ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ನವ ವಿವಾಹಿತರಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ
Published 6 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಕ್ಕಾಗಿ ಬೇರೆ ಸ್ಥಳದಲ್ಲಿ ವಾಸಿಸಬೇಕಾಗುವುದು. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿಬರಲಿದೆ. ಯೋಗಾಭ್ಯಾಸ ಮನೋಲ್ಲಾಸವನ್ನು ಹೆಚ್ಚಿಸುತ್ತದೆ, ಚೈತನ್ಯವು ಮೂಡಿಬರಲಿದೆ.
ವೃಷಭ
ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಅಣ್ಣಂದಿರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಸಗಟು ವ್ಯಾಪಾರಿಗಳಿಗೆ ವ್ಯಾಪಾರ ಇರುವುದು. ದೀರ್ಘಕಾಲೀನ ಯೋಜನೆಗಳು ಫಲದಾಯಕವೆನಿಸಲಿವೆ.
ಮಿಥುನ
ತಾವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿ ಯಾಗುವಿರಿ. ಶತ್ರು ಬಾಧೆ ಈ ದಿನದಿಂದ ಹಂತ ಹಂತವಾಗಿ ನಿವಾರಣೆ ಆಗಲಿದೆ. ಆರೋಗ್ಯದಲ್ಲಿ ವಾಯು ಸಂಬಂಧವಾಗಿ ತೊಂದರೆಗಳು ಕಾಣಿಸಿಕೊಳ್ಳಬಹುದು.
ಕರ್ಕಾಟಕ
ಸಾಲಗಳು ತೀರಿದ್ದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ನಿಮ್ಮ ಮುಂದಿನ ಹಾದಿ ಏನೆಂಬುದು ನಿಮಗೆ ಈದಿನ ಸ್ಪಷ್ಟವಾಗಿರಲಿ. ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುಬೇಕಾಗುವುದು.
ಸಿಂಹ
ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಬಹಳ ದಿನಗಳ ನಂತರ ಇಂದು ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ದುರ್ಗಾ ದೇವಿಯನ್ನು ಆರಾಧಿಸಿ ಶುಭ ಪ್ರಾಪ್ತಿ.
ಕನ್ಯಾ
ಹೂಡಿಕೆ ವಿಚಾರದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಬಂದಿರುವ ಸಲಹೆ ಸರಿಯಾಗಿದೆ. ಈ ದಿನ ಕೊಟ್ಟ ಹಣ ಹಿಂದಿರುಗುವುದು ಕಷ್ಟಸಾಧ್ಯ. ಆದ್ದರಿಂದ ಯಾರಿಗೂ ಸಾಲ ಕೊಡದಿರುವುದು ಉತ್ತಮ.
ತುಲಾ
ನಿಮ್ಮ ಅತಿಯಾದ ಪರಿಶ್ರಮದ ದುಡಿಮೆ ದೃಷ್ಟಿದೋಷಕ್ಕೆ ಗುರಿಯಾಗುವುದು. ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯ. ನವ ವಿವಾಹಿತರಿಗೆ ಸಂತಾನ ಭಾಗ್ಯ ಲಭ್ಯವಾಗಲಿದೆ.
ವೃಶ್ಚಿಕ
ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ. ಸಂಸಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಮೂಡುವುದು.
ಧನು
ನೀವು ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಈ ದಿನ ನಿಮಗೆ ಮನವರಿಕೆಯಾಗುವುದು. ಕೃಷಿಕರಿಗೆ ಹವಾಮಾನದ ವೈಪರೀತ್ಯದಂತಹ ಸಮಸ್ಯೆ ಎದುರಾಗಬಹುದು. ವಸ್ತ್ರಾಭರಣ ಖರೀದಿ ಯೋಗವಿದೆ.
ಮಕರ
ಕೆಲಸದ ಪ್ರದೇಶಗಳು ನಿಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ. ಗಮನವಿರಲಿ. ಕ್ರೀಡಾಪಟುಗಳಿಗೆ ಸಂತಸ ಸುದ್ದಿ ಕೇಳಿ ಬರಲಿದೆ.
ಕುಂಭ
ಹಾಲಿನ ಪದಾರ್ಥ ಮಾರಾಟಗಾರರಿಗೆ ಲಾಭವಾಗುವುದು. ಚರ್ಚೆ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿರಿ. ಇಂದು ನಿಮ್ಮ ವಿರುದ್ಧವಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುವು.
ಮೀನ
ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ. ಇನ್ನೊಬ್ಬರ ಅಭಿಪ್ರಾಯ ಪಡೆದು ಚಿಕಿತ್ಸೆ ತೆಗೆದುಕೊಳ್ಳಿ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿ ಮನಸ್ಸಿಗೆ ನಿರಾಳವಾಗುವುದು.
ADVERTISEMENT
ADVERTISEMENT