ಮಂಗಳವಾರ, 11 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಂಬಿದವರೇ ನಡುನೀರಿನಲ್ಲಿ ಕೈಬಿಡುವಂತೆ ಮಾಡಬಹುದು
Published 11 ನವೆಂಬರ್ 2025, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಅಸಮಾಧಾನ ಹೊಂದಬೇಡಿ.
ವೃಷಭ
ಹಲವಾರು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸ ಬಹುದು. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ಸ್ಥಾನಗಳಿಸುವಲ್ಲಿ ಸಫಲರಾಗುವಿರಿ.
ಮಿಥುನ
ಉಂಟಾಗುತ್ತಿರುವ ದೈಹಿಕ ಬದಲಾವಣೆಗಳು ಔಷಧದ ಅಡ್ಡಪರಿಣಾಮಗಳೇ ಎಂದು ಪರೀಕ್ಷಿ ಸಿಕೊಳ್ಳಿರಿ. ಸಾಧ್ಯವಾದಷ್ಟು ಶಾಂತಚಿತ್ತದಿಂದ ಕೆಲಸ ಸಾಧಿಸಿ. ಸಂಧಿವಾತ ಕಾಡಬಹುದು.
ಕರ್ಕಾಟಕ
ಮರಗೆಲಸ ಮಾಡುವವರಿಗೆ ಅವಕಾಶಗಳು ಬಂದರೂ ಕೆಲಸಕ್ಕೆ ಸೋಮಾರಿತನ ಅಡ್ಡಿ ಉಂಟುಮಾಡುವುದು. ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳನ್ನು ಆರಂಭಿಸಿ.
ಸಿಂಹ
ಆರ್ಥಿಕ ಬಲವನ್ನು ಮತ್ತು ನೆಮ್ಮದಿ ಇಲ್ಲದೇ ಇರುವುದರಿಂದ ಮಹಾಗಣಪತಿಯ ಆರಾಧನೆ ಶುಭ ಉಂಟುಮಾಡುವುದು. ಹೊಗಳಿಕೆಯ ಮಾತುಗಳನ್ನು ಕೇಳಿ ಸಂತೋಷ ಹೊಂದುವಿರಿ.
ಕನ್ಯಾ
ಬಾಣಸಿಗರಿಗೆ ಕಾರ್ಯದ ಶುಚಿತ್ವವು ರುಚಿತ್ವದಷ್ಟೇ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಮೇಲಧಿಕಾರಿಯ ಅಪರೂಪದ ಮೃದು ವರ್ತನೆಯಿಂದ ಕಾರ್ಯಗಳಲ್ಲಿ ತೃಪ್ತಿಯುಂಟಾಗುವುದು.
ತುಲಾ
ವಿವಾಹ ವಿಚಾರವಾಗಿ ಮುಂದುವರಿದ ಸಂಬಂಧಗಳು ವಿನಾಕಾರಣ ಮುರಿದು ಬೀಳಲಿವೆ. ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೆಜ್ಜೆಹಾಕುವ, ಹೊಂದಿಕೊಳ್ಳುವ ಅನಿವಾರ್ಯ ಕಂಡುಬರುತ್ತದೆ.
ವೃಶ್ಚಿಕ
ನಿಮ್ಮೊಳಗಿನ ಹಲವು ವರ್ಷಗಳ ದುಃಖ ಪ್ರಕಾಶಿಸಲಿದೆ. ಅಚ್ಚರಿಯನ್ನು ಉಂಟು ಮಾಡಬಹುದು. ಕೆಟ್ಟ ಹಾಗೂ ಅನವಶ್ಯಕ ಆಲೋಚನೆಗಳು ಅನಾರೋಗ್ಯವನ್ನು ಅಧಿಕಗೊಳಿಸುವುದು.
ಧನು
ತಿಳಿಯದೆ ಮಾಡಿದ ತಪ್ಪಿನಿಂದ ಅನುಭವಿಸುತ್ತಿರುವ ಕಷ್ಟಗಳಿಗೆ ಪರಿಹಾರವನ್ನು ಪ್ರಾಜ್ಞರಿಂದ ಪಡೆಯಿರಿ. ಮಕ್ಕಳೊಂದಿಗಿನ ಸಂಜೆಯ ಸುತ್ತಾಟ, ಮಾತುಕತೆ ಮನಸ್ಸಿಗೆ ಹಿತ ತರಲಿದೆ.
ಮಕರ
ವಿದ್ಯಾರ್ಥಿ ಜೀವನವನ್ನು ಇಷ್ಟ ಪಡುವವರಿಗೆ ಅಧ್ಯಯನಕ್ಕೆ ಸಕಾಲ. ನಂಬಿಕೆಯನ್ನು ಇಟ್ಟಿರುವ ವ್ಯಕ್ತಿಗಳೇ ನಡುನೀರಿನಲ್ಲಿ ಕೈಬಿಡುವಂತೆ ಮಾಡಬಹುದು.
ಕುಂಭ
ನಡೆದು ಹೋದ ದುರ್ಘಟನೆಗಳನ್ನು ಪದೇ ಪದೇ ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ. ಮಕ್ಕಳ ಮೇಲಿನ ಅತಿ ಮೋಹವು ಅವರ ಶ್ರೇಯೋಭಿವೃದ್ಧಿಗೆ ತೊಡಕಾಗಲಿದೆ.
ಮೀನ
ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳಲಿವೆ. ಸ್ವ ಅಧ್ಯಯನ ಮಾಡುವವರಿಗೆ ಸರಳವಾಗಿ ಅರ್ಥವಾಗುವ ಪುಸ್ತಕಗಳು ದೊರೆತು ಅಧ್ಯಯನಕ್ಕೆ ಅನುಕೂಲವಾಗುವುದು.
ADVERTISEMENT
ADVERTISEMENT