುದ್ದಿ ಕೇಳುವಿರಿ.
ಮಕರ
ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘಕಾಲೀನ ಬದಲಾವಣೆಗಳಾಗಬಹುದು. ಆರ್ಥಿಕವಾಗಿ ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಆಫೀಸಿನ ಕೆಲಸದಲ್ಲಿ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳಿರಿ.
ಕುಂಭ
ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ. ನಿಮ್ಮ ತಮಾಷೆಯ ಮಾತುಗಳು ಹಿರಿಯರ ಮನಸ್ಸನ್ನು ನೋವಿಸುವುದು,  ಮಾತಿನಲ್ಲಿ ಹಿಡಿತವಿರಲಿ. ಶೀತಬಾಧೆ ಕಡಿಮೆಯಾಗಲಿದೆ.
ಮೀನ
ಸಂಗೀತಾಭ್ಯಾಸಿಗರಿಗೆ ದೊಡ್ಡ ವೇದಿಕೆಯಲ್ಲಿ ಗಾಯನ ಪ್ರದರ್ಶಿಸುವ ಅವಕಾಶ ದೊರೆಯುತ್ತದೆ. ಬೇರೆಯವರ ಸಹಾಯ ಪಡೆಯದೆ ನಿಮ್ಮ ಶ್ರಮದಿಂದಲೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ.