ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹಣ ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ
Published 12 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶ್ರಮದಿಂದ ಸಾಲ ತೀರಿಸಿದ ನೆಮ್ಮದಿ ನಿಮ್ಮದಾಗಲಿದೆ. ವೃತ್ತಿಯ ಪರವಾಗಿ ಬಹಳ ಮುಖ್ಯ ಕೆಲಸವನ್ನು ಮಾತ್ರ ಈ ದಿನ ಕೈಗೆತ್ತಿಕೊಳ್ಳಿ. ಸ್ವಂತ ಉದ್ಯೋಗಿಗಳಿಗೆ ಅಧಿಕ ಲಾಭ.
ವೃಷಭ
ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಅನುಕೂಲಕರ ವಾತಾವರಣ ಕಾಣುವಿರಿ. ದಾರಿಗೆದುರಾಗಿ ಉತ್ತಮ ಅವಕಾಶಗಳು ಹುಡುಕಿ ಬರಲಿದೆ. ಸಗಟು ವ್ಯಾಪಾರಿಗಳಿಗೆ ಒಳ್ಳೆಯ ಸಮಯ.
ಮಿಥುನ
ಇತ್ತೀಚಿನ ದಿನದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣಬಹುದು. ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಕನಸು ಚಿಗುರೊಡೆಯಲಿದೆ.
ಕರ್ಕಾಟಕ
ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪಕಾಲ ಮೀಸಲಿ ಡಲು ಪ್ರಯತ್ನಿಸಿ. ನೂತನ ಗೃಹ ನಿರ್ಮಾಣದ ಯೋಜನೆಗೆ ಯೋಚಿಸಬಹುದು. ರಕ್ತದೊತ್ತಡ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಜಾಗ್ರತರಾಗಿರಿ.
ಸಿಂಹ
ಗೃಹೋಪಕರಣ ವಸ್ತುಗಳ ಖರೀದಿಯಲ್ಲಿ ಹಾಗೂ ಕೆಲವಾರು ಯೋಜನೆಗಳಲ್ಲಿ ಎಡವಿದ ಅನುಭವ ನಿಮಗಾಗಬಹುದು. ಕಮಿಷನ್ ಏಜೆಂಟ್‌ಗಳಿಗೆ ಮತ್ತು ಸರಕು ಸಾಗಾಣೆದಾರರಿಗೆ ಇಂದು ಉತ್ತಮವಾದ ದಿನ.
ಕನ್ಯಾ
ಕುಟುಂಬದಲ್ಲಿ ನಡೆಯುವ ಶುಭಸಮಾರಂಭಗಳ ಸಂಭ್ರಮವು ಹಿರಿಯರ ಮನಸ್ಸಿಗೆ ಸಂತೋಷ, ನೆಮ್ಮದಿ ತರುತ್ತದೆ. ಇಂದು ನಿಮ್ಮ ಹತ್ತಿರದವರಿಂದ ಅಡೆತಡೆ ಉಂಟಾಗಲಿದೆ. ಭಕ್ತಿಯಿಂದ ಮಹಾಗಣಪತಿಯನ್ನು ಆರಾಧಿಸಿ.
ತುಲಾ
ಸ್ನೇಹಿತರಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ ವಿನಾಕಾರಣವಾಗಿ ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಹವ್ಯಾಸಿ ಬರಹಗಾರರಿಗೆ ಹೇರಳ ಅವಕಾಶ ಇರಲಿದೆ. ಸಹೋದ್ಯೋಗಿಗಳನ್ನು ಹುರಿದುಂಬಿಸುವ ಕೆಲಸವನ್ನು ಮಾಡಿ.
ವೃಶ್ಚಿಕ
ಆಲೋಚನೆಗಳಿಗೆ ಗ್ರಹಣ ಸಂಭವಿಸಿದಂತಾಗುವುದರಿಂದ ಅಸಮಾಧಾನ , ಹೆದರಿಕೆ, ಧೈರ್ಯಗೆಡುವಂತೆ ಆಗಲಿದೆ. ಸರ್ಕಾರಿ ಗುತ್ತಿಗೆದಾರರಿಗೆ ಬಹಳ ದಿನಗಳಿಂದ ಬಾಕಿ ಇದ್ದ ಕಾಮಗಾರಿ ಹಣ ಮಂಜೂರಾಗಲಿದೆ.
ಧನು
ಹಿರಿಯರ ಆಸ್ತಿ ಲಭಿಸಲಿದೆ. ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಈ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳಿ. ಎಂಜಿನಿಯರ್‌ಗಳ ಕೆಲಸದ ಸಮಯದಲ್ಲಿ ಬದಲಾವಣೆಯಾಗಬಹುದು.
ಮಕರ
ಹಣ ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಿ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಾಗುವುದು. ಸುಗಂಧ ವಸ್ತುಗಳ ಮಾರಾಟದಲ್ಲಿ ಹೆಚ್ಚಳ.
ಕುಂಭ
ನಿಮ್ಮ ಮನಸ್ಥಿತಿಗೆ, ಆಲೋಚನೆಗಳಿಗೆ ಸರಿಯಾದ ವಾತಾವರಣ ದೊರಕುವ ಲಕ್ಷಣಗಳಿದೆ. ಪಾಕಪ್ರವೀಣರಿಗೆ ವೃತ್ತಿಯಲ್ಲಿ ಹೆಸರು ಸಂಪಾದನೆ ಮಾಡುವ ಕಾಲ ಒದಗಿಬರಲಿದೆ. ಸಂಜೆ ಶುಭ ಸುದ್ದಿಯೊಂದು ಬರಲಿದೆ.
ಮೀನ
ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಿ ಗ್ರಂಥ ಸಂಪಾದನೆ, ಪ್ರಕಟಣೆ ಕಾರ್ಯಗಳಲ್ಲಿ ತೊಡಗುವಿರಿ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಗಳ ಬಗ್ಗೆ ನಿಗಾ ಇರಲಿ. ನಿಕಟ ವ್ಯಕ್ತಿಗಳ ಜೊತೆಗೆ ವಾಗ್ವಾದಕ್ಕೆ ಇಳಿಯಬೇಡಿ.