ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿಗೆ ಬಲವಾದ ಸಾಧ್ಯತೆ ಇದೆ
Published 1 ಜುಲೈ 2024, 3:14 IST
ಅರುಣ ಪಿ.ಭಟ್ಟ
ಮೇಷ
ಉದ್ಯೋಗದಲ್ಲಿ ಬಡ್ತಿಗೆ ಬಲವಾದ ಸಾಧ್ಯತೆ ಇದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ ಪಾಲುದಾರರೊಂದಿಗೆ ಅನಗತ್ಯ ಚರ್ಚೆ ಆಗುತ್ತದೆ. ಸಹೋದರ ಸಹೋದರಿಯರ ಮೂಲಕ ವ್ಯಾಪಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಸಂಗಾತಿಯಿಂದ ಕಹಿ ಮಾತುಗಳನ್ನು ಕೇಳುವಿರಿ ಇದರಿಂದ ಮನೆಯಲ್ಲಿ ಕಿರಿಕಿರಿ ಹೆಚ್ಚಾಗಬಹುದು. ಆದ್ದರಿಂದ ಗಂಡ ಹೆಂಡತಿ ಪರಸ್ಪರರೊಂದಿಗೆ ಸಂವಹನದ ಮೂಲಕ ಸಮಸ್ಯೆಗಳನ್ನು ಪರಿಹರಿಸಿ. ತಿಂಗಳ ದ್ವಿತೀಯಾರ್ಧವು ಸ್ವಲ್ಪ ಕಷ್ಟಕರವಾಗಿರಬಹುದು. ಆರ್ಥಿಕ ನಷ್ಟದ ಸಾಧ್ಯತೆ ಇದೆ.
ವೃಷಭ
ಸರ್ಕಾರಿ ನೌಕರಿಯಲ್ಲಿರುವವರಿಗೆ ಉತ್ತಮ ಸಮಯ. ಹಳೆಯ ವ್ಯಾದಿಗಳಿಂದ ಸ್ವಲ್ಪ ಅಹಿತಕರ. ಮನೆಯಲ್ಲಿ ಸಂತಸದ ವಾತಾವರಣ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾದ್ಯತೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಕೊರ್ಟ ವ್ಯಾಜ್ಯಗಳಲ್ಲಿ ಯಶಸ್ಸು. ಹಣ ಕಾಸಿನ ವಿಷಯದಲ್ಲಿ ಉತ್ತಮ ಸಮಯ.ಅವಿವಾಹಿತರಿಗೆ ವಿವಾಹ ಯೋಗವಿದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ.
ಮಿಥುನ
ರಾಜಕಿಯ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿರುವವರಿಗೆ ಉತ್ತಮ ಸಮಯವಿದು. ಮನೆಗೆ ಅಲಂಕಾರಿಕ ಸಾಮಗ್ರಿಗಳ ಖರೀದಿ. ಐಹಿಕ ಸುಖದ ಜೊತೆಗೆ ಪಾರಮಾರ್ಥಿಕ ಜ್ಞಾನ ಪಡೆಯುವತ್ತ ಮನಸ್ಸು ಹರಿಸುವಿರಿ. ಸತ್ಪುರುಷರ ಭೇಟಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ. ಒಟ್ಟಿನಲ್ಲಿ ಈ ತಿಂಗಳು ಏರಿಳಿತದ ಮಿಶ್ರ ಫಲಗಳಿವೆ.
ಕರ್ಕಾಟಕ
ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಸಹಾಯ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ನಿಮ್ಮ ಸುತ್ತಲಿರುವ ಜನರು ನಿಮ್ಮ ಸಂಬಂಧದಲ್ಲಿ ತೊಂದರೆಯುಂಟುಮಾಡುವ ಸಾಧ್ಯತೆಗಳಿರುತ್ತವೆ. ಹೊರಗಿನವರ ಸಲಹೆಗಳಿಗೆ ಕಿವಿಗೊಡಬೇಡಿ. ನಿಮ್ಮ ಆರೋಗ್ಯದ ಪರಿಸ್ಥಿತಿ ಯಿಂದ ನೀವು ತೊಂದರೆಕ್ಕೊಳಗಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಎಂದಿನಂತೆ ಮನೆಯಲ್ಲೇ ಚಿಕಿತ್ಸೆ ಮಾಡುವುದನ್ನು ತಪ್ಪಿಸಿ ತಜ್ಞ ವೈದ್ಯರ ಸಲಹೆ ಪಡೆಯಿರಿ. ನೀವು ಹೊಸ ಮೂಲಗಳಿಂದ ಇದ್ದಕ್ಕಿದ್ದಂತೆ ಹಣವನ್ನು ಪಡೆಯುತ್ತೀರಿ, ಅದು ನಿಮ್ಮ ಮನಸ್ಸನ್ನು ಸಂತೋಷಗೊಳಿಸುತ್ತದೆ.
ಸಿಂಹ
ಶಾರೀರಿಕ ಮಾನಸಿಕ ಉತ್ಸಾಹ ವೃದ್ದಿಸುವದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವುದು. ಕೆಲವು ವಿಷಯದಲ್ಲಿ ಮಿತ್ರರಿಂದ ವಿರೋದ ಕಾಣಿಸುವುದು. ಕೃಷಿ ಉತ್ಪನ್ನ ವಿಕ್ರಿಯದಾರರಿಗೆ ಲಾಭ. ಹೊಟ್ಟೆನೋವಿನ ಪ್ರಸಂಗ. ಅಜ್ಞಾತವಾಸದಿಂದ ಬಿಡುಗಡೆ. ಮಹತ್ವದ ಮಾತುಕತೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವಿರಿ.
ಕನ್ಯಾ
ಅನಿರೀಕ್ಷಿತ ಖರ್ಚಿನ ಪ್ರಸಂಗ. ಸರಕಾರಿ ಕೆಲಸದಲ್ಲಿ ವ್ಯತ್ಯಯ. ಸೇವಕರಿಂದ ಹಾನಿ, ತೊಂದರೆ. ಬಂಧುಗಳಿಗೆ ಆಪತ್ತು. ಮನೆಕೆಲಸ ಅರ್ದಕ್ಕೆ ನಿಲ್ಲುವುದು. ಪ್ರೇಮ ಪ್ರಸಂಗಗಳಲ್ಲಿ ಭಗ್ನತೆ. ಅಧಿಕಾರಿಗಳಿಗೆ ಹಿನ್ನಡೆ. ಅವಿವಾಹಿತರಿಗೆ ವಿವಾಹ ಭಾಗ್ಯದ ಸೂಚನೆ. ತಿಂಗಳಾಂತ್ಯದಲ್ಲಿ ಮನೆಯ ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳುವುದು. ಹಣದ ಒಳಹರಿವು ಹೆಚ್ಚಾಗುವುದು.
ತುಲಾ
ಉತ್ತಮ ಫಲ ಪ್ರಾಪ್ತಿಯ ರಾಶಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೆಕ್ಷಿಗಳಿಗೆ ಸಂಗಾತಿ ಲಭ್ಯ. ಮನೆಕೆಲಸದ ಹೊಸ ಸೇವಕರು ಸಿಗುವರು. ವ್ಯಾಪಾರದಲ್ಲಿ ಲಾಭ. ದುಭಾರಿ ವಸ್ತುಗಳ ಖರೀದಿ. ಕುಟುಂಬ ಸೌಖ್ಯ.
ವೃಶ್ಚಿಕ
ಕಷ್ಟದಲ್ಲೂ ಇಷ್ಟ ಫಲ ಪ್ರಾಪ್ತಿಯಾಗುವುದು. ಪರದೇಶ ಪ್ರವಾಸಕ್ಕೆ ಸಿದ್ದತೆ ನಡೆಯುವದು. ಸರಕಾರಿ ಅಧಿಕಾರ ಪ್ರಾಪ್ತಿಯೋಗ. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ. ಕುಟುಂಬ ವರ್ಗದಲ್ಲಿ ಅನಾರೋಗ್ಯ. ಪ್ರಾಣಾಪಾಯ ಭೀತಿ. ಮನೆಗೆ ಬಂದುಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು.
ಧನು
ತಿಂಗಳ ಆರಂಭದಲ್ಲೇ ಸಂಬಂಧಿಕರ ಭೇಟಿ ಮಾಡುವ ಸಾಧ್ಯತೆ ಇದೆ. ಬಹಳ ಕಾಲದ ನಂತರ ಸೋದರ ಸಂಬಂಧಿಗಳನ್ನು ಭೇಟಿ ಆಗಲಿದ್ದೀರಿ. ಇನ್ನು ಉದ್ಯೋಗಸ್ಥರಿಗೆ ತಾತ್ಕಾಲಿಕ ವರ್ಗಾವಣೆ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಸಂತೋಷವಾಗಿರುತ್ತದೆ.ಸಂಗಾತಿ ಮಕ್ಕಳ ಜತೆಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಅವರಿಗೆ ಕೆಲವು ಜವಾಬ್ದಾರಿಗಳನ್ನು ವಹಿಸಿತ್ತಿರಿ. ವ್ಯಾಪಾರ ವ್ಯವಹಾರ ಮಾಡುತ್ತಿರುವವರಿಗೆ ಉತ್ತಮ ಪ್ರಗತಿ ಇದೆ. ತಿಂಗಳ ಕೊನೆಯಲ್ಲಿ ಕೋರ್ಟ್- ಕಟಕಟೆ ವ್ಯಾಜ್ಯಗಳಿಗೆ ಅಲೆದಾಡಬೇಕಾಗುತ್ತದೆ. ದಾಖಲೆ ಪತ್ರಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಮಕರ
ತಿಂಗಳ ಶುರುವಿನಲ್ಲೇ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಜತೆಗೆ ಖರ್ಚನ್ನು ಕೂಡ ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗುತ್ತೀರಿ. ಉದ್ಯಮಿಗಳು,ಉದ್ಯೋಗಸ್ಥರು ಹಿಂದೆಂದಿಗಿಂತ ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡುತ್ತೀರಿ. ವರ್ಚಸ್ಸು, ಸ್ಥಾನಮಾನ ಕೂಡ ಇದೇ ಅವಧಿಯಲ್ಲಿ ಹೆಚ್ಚಾಗಲಿದೆ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗು ಭಿನ್ನಾಭಿಪ್ರಾಯ ತಲೆದೋರಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಹಲವು ಅಡ್ಡಿ ಆತಂಕ ಎದುರಾಗಲಿದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ನಿಮಗೆ ಅನುಕೂಲಕರವಾದ ಹಾಗೂ ನಿರೀಕ್ಷಿತವಾದ ಫಲಿತಾಂಶ ದೊರೆಯಲಿದೆ.
ಕುಂಭ
.ವ್ಯಾಪಾರ, ವ್ಯವಹಾರ ಅಥವಾ ಉದ್ಯಮ ಮಾಡುತ್ತಿರುವವರಿಗೆ ಅತ್ಯುತ್ತಮವಾದ ಸಮಯ ಇದು. ಆರೋಗ್ಯ ಕೂಡ ಈ ಅವಧಿಯಲ್ಲಿ ಉತ್ತಮವಾಗಿರುತ್ತದೆ. ಇದರಿಂದ ನಿಮಗೆ ಸಮಾಧಾನ ಸಂತೋಷ ಉಂಟಾಗುತ್ತದೆ. ನೀವು ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರಿಗೆ ಮಾಡುವ ಕೆಲಸದಲ್ಲಿ ಗುಣಮಟ್ಟದ ವೇಗ ಕಂಡುಕೊಳ್ಳಲು ಸಹಕಾರಿ ಆಗುತ್ತದೆ. ಸಾಮಾಜಿಕ ಸ್ಥಾನಮಾನವು ಹೆಚ್ಚಾಗಲಿದೆ. ಜತೆಗೆ ನಿಮ್ಮ ಉತ್ಸಾಹ ಸಹ ಹೆಚ್ಚಾಗಲಿದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತ ಕಾಣುತ್ತೀರಿ. ತಲೆ ನೋವು ಹಲ್ಲು ನೋವು ಕಾಣಿಸಿಕೊಳ್ಳಬಹುದು. ಶುಭ. 11.16.24. ಅಶುಭ. 15.18.24.
ಮೀನ
ಶೈಕ್ಷಣಿಕ ವಲಯದಲ್ಲಿ ಇರುವವರು, ವಿದ್ಯಾರ್ಥಿಗಳಿಗೆ ಸಾಧನೆಗೆ ಅತ್ಯುತ್ತಮವಾದ ಅವಧಿ ಇದು. ತಂತ್ರಜ್ಞಾನ, ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಲವು ಅವಕಾಶಗಳು ಒಟ್ಟೊಟ್ಟಿಗೆ ಬರಲಿವೆ. ಜತೆಗೆ ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಸ್ವಯಂ ವೈದ್ಯ ಯಾವ ಕಾರಣಕ್ಕೂ ಬೇಡ. ಮುಂಬರುವ ದಿನಗಳಲ್ಲಿ ಹಲವು ಸಕಾರಾತ್ಮಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಯಾವುದಾದರೂ ಮೂಲದಿಂದ ತಿಂಗಳ ಅಂತ್ಯದ ವೇಳೆ ತುಂಬ ಒಳ್ಳೆ ಮೊತ್ತ ನಿಮ್ಮ ಪಾಲಿಗೆ ದೊರೆಯಲಿದೆ.