ದಿನ ಭವಿಷ್ಯ: ಲೇವಾದೇವಿ ವ್ಯವಹಾರ ಲಾಭ ತರಲಿದೆ
Published 14 ಮೇ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೆರೆಹೊರೆಯವರ ಕಷ್ಟಗಳಿಗೆ ಸ್ಪಂದನೆ ಮಾಡುವುದು ಒಳ್ಳೆಯದು. ಈ ದಿನವು ಸಾಂಸಾರಿಕವಾಗಿ ತುಸು ನೆಮ್ಮದಿ, ಚೇತರಿಕೆಯ ದಿನವಾಗಲಿದೆ. ಅಧೀನ ಸಿಬ್ಬಂದಿಯೊಂದಿಗೆ ಸಂಯಮದಿಂದ ನಡೆದುಕೊಳ್ಳುವುದು ಉತ್ತಮ.
ವೃಷಭ
ಸಂಪರ್ಕ ಮಾಧ್ಯಮದಲ್ಲಿ ಸುದ್ದಿಗಾರರಾಗಿ ಉದ್ಯೋಗ ನಿರ್ವಹಿಸುವವರಿಗೆ ಬದಲಾವಣೆ ಸಂಭವವಿರಲಿದೆ. ಕೆಲಸದಲ್ಲಿ ತೋರಿದ ಶ್ರದ್ಧೆಗೆ ಹೆಚ್ಚಿನ ಸ್ಥಾನಮಾನ ಅಲಂಕರಿಸುವಿರಿ. ಸಗಟು ವ್ಯಾಪಾರದಲ್ಲಿ ಲಾಭ ಪಡೆಯಬಹುದು.
ಮಿಥುನ
ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಕೈಗೊಳ್ಳುವ ನಿರ್ಧಾರಗಳು ಫಲಪ್ರದವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ತರಲಿದೆ. ಧಾನ್ಯಗಳ ಸಂಗ್ರಹದಿಂದ ಮುಂದಿನ ದಿನಗಳಲ್ಲಿ ಲಾಭ ಪಡೆಯಬಹುದು.
ಕರ್ಕಾಟಕ
ಮಿತ್ರವರ್ಗದವರ ಸಹಾಯದಿಂದ ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ಸಿಗಲಿದೆ. ಪ್ರಾಮಾಣಿಕತೆಯನ್ನು ಇಟ್ಟುಕೊಳ್ಳುವುದು ಕಷ್ಟ ಎನಿಸಿದರೂ, ಬಿಡುವುದು ಬೇಡ. ಲೇವಾದೇವಿ ವ್ಯವಹಾರ ಲಾಭ ತರಲಿದೆ.
ಸಿಂಹ
ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹೆಸರು ಹಾಳು ಮಾಡಿಕೊಳ್ಳುವ ಸಂಭವವಿದೆ, ಜಾಗ್ರತೆ ವಹಿಸಿ. ವಿಶ್ರಾಂತಿಯಿಲ್ಲದ ಕಾರ್ಯಗಳಿಂದ ರಕ್ತದೊತ್ತಡದಂಥ ಅನಾರೋಗ್ಯ ಉಂಟಾಗಬಹುದು.
ಕನ್ಯಾ
ನವ ಉಲ್ಲಾಸದಿಂದ ಈ ದಿನ ಆರಂಭವಾಗಲಿದೆ.ಅಕ್ಕಪಕ್ಕದಲ್ಲಿ ಹಲವಾರು ಸಂಗತಿಗಳು ತಿಳಿಯುವುದು. ಆದಾಯ ತೆರಿಗೆ ಇಲಾಖೆಯವರಿಗೆ ನಿಮ್ಮ ಲೆಕ್ಕಪತ್ರಗಳು ಸಮರ್ಪಕವಾಗಿರುವ ರೀತಿಯಲ್ಲಿ ವ್ಯವಹಾರವಿರಲಿ.
ತುಲಾ
ಏಕಕಾಲದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುವ ಪ್ರಯತ್ನದಿಂದ ಎಲ್ಲದರಲ್ಲೂ ಅಪಕೀರ್ತಿ ಉಂಟಾಗಬಹುದು. ಒಂದು ಕೆಲಸವನ್ನು ಮುಗಿಸಿ ನಂತರ ಮತ್ತೊಂದರ ಬಗ್ಗೆ ಯೋಚಿಸಿ. ಮಾರಾಟಗಾರರಿಗೆ ವಿಶೇಷ ದಿನ.
ವೃಶ್ಚಿಕ
ಯೋಜನೆಗಳನ್ನು ಇತರರು ಒಮ್ಮನಸ್ಸಿನಿಂದ ಸ್ವೀಕರಿಸುವಂತೆ ಮಾಡುವ ಸಾಮರ್ಥ್ಯ ಅದ್ಭುತವಾದದ್ದು. ಪೋಸ್ಟಲ್, ಕೊರಿಯರ್ ಮತ್ತು ಮನೆಬಾಗಿಲ ಸೇವೆಯ ಕ್ಷೇತ್ರದವರಿಗೆ ಕೆಲಸದ ಭಾರ ಹೆಚ್ಚಾಗುತ್ತದೆ.
ಧನು
ಕೌಟುಂಬಿಕವಾಗಿ ಯಾವುದೇ ತೊಂದರೆ ಎದುರಾದರೂ ಎದುರಿಸುವ ಸಾಮರ್ಥ್ಯ ಇರುತ್ತದೆ, ಧೈರ್ಯಗೆಡುವ ಅವಶ್ಯಕತೆ ಇಲ್ಲ. ಲೆಕ್ಕಪತ್ರ ಪರಿಶೋಧಕರಿಗೆ ಕೆಲಸದಲ್ಲಿ ಸಂತೃಪ್ತಿ ಉಂಟಾಗುವುದು.
ಮಕರ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಜತೆ ಜಾಣ್ಮೆಯಿಂದ ವ್ಯವಹರಿಸಿ. ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅವರಿಂದ ನಡೆಯಬಹುದು. ಈಶ್ವರ ಆರಾಧನೆಯಿಂದ ಶತ್ರು ನಿವಾರಣೆ.
ಕುಂಭ
ಹಲವು ದಿನಗಳ ಪರಿಶ್ರಮದ ಜತೆ ವರಿಷ್ಠರ ಸಹಾಯ ಸೇರಿಕೊಂಡು ರಾಜಕೀಯ ಪಕ್ಷದಲ್ಲಿ ಉನ್ನತ ಹುದ್ದೆ ಪ್ರಾಪ್ತಿ . ಮನೆಯಲ್ಲಿ ಅತಿಥಿ ಸತ್ಕಾರ ನಡೆಯಲಿದೆ. ದೇವರ ಕೃಪೆಯಿಂದ ನಿರೀಕ್ಷೇಗೂ ಮೀರಿದ ಜಯ ಸಿಗುವುದು.
ಮೀನ
ಎಲೆಕ್ಟ್ರಾನಿಕ್ ವಸ್ತುಗಳಿಂದ ಆದಾಯ ಹೆಚ್ಚುವುದು. ಹಣಕಾಸಿನಲ್ಲಿ ವ್ಯತ್ಯಾಸಗಳಾಗಿ ಉದ್ಯೋಗದಲ್ಲಿ ಛೀಮಾರಿ ಕೇಳಬೇಕಾದ ಪ್ರಸಂಗ ಬರಬಹುದು. ದೂರ ಸಂಚಾರ ಮಾಡಬೇಕಾಗುವುದು.