ಗುರುವಾರ, 25 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸನ್ನು ಹೊಂದುವಿರಿ
Published 25 ಸೆಪ್ಟೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಹುದ್ದೆಯಲ್ಲಿ ಕಷ್ಟಗಳ ಪರ್ವತವೇ ಇದ್ದರೂ ಗೌರವ ದೊರೆಯುವ ಕಾರಣದಿಂದ ಸಮಾಧಾನವನ್ನು ಉಂಟುಮಾಡುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ಕಲೆಯನ್ನು ಕಲಿಯಬೇಕಾಗುವುದು.
ವೃಷಭ
ಮುಂದಾಲೋಚನೆ ಇಲ್ಲದೇ ಯಾರಿಗೂ ಭರವಸೆಯನ್ನೂ ನೀಡಬೇಡಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರಾದರೂ ಆತಂಕಕ್ಕೆ ಕಾರಣವಾಗಬೇಕಿಲ್ಲ, ಮನೆಮದ್ದುಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಮಿಥುನ
ಪ್ರೀತಿ ಪಾತ್ರರೊಂದಿಗೆ ಭವಿಷ್ಯದ ಯೋಜನೆಗಳ ಹಾಗೂ ಜೀವನದ ಗುರಿ ತಲುಪುವ ಬಗ್ಗೆ ಗಂಭೀರ ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ. ದಿನಾಂತ್ಯದಲ್ಲಿ ಅಧಿಕ ಆಯಾಸವಿರುವುದು.
ಕರ್ಕಾಟಕ
ಮನೆಯ ಖರ್ಚು ವೆಚ್ಚಗಳ ಮೇಲಿನ ಈಗಿನ ನಿಮ್ಮ ನಿರ್ಲಕ್ಷ್ಯವು ಮುಂದೊಂದು ದಿನದ ಹಣದ ಅಭಾವಕ್ಕೆ ಕಾರಣವಾಗಬಹುದು. ಕುಟುಂಬದ ಮುಖ್ಯ ಸಂಗತಿಗಳನ್ನು ಏನಾದರೂ ಮರೆತೆನೇ ಎಂದು ಜ್ಞಾಪಿಸಿಕೊಳ್ಳಿ.
ಸಿಂಹ
ರೇಷ್ಮೆ ನೇಕಾರರು ತಮ್ಮ ಉತ್ತಮಮಟ್ಟದ ನೇಯ್ಗೆಯಿಂದ ಏಳಿಗೆ ಹೊಂದುವ ಸಾಧ್ಯತೆಗಳಿವೆ. ಪ್ರಾಕೃತ ಭಾಷಾತಜ್ಞರಿಗೆ ಮತ್ತು ಗಣಿತಜ್ಞರಿಗೆ ಬೇಡಿಕೆ ಹೆಚ್ಚಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ಕನ್ಯಾ
ಗಿರವಿ ಇಟ್ಟ ಆಭರಣಗಳನ್ನು ಆದಷ್ಟು ಬೇಗ ಬಿಡಿಸಿಕೊಳ್ಳುವ ಯೋಜನೆ ಮಾಡುವುದು ಸೂಕ್ತಕರ. ಘಟನೆ ಪಾಲುದಾರಿಕೆಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ.
ತುಲಾ
ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಆತ್ಮವಿಶ್ವಾಸದಿಂದಾಗಿ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸನ್ನು ಹೊಂದುವಿರಿ.
ವೃಶ್ಚಿಕ
ವೃತ್ತಿ ಜೀವನಕ್ಕೆ ಬಹಳ ಅವಶ್ಯಕ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ವಿಚಾರಗಳಲ್ಲಿನ ಭಾವಶೂನ್ಯತೆ ಕುಟುಂಬ ವರ್ಗದವರಿಗೆ ನುಂಗಲಾರದ ತುತ್ತಿನಂತೆ ಕಾಣುತ್ತದೆ.
ಧನು
ಕೃಪಣತೆಯನ್ನು ಹೆಚ್ಚು ಪ್ರದರ್ಶಿಸಿ ಮನೆಯ ಸಾಮಗ್ರಿಗಳನ್ನು ತಂದು ಹಾಕುವಲ್ಲಿ ಕಡಿಮೆ ಮಾಡಿ ಮನೆಯವರ ಅಸಮಾಧಾನಕ್ಕೆ ಕಾರಣವಾಗಬೇಡಿ. ಸರಿ–ತಪ್ಪು ತೀರ್ಮಾನ ಹೇಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ.
ಮಕರ
ಮಡದಿಯ ಅಥವಾ ಸಹೋದರನ ಕೆಲವು ಅಹಿತಕರ ನಡವಳಿಕೆಗಳು ಅಪಮಾನ ಆದಂತೆ ಆಗಬಹುದು. ಉಪನ್ಯಾಸಕಲೆಯನ್ನು ಹೊಂದಿದವರಿಗೆ ಉತ್ತಮವಾದ ವೇದಿಕೆ ಪ್ರಾಪ್ತಿ. ಸಂಜೆಯ ವೇಳೆಗೆ ಶುಭ ಸುದ್ದಿ ಕೇಳುವಿರಿ.
ಕುಂಭ
ಪ್ರಾಚೀನ ಕಾಲದಿಂದ ಪೂರ್ವಿಕರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಕೈಬಿಡುವ ಯೋಚನೆ ಮಾಡಬೇಡಿ. ಭೂಮಿಯ ಮಾರಾಟದ ವಿಚಾರದಲ್ಲಿ ಆತುರದ ನಿರ್ಧಾರ ಒಳ್ಳೆಯದಲ್ಲ.
ಮೀನ
ವೈವಾಹಿಕ ಜೀವನದಲ್ಲಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಪಕ್ಕವಾದ್ಯ ಪ್ರವೀಣರಿಗೆ ಸಮಾರಂಭಗಳಲ್ಲಿ ಉತ್ತಮ ಮನ್ನಣೆ.
ADVERTISEMENT
ADVERTISEMENT