ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯದ ಸಾಧ್ಯತೆ ಇದೆ
Published 17 ಜುಲೈ 2024, 22:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಏಕಾಗ್ರತೆ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತವೆ. ಆತ್ಮೀಯನಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಉದ್ಯೋಗದ ವಿಷಯದಲ್ಲಿದ್ದ ಚಿಂತೆ ದೂರಾಗಲಿದೆ.
ವೃಷಭ
ಧನಾಗಮನ ಹೆಚ್ಚಿದ್ದರೂ ಬಹುಪಾಲು ಅನಾವಶ್ಯಕವಾಗಿ ಖರ್ಚಾಗಲಿದೆ. ಸಿವಿಲ್ ಎಂಜಿನಿಯರುಗಳಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಸಿಗಲಿದೆ. ಷೇರು ವ್ಯಾಪಾರವು ಅದೃಷ್ಟದಾಯಕವಾಗಿರುತ್ತದೆ.
ಮಿಥುನ
ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯದ ಸಾಧ್ಯತೆ ಇದೆ. ಮೊಂಡುತನ ಬಿಟ್ಟು ಪೋಷಕರ ಮಾತುಗಳನ್ನು ಕೇಳುವುದು ಉತ್ತಮ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಲಾಭವಿದೆ.
ಕರ್ಕಾಟಕ
ಗೃಹ ನಿರ್ಮಾಣದ ಬಗ್ಗೆ ಹಿರಿಯರ ಹಾಗೂ ಮನೆಯವರ ಅಭಿಪ್ರಾಯ ಸಂಗ್ರಹಿಸಿ. ಇತರರಿಗೆ ಕಹಿಯಾಗುವ ಕೆಲವು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ. ಸಾಂಕ್ರಾಮಿಕ ರೋಗಗಳು ಬಾಧಿಸಬಹುದು.
ಸಿಂಹ
ಹಿರಿಯರ ಮುಂದೆ ಕೌಟುಂಬಿಕ ಪರಂಪರೆ ಹಾಗೂ ನೀತಿ ನಿಯಮಗಳನ್ನು ಮೀರಿ ನಡೆದು ಅವರ ಅಸಮಾಧಾನಕ್ಕೆ ಕಾರಣವಾಗುವಿರಿ. ಸಾಹಿತ್ಯ ವಲಯದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
ಕನ್ಯಾ
ವೈಯಕ್ತಿಕ ಜೀವನದಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ತುಲಾ
ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದವರು ದೂರ ಸರಿಯಲಿದ್ದಾರೆ. ಪ್ರಾಣಿ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಸಹೋದ್ಯೊಗಿಗಳೊಡನೆ ಸಹನೆಯಿಂದ ನಡೆದುಕೊಳ್ಳಿ.
ವೃಶ್ಚಿಕ
ಆತ್ಮ ಗೌರವದ ರಕ್ಷಣೆಯ ದೃಷ್ಟಿಯಿಂದ ಸಂದರ್ಭಗಳೊಡನೆ ರಾಜಿ ಮಾಡಿಕೊಳ್ಳುವುದು ಸರಿ ಎನಿಸಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ನೀರಾವರಿ ಬೆಳೆಗಳು ಲಾಭ ತರಲಿದೆ.
ಧನು
ನಿಮ್ಮ ನಡೆ ಮೇಲಧಿಕಾರಿ ಅಥವಾ ಪಾಲುದಾರರಿಗೆ ಇಷ್ಟವಾಗುವ ರೀತಿಯಲ್ಲಿ ಇರುವುದು ಉತ್ತಮ. ಹಲವು ದಿನಗಳ ನಂತರ ನಿಮ್ಮಿಷ್ಟದ ಕೆಲಸವನ್ನು ಸಂತಸದಿಂದ ಮಾಡುವಿರಿ. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
ಮಕರ
ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆರ್ಥಿಕವಾಗಿ ನಿಮ್ಮ ಆದಾಯ ಯಾವುದೇ ರೀತಿಯ ಏರಿಳಿತಗಳಿಲ್ಲದೆ ಸಮನಾಗಿರುವುದು. ನಿಮ್ಮ ವಾಹನಕ್ಕೆ ಸಣ್ಣ ಪ್ರಮಾಣದಲ್ಲಿ ಅವಘಡಗಳಾಗುವ ಸಾಧ್ಯತೆ ಇದೆ.
ಕುಂಭ
ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಕೀಲರ ಬಳಿ ವೈಯಕ್ತಿವಾಗಿ ಮಾತನಾಡುವುದು ಉತ್ತಮ. ಆಗು ಹೋಗುಗಳ ಮೇಲೆ ಹೆಚ್ಚು ಚಿಂತೆಗೊಳಗಾಗದಿರಿ.
ಮೀನ
ಧನಾಗಮನದಲ್ಲಿ ವ್ಯತ್ಯಯ ಅಥವಾ ವಿಳಂಬ ತೋರಿಬರಲಿದೆ. ಸಂಘ ಸಂಸ್ಥೆಗಳ ಹುದ್ದೆಯನ್ನು ಅಲಂಕರಿಸುವ ಅವಕಾಶ ಇದೆ. ರಾಸಾಯನಿಕ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಕಾಣುವಿರಿ.