ಮಂಗಳವಾರ, 8 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ವಾಮಮಾರ್ಗ ಬೇಡ
Published 7 ಜುಲೈ 2025, 22:53 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಕೋಚವಿಲ್ಲದೆ ನೂತನ ಕಾರ್ಯಭಾರ ಹೆಗಲಿಗೇರಿಸಿಕೊಳ್ಳಿ. ನಂಬುಗೆ ಮತ್ತು ವಿಶ್ವಾಸದಿಂದ ಅವಕಾಶಗಳು ನಿಮ್ಮದಾಗಲಿವೆ. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ವೃಷಭ
ನಾನಾ ರೀತಿಯಲ್ಲಿ ಹಣವು ಕೈ ಸೇರಲಿದೆ. ಬಂಧುಮಿತ್ರರಿಂದ ಉತ್ತಮ ಸಹಕಾರ ಲಭ್ಯ. ಗಣ್ಯವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ, ಗೌರವಗಳು ಲಭಿಸಲಿವೆ.
ಮಿಥುನ
ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗಲಿದೆ. ಗಣನೀಯ ಆದಾಯವಿದ್ದರೂ ಜೊತೆಯಲ್ಲಿಯೇ ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸ ಬೇಕಾಗಬಹುದು.
ಕರ್ಕಾಟಕ
ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ತಾಯಿಗೆ ಕಣ್ಣಿನ ದೋಷ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ವೈದ್ಯರನ್ನು ಭೇಟಿ ಮಾಡಿ. ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸದಿರಿ.
ಸಿಂಹ
ತಾಂತ್ರಿಕ ಕ್ಷೇತ್ರದಲ್ಲಿ ಜೀವನ ನಡೆಸುವವರು ಉದ್ಯೋಗದಲ್ಲಿ ದಂಡ ಕಟ್ಟುವ ಸ್ಥಿತಿ ಬರಬಹುದು. ಜಾಗ್ರತೆಯಿಂದ ಕೆಲಸ ಮಾಡಿ. ಹಸಿರು ಬಣ್ಣ ಶುಭ ತರಲಿದೆ.
ಕನ್ಯಾ
ಗಣಿತದಲ್ಲಿ ಅಥವಾ ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ. ಸರ್ಕಾರಿ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಕೈಗೊಳ್ಳುವ ಬಗ್ಗೆ ಪರಿಶ್ರಮವಿರಲಿ. ಶುಭ ಕಾರ್ಯಗಳು ನೆರವೇರುವುದು.
ತುಲಾ
ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆ ಗಳಾಗಬಹುದು. ವೈದ್ಯರಿಗೆ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗಬಹುದು.
ವೃಶ್ಚಿಕ
ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಲಾಭದಾಯಕ . ವಿದ್ಯಾರ್ಥಿಗಳಿಗೆ ಶ್ರಮದಿಂದ ಉನ್ನತ ಶ್ರೇಣಿ ಲಭಿಸುವುದು. ಗಂಟಲು ಬೇನೆ ಬರಬಹುದು. ಸಮ್ಮಿಶ್ರ ಫಲ ಕಾಣುವಿರಿ. ಕುಲದೇವರ ಸೇವೆಯಿಂದ ಫಲ ಲಭಿಸಲಿದೆ.
ಧನು
ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ಭರವಸೆಯಂತೆ ನಡೆದುಕೊಳ್ಳುವಿರಿ. ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಅವಲೋಕಿಸಲು ಉತ್ತಮ ದಿನ . ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ವಾಮಮಾರ್ಗ ಬೇಡ.
ಮಕರ
ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಭವಿಷ್ಯದ ದೃಷ್ಟಿಯಿಂದ ಕೆಲಸ ದೊಡ್ಡದು ಸಣ್ಣದು ಎಂಬ ಯೋಚನೆ ಮಾಡದೇ ಕಾರ್ಯೋನ್ಮುಖರಾಗುವುದು ಉತ್ತಮ.
ಕುಂಭ
ಆಹಾರ ಪದಾರ್ಥಗಳಿಂದ ಲಾಭ ಸಿಗಲಿದೆ. ಮುಖ್ಯ ಸಲಹೆ ಪಡೆಯಲಿದ್ದು, ಅದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಮುಂದಿನ ಹಾದಿ ಏನೆಂಬುದು ಸ್ಪಷ್ಟವಾಗಲಿದೆ. ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಲಿದ್ದೀರಿ.
ಮೀನ
ಏನನ್ನಾದರೂ ಸಾಧಿಸಲೇಬೇಕೆಂದಿರುವ ನಿಮಗೆ ಆತ್ಮವಿಶ್ವಾಸದ ಕೊರತೆ ಕಾಣಿಸದು. ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ. ಅತಿ ಔದರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿ ಗಮನಿಸಿಕೊಳ್ಳಿ
ADVERTISEMENT
ADVERTISEMENT