ದಿನ ಭವಿಷ್ಯ: ಕುಟುಂಬದಲ್ಲಿರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸುದಿನ
Published 10 ನವೆಂಬರ್ 2025, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸದಾಕಾಲ ಹಿತ ಬಯಸುವ ಕುಟುಂಬ ಸದಸ್ಯರನ್ನು ಹೊಂದಿರುವುದರಿಂದ ಮಾನಸಿಕ ಸ್ಥೈರ್ಯ ಸದೃಢವಾಗುವುದು. ನಿಮ್ಮನ್ನು ಎದುರು ಹಾಕಿಕೊಳ್ಳುವವರಿಗೆ ತಕ್ಕ ಉತ್ತರವನ್ನು ದೇವರು ನೀಡುತ್ತಾನೆ.
ವೃಷಭ
ದುಡುಕು ನಿರ್ಧಾರಗಳಿಂದ ವ್ಯವಹಾರದಲ್ಲಿ ಸೋಲಿನ ಕಹಿ ಅನುಭವಿಸಬೇಕಾಗುತ್ತದೆ. ಕುಟುಂಬದ ಅಭಿವೃದ್ಧಿಗೆ ಉತ್ತಮ ಯೋಚನೆಗಳು ಬರಲಿವೆ. ಅದನ್ನು ಉಪಯೋಗಿಸಿಕೊಳ್ಳಿ.
ಮಿಥುನ
ಸಂಗಾತಿಯೊಂದಿಗೆ ಇದ್ದ ದೀರ್ಘಕಾಲದ ಸಮಸ್ಯೆಗಳನ್ನು ಸಮಾಧಾನದಿಂದ ಮಾತನಾಡಿ ಪರಿಹರಿಸಿಕೊಳ್ಳಿ. ಪ್ರಯಾಣದ ವೇಳೆ ಸ್ನೇಹಿತರೊಂದಿಗೆ ಭೋಗ ವಸ್ತುವಿನ ಖರೀದಿ ಅವಕಾಶ ಸಿಗಲಿದೆ.
ಕರ್ಕಾಟಕ
ದಾಂಪತ್ಯ ಜೀವನದಲ್ಲಿ ತಾಳ್ಮೆಯಿದ್ದರೆ ಸುಖ, ಶಾಂತಿ, ನೆಮ್ಮದಿ ದೊರಕುವುದು. ಯಾರದ್ದೋ ತಪ್ಪುಗಳಿಗೆ ಅಧಿಕಾರಿಗಳ ಜತೆಯಲ್ಲಿ ನೀವೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಸಿಂಹ
ಹೊಸ ಸ್ಥಳದಲ್ಲಿ ಹೊಂದಾಣಿಕೆ ಕಷ್ಟಕರ ಎನಿಸಬಹುದು.
ವಿದ್ಯಾಭ್ಯಾಸದಲ್ಲಿನ ನಿಮ್ಮ ಸಾಧನೆಗೆ ನಿಮ್ಮ ಗುರುಗಳ ಕಡೆಯಿಂದ ಉತ್ತಮವಾಗಿ ಪ್ರೋತ್ಸಾಹ ಸಿಗುವುದು.
ಕನ್ಯಾ
ಕಾರ್ಯವೈಖರಿಯನ್ನು ಬದಲಾಯಿಸಿಕೊಂಡಲ್ಲಿ ಕೆಲಸವು ಇನ್ನಷ್ಟು ಸರಾಗವಾಗುವುದು. ಕೆಲವು ಆಲೋಚನಾರಹಿತ ಮಾತುಗಳಿಂದ ಉಳಿದವರು ಆಭಾಸಕ್ಕೆ ಒಳಗಾಗುತ್ತಾರೆ.
ತುಲಾ
ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಸಂಘಟಿಸಲು ಸುದಿನ. ಸಾಧಿಸಲೇಬೇಕೆಂಬ ಛಲದ ಕೊರತೆಯಿಂದ ಕಾರ್ಯಗಳೆಲ್ಲವೂ ಅರ್ಧದ ಹಾದಿ ನೋಡುವುದು.
ವೃಶ್ಚಿಕ
ವಿನಾಕಾರಣ ಬೇರೆಯವರ ಮನಸ್ಸನ್ನು ನೋಯಿಸುವುದು ಸರಿಯಲ್ಲವೆಂದು ಗೊತ್ತಿದ್ದೂ ತಪ್ಪುಗಳು ನೆರೆವೇರಬಹುದು. ಸರ್ಕಾರಿ ಉನ್ನತ ಅಧಿಕಾರಿಗಳಿಗೆ ವರ್ಗಾವಣೆ ಇದೆ.
ಧನು
ಮನೆಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವಿದ್ದರೂ ಅನಿವಾರ್ಯ ಕಾರಣಗಳಿಂದ ತಪ್ಪಿಸಿಕೊಳ್ಳ ಬೇಕಾಗಬಹುದು. ವ್ಯಾವಹಾರಿಕವಾದ ಕಲ್ಪನೆಗಳು ಗರಿಗೆದರಲಿವೆ.
ಮಕರ
ಹೊಸ ವಿಷಯದ ಅಧ್ಯಯನಕ್ಕೆ ಬೇಕಾದ ಪೂರಕ ವಾತಾವರಣವನ್ನುರೂಪಿಸಿಕೊಳ್ಳಿ. ಸೌಂದರ್ಯವರ್ಧಕಗಳ ಮಾರಾಟಗಾರರಿಗೆ ಹೆಚ್ಚಿನ ಲಾಭದ ದಿನ.
ಕುಂಭ
ಅನಾರೋಗ್ಯದ ಹೊರತಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸ ಲೇಬೇಕಾದುದು ಮಾನಸಿಕ ಸಂಕಟಕ್ಕೆ ಕಾರಣವಾಗಬಹುದು. ಕೆಲವು ಕಳಪೆ ವಸ್ತುಗಳು ದೊರೆಯಲಿವೆ.
ಮೀನ
ಸ್ವಂತ ಉದ್ಯಮದಲ್ಲಿರುವವರು ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಉತ್ಸಾಹ ತೋರಿ ಅದರಲ್ಲಿ ಸಫಲತೆಯನ್ನು ಹೊಂದುವರು. ಪೀಠೋಪಕರಣಗಳ ಖರೀದಿಗೆ ಶುಭ ದಿನ.