ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ
Published 6 ಅಕ್ಟೋಬರ್ 2025, 23:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉಳಿತಾಯದ ಹೆಸರಲ್ಲಿ ದೊಡ್ಡ ಮೇಳಗಳಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ. ತೈಲ ವ್ಯಾಪಾರಿಗಳು ಲಾಭ ಪಡೆಯುವಲ್ಲಿ ಯಶಸ್ವಿಯಾಗುವಿರಿ. ನಿರುದ್ಯೋಗಿಗಳಿಗೆ ದೇವತಾರಾಧನೆ ಮುಖ್ಯ.
ವೃಷಭ
ಆದಾಯದಲ್ಲಿ ಕೊರತೆ, ಅಧಿಕ ಖರ್ಚು-ವೆಚ್ಚಗಳು ನಿದ್ದೆಯನ್ನು ಕೆಡಿಸುತ್ತದೆ. ಕೃಷಿಕರ ಉಲ್ಲಾಸ ಜೀವನಕ್ಕೆ ಸಣ್ಣ-ಪುಟ್ಟ ಅಡೆತಡೆಗಳು ಉಂಟಾಗಬಹುದು. ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ.
ಮಿಥುನ
ಕಂಕಣ ಭಾಗ್ಯ ಅರಸಿ ಬಂದಾಗ ನಿರಾಕರಿಸುವಂಥ ಮೂರ್ಖತನದ ಕೆಲಸಗಳನ್ನು ಮಾಡಬೇಡಿ. ಕಾರ್ಯವನ್ನು ಶುರು ಮಾಡಿದ ನಂತರ ಪದೇ ಪದೇ ನಿಲ್ಲಿಸುವಂಥ ಸನ್ನಿವೇಶಗಳು ಎದುರಾಗುತ್ತಲೇ ಇರುವ ಸಾಧ್ಯತೆಗಳಿವೆ.
ಕರ್ಕಾಟಕ
ಬಂಗಾರದ ಬೆಲೆಯ ಹಾವು ಏಣಿ ಆಟವು ಒಂದು ರೀತಿಯ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಮನಸ್ಸು ಕೆಟ್ಟ ಆಲೋಚನೆ ಹಾಗೂ ವಂಚನೆ ಮಾಡದಂತೆ ತಡೆಯೊಡ್ಡಿ.
ಸಿಂಹ
ಸ್ಟಾರ್ಟಪ್‌ಗಳನ್ನು ಪ್ರಾರಂಭ ಮಾಡಬೇಕೆಂದು ಯೋಜನೆ ಹೊಂದಿರು ವವರು ಸಮಾನ ಮನಸ್ಕರೊಂದಿಗೆ ಕೂತು ಸಮಾಲೋಚನೆ ನಡೆಸಿ. ಹಲವು ಪ್ರಶ್ನೆಗಳಿಗೆ ನಿಮ್ಮದೇ ಧಾಟಿಯಲ್ಲಿ ಹಾರಿಕೆಯ ಉತ್ತರ ನೀಡುವಿರಿ.
ಕನ್ಯಾ
ಗೃಹ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಂಥ ದೊಡ್ಡ ಕಾರ್ಯಗಳ ಮೇಲೆ ಗಮನ ಹರಿಸಿದರೆ ಕೆಲಸವು ಬೇಗ ಪೂರ್ಣವಾಗುವ ಸಾಧ್ಯತೆಗಳಿವೆ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ.
ತುಲಾ
ಕನ್ಯಾನ್ವೇಷಣೆಯ ಹಂತದಲ್ಲಿರುವ ಯೋಗ್ಯ ಹುಡುಗನಿಗೆ ಅನುರೂಪ ಕನ್ಯೆಯು ಲಭ್ಯವಾಗುವ ಸಂಭವವಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಶ್ರದ್ಧೆ ವಹಿಸಿದರೆ ಗೆಲುವು, ಯಶಸ್ಸು ಇರುತ್ತದೆ.
ವೃಶ್ಚಿಕ
ಮಾರ್ಗಮಧ್ಯದಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಲು ಬಾಲ್ಯದ ಸ್ನೇಹಿತನ ಸಹಾಯ ಕೇಳಿದರೆ ಪರಿಹಾರವಾಗುವುದು. ಯಾವ ಯೋಚನೆಯೂ ಮಾಡದೆ ಶ್ರೀವಿಷ್ಣು ಸಹಸ್ರನಾಮ ಪಠಿಸಿ.
ಧನು
ಅತೀಂದ್ರಿಯಗಳ ಶಕ್ತಿಯೋ ಎಂಬಂತೆ ಗೃಹದ ಪಾಯಗಳಾಗುವ ಸಂಭವ ವಿದ್ದಲ್ಲಿ ಅವುಗಳ ಮುನ್ಸೂಚನೆಗಳು ದೊರೆಯುತ್ತವೆ. ದೀರ್ಘಕಾಲಿಕ ಅನಾರೋಗ್ಯದ ಸಮಸ್ಯೆಗಳಿಗೆ ಮಗಳಿಂದ ಪರಿಹಾರದ ದಾರಿಗಳು ಕಾಣುತ್ತದೆ.
ಮಕರ
ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ಕದಡಿದ ಮನಸ್ಸು ತಿಳಿಯಾಗುವುದು. ಸಹೋದರರ ಜೊತೆಗೆ ಮಾಡಿಕೊಂಡ ವ್ಯಾಜ್ಯವನ್ನು ಮೂರನೆ ವ್ಯಕ್ತಿಗಳು ಆಡಿಕೊಳ್ಳುವುದಕ್ಕಿಂತ ಮುಂಚೆ ಪರಿಹರಿಸಿಕೊಳ್ಳಿ
ಕುಂಭ
ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಅನಿವಾರ್ಯವಾಗಿ ಗೈರಾಗುವ ಸಂದರ್ಭ ಬರಲಿದೆ. ಉತ್ತಮ ವ್ಯಕ್ತಿಗಳ ಜತೆ ಉತ್ತಮ ವಿಷಯಗಳ ವಿನಿಮಯವು ಮನಸ್ಸನ್ನು ಪ್ರಫುಲ್ಲವಾಗಿರಿಸುತ್ತದೆ.
ಮೀನ
ಸಾಹಸ ಮಾಡಿ ಪಡೆದ ವಸ್ತುವನ್ನು ಸಾಹಸ ಮಾಡಿಯೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇತರರಿಗೆ ಸಲಹೆ ಕೊಡುವಾಗ ಸೂಕ್ಷ್ಮವಾಗಿ ಇರುವ ಮತಿಯು ನಿಮ್ಮದೆ ಸಮಸ್ಯೆಗಳಿಗೆ ಕೈಕೊಡುವುದು.
ADVERTISEMENT
ADVERTISEMENT