5 ನಗರ ಪಾಲಿಕೆಗಳ ವ್ಯಾಪ್ತಿ

* ವಿಧಾನಸಭೆ ಕ್ಷೇತ್ರ –198 ವಾರ್ಡ್ಗಳಂತೆ

*ಅಂತಿಮ ಅಧಿಸೂಚನೆಯಲ್ಲಿ ಹೆಚ್ಚುವರಿ ಸೇರಿಕೊಂಡ ಪ್ರದೇಶ

ಬೆಂಗಳೂರು ಕೇಂದ್ರ ನಗರ ಪಾಲಿಕೆ

ಸಿ.ವಿ. ರಾಮನ್ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ; ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು. ಪುಲಕೇಶಿನಗರ ವಿಧಾನಸಭೆ ಕ್ಷೇತ್ರದ ಕುಶಾಲನಗರ ವಾರ್ಡ್.

ಪ್ರದೇಶ: 78 ಚದರ ಕಿ.ಮೀ

ವ್ಯಾಪ್ತಿ; 42 ವಾರ್ಡ್

2025ರಂತೆ ತೆರಿಗೆ ಸಂಗ್ರಹ; ₹659 ಕೋಟಿ

ವಲಯ 1ರ ಕಚೇರಿ, ವ್ಯಾಪ್ತಿ: ಪೂರ್ವ ವಲಯ ಕಚೇರಿ; ಶಾಂತಿನಗರ, ಸಿ.ವಿ. ರಾಮನ್ನಗರ ವಿಧಾನಸಭೆ ಕ್ಷೇತ್ರ

ವಲಯ 2ರ ಕಚೇರಿ, ವ್ಯಾಪ್ತಿ: ಎನ್.ಆರ್. ಚೌಕದಲ್ಲಿರುವ ಅನೆಕ್ಸ್–3 ಕಟ್ಟಡ; ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ

ಆಯುಕ್ತ: ಪಿ. ರಾಜೇಂದ್ರ ಚೋಳನ್

ಹೆಚ್ಚುವರಿ ಆಯುಕ್ತ (ಅಭಿವೃದ್ಧಿ): ರಾಹುಲ್ ಶರಣಪ್ಪ ಸಂಕನೂರ

ಬೆಂಗಳೂರು ಉತ್ತರ ನಗರ ಪಾಲಿಕೆ

ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ, ಯಲಹಂಕ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು ಹಾಗೂ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ. ದಾಸರಹಳ್ಳಿ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಜಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ ವಾರ್ಡ್ಗಳು, ಪುಲಕೇಶಿನಗರ ವಿಧಾನಸಭೆ ಕ್ಷೇತ್ರದ ಕುಶಾಲನಗರ ವಾರ್ಡ್ ಹೊರತುಪಡಿಸಿ ಎಲ್ಲ ವಾರ್ಡ್ಗಳು.

ಪ್ರದೇಶ: 158 ಚದರ ಕಿ.ಮೀ

ವ್ಯಾಪ್ತಿ; 41 ವಾರ್ಡ್

2025ರಂತೆ ತೆರಿಗೆ ಸಂಗ್ರಹ; ₹543 ಕೋಟಿ

ವಲಯ 1ರ ಕಚೇರಿ, ವ್ಯಾಪ್ತಿ: ಯಲಹಂಕ ವಲಯ ಕಚೇರಿ; ಬ್ಯಾಟರಾಯನಪುರ, ಪುಲಕೇಶಿನಗರ, ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ

ವಲಯ 2ರ ಕಚೇರಿ, ವ್ಯಾಪ್ತಿ: ದಾಸರಹಳ್ಳಿ ವಲಯ ಕಚೇರಿ; ದಾಸರಹಳ್ಳಿ (ಭಾಗಶಃ), ರಾಜರಾಜೇಶ್ವರಿ ನಗರ (ಭಾಗಶಃ), ಹೆಬ್ಬಾಳ, ಯಲಹಂಕ ವಿಧಾನಸಭೆ ಕ್ಷೇತ್ರ

ಆಯುಕ್ತ: ಪೊಮ್ಮಲ ಸುನೀಲ್ಕುಮಾರ್

ಹೆಚ್ಚುವರಿ ಆಯುಕ್ತ (ಅಭಿವೃದ್ಧಿ): ಆರ್. ಲತಾ

ಬೆಂಗಳೂರು ದಕ್ಷಿಣ ನಗರ ಪಾಲಿಕೆ

ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು. ಮಹದೇವಪುರ ವಿಧಾನಸಭೆ ಕ್ಷೇತ್ರದ ಬೆಳ್ಳಂದೂರಿನ ಕೆಲವು ಭಾಗ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭ ನಗರ, ಚಿಕ್ಕಲಸಂದ್ರ ವಾರ್ಡ್, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ರಾಜರಾಜೇಶ್ವರ ವಾರ್ಡ್ನ ಕೆಲವು ಭಾಗ, ಯಶವಂತಪುರ ವಿಧಾನಸಭೆ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ನ ಕೆಲವು ಭಾಗ. ಆನೇಕಲ್ ವಿಧಾನಸಭೆ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್.

ಪ್ರದೇಶ: 155 ಚದರ ಕಿ.ಮೀ

ವ್ಯಾಪ್ತಿ; 37 ವಾರ್ಡ್

2025ರಂತೆ ತೆರಿಗೆ ಸಂಗ್ರಹ; ₹733 ಕೋಟಿ

ವಲಯ 1ರ ಕಚೇರಿ, ವ್ಯಾಪ್ತಿ: ದಕ್ಷಿಣ ವಲಯ ಕಚೇರಿ; ಪದ್ಮನಾಭನಗರ (ಭಾಗಶಃ), ರಾಜರಾಜೇಶ್ವರಿನಗರ (ಭಾಗಶಃ), ಯಶವಂತಪುರ (ಭಾಗಶಃ), ಜಯನಗರ, ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ

ವಲಯ 2ರ ಕಚೇರಿ, ವ್ಯಾಪ್ತಿ: ಬೊಮ್ಮನಹಳ್ಳಿ ವಲಯ ಕಚೇರಿ; ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಹದೇವಪುರ (ಭಾಗಶಃ), ಆನೇಕಲ್ (ಭಾಗಶಃ) ವಿಧಾನಸಭೆ ಕ್ಷೇತ್ರ

ಆಯುಕ್ತ: ಕೆ.ಎನ್. ರಮೇಶ್

ಹೆಚ್ಚುವರಿ ಆಯುಕ್ತ (ಅಭಿವೃದ್ಧಿ): ಪದ್ವೆ ರಾಹುಲ್ ತುಕಾರಾಮ್

ಬೆಂಗಳೂರು ಪೂರ್ವ ನಗರ ಪಾಲಿಕೆ

ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು ಹಾಗೂ ಬೆಳ್ಳಂದೂರು ವಾರ್ಡ್ನ ಕೆಲವು ಪ್ರದೇಶವನ್ನು ಹೊರತುಪಡಿಸಿ ಮಹದೇವಪುರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು

ಪ್ರದೇಶ: 168 ಚದರ ಕಿ.ಮೀ

ವ್ಯಾಪ್ತಿ; 17 ವಾರ್ಡ್

2025ರಂತೆ ತೆರಿಗೆ ಸಂಗ್ರಹ; ₹912 ಕೋಟಿ

ವಲಯ 1ರ ಕಚೇರಿ, ವ್ಯಾಪ್ತಿ: ಮಹದೇವಪುರ ವಲಯ ಕಚೇರಿ; ಮಹದೇವಪುರ ವಿಧಾನಸಭೆ ಕ್ಷೇತ್ರ

ವಲಯ 2ರ ಕಚೇರಿ, ವ್ಯಾಪ್ತಿ: ಕೆ.ಆರ್. ಪುರ ಮುಖ್ಯ ಎಂಜಿನಿಯರ್ ಕಚೇರಿ; ಕೆ.ಆರ್. ಪುರ ವಿಧಾನಸಭೆ ಕ್ಷೇತ್ರ

ಆಯುಕ್ತ: ಡಿ.ಎಸ್. ರಮೇಶ್

ಹೆಚ್ಚುವರಿ ಆಯುಕ್ತ (ಅಭಿವೃದ್ಧಿ): ಲೋಕಂಡೆ ಸ್ನೇಹಲ್ ಸುಧಾಕರ್

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್ಗಳು. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಚೊಕ್ಕಸಂದ್ರ, ರಾಜಗೋಪಾಲ ನಗರ; ಹೆಗ್ಗನಹಳ್ಳಿ ವಾರ್ಡ್, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಹೊಸಕೆರೆಹಳ್ಳಿ, ಗಣೇಶಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್, ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಎಚ್ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ವಾರ್ಡ್, ರಾಜರಾಜೇಶ್ವರಿ ನಗರ ವಾರ್ಡ್ನ ಕೆಲವು ಭಾಗ, ಯಶವಂತಪುರ ವಿಧಾನಸಭೆ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ನ ಕೆಲವು ಭಾಗ ಹೊರತುಪಡಿಸಿ ಎಲ್ಲ ವಾರ್ಡ್.

ಪ್ರದೇಶ: 161 ಚದರ ಕಿ.ಮೀ

ವ್ಯಾಪ್ತಿ; 64 ವಾರ್ಡ್

2025ರಂತೆ ತೆರಿಗೆ ಸಂಗ್ರಹ; ₹580 ಕೋಟಿ

ವಲಯ 1ರ ಕಚೇರಿ, ವ್ಯಾಪ್ತಿ: ಆರ್.ಆರ್. ನಗರ ವಲಯ ಕಚೇರಿ; ಯಶವಂತಪುರ (ಭಾಗಶಃ), ದಾಸರಹಳ್ಳಿ, ರಾಜರಾಜೇಶ್ವರಿನಗರ, ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರ

ವಲಯ 2ರ ಕಚೇರಿ, ವ್ಯಾಪ್ತಿ: ಐಪಿಪಿ, ಮಲ್ಲೇಶ್ವರ; ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ಬಸವನಗುಡಿ, ಪದ್ಮನಾಭನಗರ (ಭಾಗಶಃ) ವಿಧಾನಸಭೆ ಕ್ಷೇತ್ರ

ಆಯುಕ್ತ: ಕೆ.ವಿ. ರಾಜೇಂದ್ರ

ಹೆಚ್ಚುವರಿ ಆಯುಕ್ತ (ಅಭಿವೃದ್ಧಿ): ದಿಗ್ವಜಯ್ ಬೋಡ್ಕೆ

ಮಹೇಶ್ವರ್ ರಾವ್ ಜಿಬಿಎ ಮುಖ್ಯ ಆಯುಕ್ತ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮಂಜೂರಾಗಿದ್ದ ಹುದ್ದೆಗಳನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ (ಜಿಬಿಎ) ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ಮಹೇಶ್ವರ್ ರಾವ್ ಅವರನ್ನು ಜಿಬಿಎ ಮುಖ್ಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಕೆ. ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್ ಅವರನ್ನು ಜಿಬಿಎ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಮುನೀಶ್ ಮೌದ್ಗಿಲ್ ಅವರಿಗೆ ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ನೀಡಲಾಗಿದೆ. ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಆರೋಗ್ಯ ಮತ್ತು ಶಿಕ್ಷಣ, ಹರೀಶ್ ಕುಮಾರ್ ಅವರಿಗೆ ಹಣಕಾಸು ಮತ್ತು ಮುಖ್ಯ ಹಣಕಾಸು ಅಧಿಕಾರಿ, ಪ್ರೀತಿ ಗೆಹ್ಲೋಟ್ ಅವರಿಗೆ ಎಫ್ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕದ ಜವಾಬ್ದಾರಿ ವಹಿಸಲಾಗಿದೆ.

ಐದೂ ನಗರ ಪಾಲಿಕೆಗಳಿಗೆ ಐಎಎಸ್ ಅಧಿಕಾರಿಗಳನ್ನು ಆಯುಕ್ತರು ಹಾಗೂ ಅಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಐದು ನಗರ ಪಾಲಿಕೆಗಳಿಗೆ ತಲಾ ಇಬ್ಬರು ಜಂಟಿ ಆಯುಕ್ತರು ಹಾಗೂ ತಲಾ ಇಬ್ಬರು ಉಪ ಆಯುಕ್ತರನ್ನಾಗಿ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ವಾರ್ಡ್ ಪುನರ್ ವಿಂಗಡಣೆಗೆ ಆಯೋಗ

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ ವಾರ್ಡ್ಗಳನ್ನು ಪುನರ್ ವಿಂಗಡಣೆ ಮಾಡಲು ಮೂರು ತಿಂಗಳ ಅವಧಿ ಹೊಂದಿರುವ ‘ವಾರ್ಡ್ಗಳ ಪುನರ್ ವಿಂಗಡಣಾ ಆಯೋಗ’ ರಚಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಆಯೋಗದ ಅಧ್ಯಕ್ಷರಾಗಿದ್ದು, ಐದು ನಗರ ಪಾಲಿಕೆಗಳ ಅತ್ಯಂತ ಹಿರಿಯ ಆಯುಕ್ತರು, ನಗರ ಜಿಲ್ಲಾಧಿಕಾರಿಯವರು ಸದಸ್ಯರಾಗಿದ್ದಾರೆ. ಜಿಬಿಎಯ ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನದ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ವಾರ್ಡ್ಗಳ ಪುನರ್ ವಿಂಗಡಣೆ ಮಾರ್ಗಸೂಚಿಗಳು

* ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ನಗರ ಪಾಲಿಕೆಗಳ ಒಳಗಿನ ಪ್ರತಿಯೊಂದು ವಾರ್ಡ್ನ ಜನಸಂಖ್ಯೆ ಸಾಧ್ಯವಾದಷ್ಟೂ ಒಂದೇ ಆಗಿರಬೇಕು. 2011ರ ಜನಗಣತಿಯ ಅಂಕಿ–ಅಂಶವನ್ನು ಪರಿಗಣಿಸಬೇಕು.

* ವಿಧಾನಸಭೆಯ ಸದಸ್ಯರ ಚುನಾವಣೆ ಕ್ಷೇತ್ರ ವ್ಯಾಪ್ತಿಯೊಳಗೆ ವಾರ್ಡ್ಗಳನ್ನು ವಿಂಗಡಿಸಬೇಕು, ಇತರೆ ಕ್ಷೇತ್ರಕ್ಕೆ ವ್ಯಾಪಿಸುವಂತಿಲ್ಲ

* ಪ್ರತಿಯೊಂದು ನಗರ ಪಾಲಿಕೆಯ ವಾರ್ಡ್ಗಳ ಸಂಖ್ಯೆ 150ಕ್ಕಿಂತ ಹೆಚ್ಚಾಗುವಂತಿಲ್ಲ

ಆಯೋಗಕ್ಕೆ ಗಡುವು

2025ರ ಸೆ.23; ಆಯೋಗದಿಂದ ಸರ್ಕಾರಕ್ಕೆ ವಾರ್ಡ್ಗಳ ರಚನಾ ವರದಿ ಸಲ್ಲಿಕೆ

2025ರ ಸೆ.26; ಸರ್ಕಾರದಿಂದ ಕರಡು ಅಧಿಸೂಚನೆ ಪ್ರಕಟ

2025ರ ಅ.10; ಕರಡಿಗೆ ಸಲಹೆ/ ಆಕ್ಷೇಪನೆಗೆ ಗಡುವು

2025ರ ಅ.17; ಸಲಹೆ/ ಆಕ್ಷೇಪಣೆ ಪರಿಗಣಿಸಿ ಆಯೋಗದಿಂದ ಅಂತಿಮ ಶಿಫಾರಸು ಸಲ್ಲಿಕೆ

2025ರ ನ.1; ಐದೂ ನಗರ ಪಾಲಿಕೆಗಳ ವಾರ್ಡ್ಗಳ ಅಂತಿಮ ಅಧಿಸೂಚನೆ ಪ್ರಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.