ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ
Published 8 ಜುಲೈ 2024, 0:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬದುಕಿನಲ್ಲಿ ನಡೆದ ಅತ್ಯಂತ ಮುಖ್ಯಘಟ್ಟವನ್ನು ಕಾರಣಾಂತರದಿಂದ ಸ್ಮರಣೆ ಮಾಡುವಿರಿ. ಎಂಥ ಸಂದರ್ಭದಲ್ಲೂ ಒತ್ತಡಕ್ಕೆ ಸಿಲುಕದೆ ಕಾರ್ಯನಿರ್ವಹಿಸುವ ವೈಖರಿಯಿಂದ ಗುರುತಿಸಲ್ಪಡುವಿರಿ.
ವೃಷಭ
ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಅತಿಯಾದ ಖರ್ಚುವೆಚ್ಚಗಳು ತಗ್ಗುವುದು.
ಮಿಥುನ
ನೂತನ ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ. ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ನಿಗಾ ವಹಿಸಿ.
ಕರ್ಕಾಟಕ
ಆರೋಪದ ಮಾತುಗಳು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದಕ್ಕೆ ಜೀವನ ಸಾಕ್ಷಿಯಾಗಲಿದೆ. ಲಕ್ಷ್ಯಗೊಟ್ಟು ಕೇಳಿದ ವಿಷಯಗಳು ಕ್ಲಿಪ್ತ ಸಮಯದಲ್ಲಿ ಪ್ರಯೋಜನಕ್ಕೆ ಬರಲಿದೆ.
ಸಿಂಹ
ಹೆಚ್ಚಿನ ಶ್ರಮವಹಿಸಿ ಕೆಲಸ ನಿರ್ವಹಿಸಿದ ಕಾರಣದಿಂದಾಗಿ ದೇಹಾಯಾಸವು ಅಧಿಕವಾಗಿ ಕಾಡುವುದು. ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಅಧಿಕಾರ ಪಡೆದುಕೊಳ್ಳುವಿರಿ. ಪರಿವರ್ತನೆ ಬಾಳಲ್ಲಿ ಬರಲಿದೆ.
ಕನ್ಯಾ
ಕೈಗೊಂಡ ಕೆಲಸಗಳ ಬಗೆಗೆ ಮುತುವರ್ಜಿ ವಹಿಸುವುದರಿಂದ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗವಿದೆ. ಶುಭ ಸುದ್ದಿ ಕೇಳುವಿರಿ.
ತುಲಾ
ಸೂಕ್ತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಳ್ಳದೆ ಕಡೆ ಗಳಿಗೆಯಲ್ಲಿ ಕಷ್ಟಪಡುವಿರಿ. ನೂತನ ವಸ್ತ್ರವನ್ನು ಇತರರಿಗೆ ಕೊಡುವಂಥ ದೃಷ್ಟಿಯಿಂದ ಕೊಂಡುಕೊಳ್ಳುವಿರಿ. ಪರಿಶ್ರಮಕ್ಕೆ ತಕ್ಕ ಯಶಸ್ಸು ಕಾಣುವಿರಿ.
ವೃಶ್ಚಿಕ
ಬಹುದಿನದಿಂದ ಮುಂದೂಡಲ್ಪಟ್ಟಿದ್ದ ದೂರದ ಪ್ರಯಾಣ ಅನಿವಾರ್ಯತೆಯ ಸನ್ನಿವೇಷದಿಂದ ಕೈಗೊಳ್ಳಬೇಕಾಗುತ್ತದೆ. ಶುಭ್ರವಾದಂತಹ ಉಡುಗೆ ತೊಡುಗೆಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತದೆ.
ಧನು
ತಾರುಣ್ಯದಲ್ಲಿದ್ದಾಗ ಮಾಡಿದ ಬುದ್ಧಿವಂತಿಕೆಯ ಕೆಲಸವು ವೃದ್ಧಾಪ್ಯದಲ್ಲಿ ಅನುಕೂಲವಾಗಲಿದೆ. ದೊಡ್ಡದಾದ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಭಾಯಿಸಿದ ಪಾತ್ರ ನಿಮ್ಮನ್ನು ಸಂತೃಪ್ತರನ್ನಾಗಿಸುತ್ತದೆ.
ಮಕರ
ಲೋಹದ ಕಾರ್ಖಾನೆಯವರು, ಚಿನ್ನಾಭರಣ ವ್ಯಾಪಾರಿಗಳು ಉದ್ಯೋಗದಲ್ಲಿ ಅಧಿಕ ಲಾಭ ಹೊಂದುವಿರಿ. ಕೋಪ ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗುವುದು. ಜಗದ್ಗುರು ಸೇವೆಯಿಂದ ಅಭೀಷ್ಟಸಿದ್ಧಿ.
ಕುಂಭ
ಕಷ್ಟಗಳನ್ನು ಎದುರಿಸುವಂಥ ಶಕ್ತಿಯು ನಿಮಗಿಂತ ಕಷ್ಟಪಡುತ್ತಿರುವಂಥ ವ್ಯಕ್ತಿಗಳನ್ನು ನೋಡಿ ಪಡೆದು ಕೊಳ್ಳುವಿರಿ. ಚರ ಆಸ್ತಿಯನ್ನು ಮಾರಾಟ ಮಾಡಿದರೆ ನಷ್ಟ ಸಂಭವಿಸುವುದು. ವೃತ್ತಿಯಲ್ಲಿ ಪೈಪೋಟಿ ಇರಲಿದೆ.
ಮೀನ
ಮುಜುಗರದ ತೆರೆಗಳನ್ನು ದಾಟಿ ಮನೋಭಿಲಾಷೆಯಂತೆ ಪತಿಯ ಗೃಹದಲ್ಲಿಯು ಜೀವನವನ್ನು ಪ್ರಾರಂಭಿಸುವಿರಿ. ಒಳ ಮನಸ್ಸಿಗೆ ಗೋಚರಿಸಿದ ಅವಘಡವು ನಿಜವಾಗುವ ಸಂಭವವಿದೆ.