ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ‘ಟೀಮ್ ಗೇಮ್ ಚೇಂಜರ್ಸ್’ ಬಳಗದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಖಚಿತಪಡಿಸಿದರು. ಇನ್ನುಳಿದ ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿಯ ಸದಸ್ಯ ಸ್ಥಾನಗಳ ಅಭ್ಯರ್ಥಿಗಳ ಹೆಸರುಗಳನ್ನೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟೇಶಪ್ರಸಾದ್, ‘ನಮ್ಮ ತಂಡವು ಚುನಾವಣೆಗೆ ಸ್ಪರ್ಧಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕರ್ನಾಟಕದ ಕ್ರಿಕೆಟ್ ವೈಭವವನ್ನು ಮರಳಿ ತರುವುದಾಗಿದೆ. ಹೋದ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರ್ಘಟನೆಯ ನಂತರ ರಾಜ್ಯದ ಕ್ರಿಕೆಟ್ಗೆ ಹಿನ್ನಡೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಒಂದೇ ಒಂದು ಪಂದ್ಯವನ್ನೂ ಇಲ್ಲಿಗೆ ನೀಡಲಾಗಿಲ್ಲ. ಇದು ಬೇಸರದ ಸಂಗತಿ. ನಾವು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ (ಬಿಸಿಸಿಐ) ಸಮನ್ವಯ ಸಾಧಿಸಿ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಮತ್ತೆ ಟಿ20 ವಿಶ್ವಕಪ್ ಪಂದ್ಯಗಳನ್ನು ಆಯೋಜನೆ ಮಾಡುತ್ತೇವೆ’ ಎಂದರು.

‘2010 ರಿಂದ 2013ರವರೆಗೆ ಅನಿಲ್ ಕುಂಬ್ಳೆ ಅಧ್ಯಕ್ಷತೆಯಲ್ಲಿ ನಾನು ಉಪಾಧ್ಯಕ್ಷನಾಗಿದ್ದೆ. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ನಲ್ಲಿ ಮೂಲಸೌಲಭ್ಯಗಳು ಅಭಿವೃದ್ಧಿಯಾದವು. ಗ್ರಾಮಾಂತರ ಪ್ರದೇಶದಲ್ಲಿ ಮೈದಾನಗಳು ನಿರ್ಮಾಣವಾದವು. ಮತ್ತೊಮ್ಮೆ ಅಂತಹದೇ ಆಡಳಿತವನ್ನು ನೀಡಲು ನಾವು ಬದ್ಧರಾಗಿದ್ದೇವೆ’ ಎಂದು ಪ್ರಸಾದ್ ಹೇಳಿದರು.

ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ದ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ (ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ) ನಿರ್ದೇಶಕ ಕೆ.ಎನ್. ಶಾಂತಕುಮಾರ್ ಅವರ ಎದುರು ಪ್ರಸಾದ್ ಕಣಕ್ಕಿಳಿಯಲಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಸುಜಿತ್ ಸೋಮಸುಂದರ, ‘ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಇರುವ ಕ್ರಿಕೆಟ್ ಮೈದಾನಗಳು ಮತ್ತು ಸೌಲಭ್ಯಗಳ ನಿರ್ವಹಣೆ ಸರಿಯಾಗಿಲ್ಲ. ಬಹಳಷ್ಟು ಅವ್ಯವಸ್ಥೆಗಳು ಇವೆ’ ಎಂದರು. ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ಸ್ಲೈಡ್ ಮೂಲಕ ಪ್ರದರ್ಶಿಸಿದರು.

‘ಗ್ರಾಮಾಂತರ ಪ್ರದೇಶದ ಪ್ರತಿಭಾನ್ವಿತ ಮಕ್ಕಳಿಗೆ ತರಬೇತಿ ನೀಡುವ ಕೆಎಸ್ಸಿಎ ಅಕಾಡೆಮಿಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳೂ ನಡೆದಿಲ್ಲ. ವಿವಿಧ ವಿಭಾಗಗಳಲ್ಲಿ ಟೂರ್ನಿಗಳು ಮತ್ತು ಪಂದ್ಯಗಳನ್ನು ಹೆಚ್ಚಿಸಿ ಮಕ್ಕಳಿಗೆ ಬೆಳೆಯುವ ಅವಕಾಶ ನೀಡಬೇಕಿತ್ತು. ಆದರ ಬದಲಿಗೆ ಪಂದ್ಯಗಳ ಸಂಖ್ಯೆ ಕಡಿಮೆಯಾಗಿವೆ’ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ತಮ್ಮ ಬೆಂಬಲವನ್ನು ಪ್ರಸಾದ್ ಮತ್ತು ತಂಡಕ್ಕೆ ನೀಡುವುದಾಗಿ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಘೋಷಿಸಿದರು.

‘ನಾವು ಅಧಿಕಾರದಲ್ಲಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದವು. ಆಟಗಾರರು ಮತ್ತು ಅಭಿಮಾನಿಗಳಿಂದ ಕ್ರಿಕೆಟ್ ಬೆಳೆಯುತ್ತದೆ. ಆದರೆ ಅವರನ್ನೇ ಕಳೆದ ಒಂದು ದಶಕದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ನನಗನಿಸುತ್ತದೆ. ರಣಜಿ ಟ್ರೋಫಿ ಟೂರ್ನಿಯ ಗೆಲುವಿನಲ್ಲಿ ಮುಂಬೈ ನಂತರದ ಸ್ಥಾನದಲ್ಲಿ ನಾವಿದ್ದೆವು. ಆದರೆ ಇತ್ತೀಚೆಗೆ ಆ ವೈಭವ ಕಳೆದುಹೋಗಿದೆ’ ಎಂದು ಅನಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.