ಬೆಂಗಳೂರು: ಕಣ್ಮನ ತಣಿಸುವ ಹಸಿರು ತುಂಬಿರುವ ಆ ಮೈದಾನಗಳಲ್ಲಿ ಗುರುವಾರದಿಂದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯಗಳ ಸೊಬಗು ಅರಳಲಿದೆ. ಭವಿಷ್ಯದ ಕನಸುಗಳೊಂದಿಗೆ ಕೆಲವು ಖ್ಯಾತನಾಮ ಮತ್ತು ಯುವ ಪ್ರತಿಭಾನ್ವಿತ ಆಟಗಾರರು ಇಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ.

ಈ ಕಾರಣಕ್ಕಾಗಿಯೇ ನಗರದ ಹೊರವಲಯದಲ್ಲಿ ಸಿಂಗಹಳ್ಳಿಯಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೇಷ್ಠತಾ ಕೇಂದ್ರದ (ಬಿಸಿಸಿಐ–ಸಿಒಇ) ಕ್ರೀಡಾಂಗಣದತ್ತ ಕ್ರಿಕೆಟ್ಪ್ರಿಯರ ಚಿತ್ತ ನೆಟ್ಟಿದೆ. ಇಲ್ಲಿರುವ ಎರಡು ಮೈದಾನಗಳಲ್ಲಿ ಈಚೆಗಷ್ಟೇ ಇಲ್ಲಿ ದುಲೀಪ್ ಟ್ರೋಫಿಯ ಎರಡು ಕ್ವಾರ್ಟರ್ಫೈನಲ್ ಪಂದ್ಯಗಳು ನಡೆದಿದ್ದವು. ಇದೀಗ ಸೆಮಿಫೈನಲ್ ಪಂದ್ಯಗಳೂ (ದಕ್ಷಿಣ ವಲಯ–ಉತ್ತರ ವಲಯ ಹಾಗೂ ಕೇಂದ್ರ ವಲಯ–ಪಶ್ಚಿಮ ವಲಯ) ಇಲ್ಲಿ ಆರಂಭವಾಗಲಿವೆ. ಭಾರತ ತಂಡದಲ್ಲಿ ಆಡಿರುವ, ಸ್ಥಾನಕ್ಕಾಗಿ ಕಾದಿರುವ ಮತ್ತು ಆಯ್ಕೆಗಾರರ ‘ನೋಟ’ದಿಂದ ವಂಚಿತರಾಗಿರುವ ಕ್ರಿಕೆಟಿಗರು ಈ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಮುಂಬೈನ ಶ್ರೇಯಸ್ ಅಯ್ಯರ್ ಮತ್ತು ಬೆಂಗಳೂರಿನ ದೇವದತ್ತ ಪಡಿಕ್ಕಲ್ ಅವರ ಮೇಲೆ ಈಗ ಎಲ್ಲರ ಗಮನವಿದೆ. ಮುಂದಿನ ವಾರ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಕಳೆದ ಐಪಿಎಲ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಅಮೋಘವಾಗಿ ಆಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಅನುಭವಿ ಮಧ್ಯಕ್ರಮಾಂಕದ ಬ್ಯಾಟರ್ ಆಗಿರುವ ಶ್ರೇಯಸ್ ಅವರಷ್ಟೇ ಅಲ್ಲ; ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರಿಗೂ ಆದ್ಯತೆ ನೀಡಲಾಗಿಲ್ಲ. ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಅವರು ತಮ್ಮ ಪ್ರತಿಭಾಪ್ರದರ್ಶನಕ್ಕೆ ಸನ್ನದ್ಧರಾಗಿದ್ದಾರೆ. 2024ರ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದೇವದತ್ತ ಪದಾರ್ಪಣೆ ಮಾಡಿದ್ದರು. ದೇಶಿ ಟೂರ್ನಿ ಮತ್ತು ಐಪಿಎಲ್ಗಳಲ್ಲಿಯೂ ಉತ್ತಮವಾಗಿ ಆಡಿದ್ದಾರೆ. ಆದರೆ ಹೋದ ನವೆಂಬರ್ನಲ್ಲಿ ಪರ್ತ್ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಆಡಿದ್ದು ಕೊನೆ. ನಂತರ ಅವರಿಗೆ ಅವಕಾಶಗಳು ಸಿಕ್ಕಿಲ್ಲ. ಭಾರತ ತಂಡದಲ್ಲಿ ಪ್ರತಿಭಾವಂತ ಆಟಗಾರರ ಪೈಪೋಟಿ ಅಪಾರವಾಗಿರುವುದೇ ಇದಕ್ಕೆ ಕಾರಣ. ಅದರಿಂದಾಗಿ ದೇಶಿ ಋತುವನ್ನು ಭರ್ಜರಿಯಾಗಿ ಆರಂಭಿಸಿ ಮತ್ತೆ ರಾಷ್ಟ್ರೀಯ ತಂಡದ ಮರುಪ್ರವೇಶದ ಟಿಕೆಟ್ ಗಿಟ್ಟಿಸುವ ಛಲ 25 ವರ್ಷದ ದೇವದತ್ತ ಅವರದ್ದು. ಈ ವರ್ಷ ಭಾರತವು ಇನ್ನೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಅದರಲ್ಲಿ ಅವಕಾಶ ಪಡೆಯುವತ್ತ ದೇವದತ್ತ ಮತ್ತು ಶ್ರೇಯಸ್ ಅವರ ಗುರಿ ಇಟ್ಟಿದ್ದಾರೆ. ಆದರೆ ಅದಕ್ಕಾಗಿ ಅವರು ಕಠಿಣ ಪೈಪೋಟಿಯನ್ನು ಎದುರಿಸಬೇಕಿದೆ.

ಶ್ರೇಯಸ್ ಮತ್ತು ದೇವದತ್ತ ಅವರಷ್ಟೇ ಅಲ್ಲ. ‘ಐಪಿಎಲ್ ಚಾಂಪಿಯನ್’ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್, ದೀಪಕ್ ಚಾಹರ್ (ಕೇಂದ್ರ ವಲಯ), ತಮಿಳುನಾಡಿನ ಎನ್. ಜಗದೀಶನ್, ಮುಂಬೈನ ಸರ್ಫರಾಜ್ ಖಾನ್, ಆಲ್ರೌಂಡರ್ ಶಾರ್ದೂಲ್ ಠಾಕೂರ್ (ಮೂವರೂ ಪಶ್ಚಿಮ ವಲಯ ತಂಡ) ಅವರೂ ಆಯ್ಕೆಗಾರರ ಗಮನ ಸೆಳೆಯುವ ಛಲದಲ್ಲಿದ್ದಾರೆ.

ಈ ನಡುವೆ; ವೇಗಿ ವೈಶಾಖ ವಿಜಯಕುಮಾರ್ ಮತ್ತು ಆಲ್ರೌಂಡರ್ ಆರ್. ಸಾಯಿಕಿಶೋರ್ ಅವರು ಗಾಯಗೊಂಡಿದ್ದು ಇಲ್ಲಿ ಕಣಕ್ಕಿಳಿಯುತ್ತಿಲ್ಲ. ದಕ್ಷಿಣ ವಲಯದ ನಾಯಕತ್ವ ವಹಿಸಿದ್ದ ತಿಲಕ್ ವರ್ಮಾ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರ ಬದಲಿಗೆ ಕೇರಳದ ಮೊಹಮ್ಮದ್ ಅಜರುದ್ದೀನ್ ತಂಡವನ್ನು ಮುನ್ನಡೆಸುವರು.

ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ, ರಿಯಾನ್ ಪರಾಗ್, ಧ್ರುವ ಜುರೇಲ್, ಹರ್ಷಿತ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರೂ ರಾಷ್ಟ್ರೀಯ ತಂಡದಲ್ಲಿದ್ದಾರೆ. ಅದರಿಂದಾಗಿ ದುಲೀಪ್ ಟ್ರೋಫಿಯಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗುವ ನಿರೀಕ್ಷೆಯೂ ಮೂಡಿದೆ.

ಮಳೆ ಆಟ: ರಾಜ್ಯದಲ್ಲ ಮಳೆಯ ಆರ್ಭಟ ಜೋರಾಗಿದೆ. ಇನ್ನು ಕೆಲದಿನಗಳ ಕಾಲ ಇದೇ ರೀತಿಯ ವಾತಾವರಣ ಇರುವ ಮುನ್ಸೂಚನೆಗಳೂ ಇವೆ. ಆದ್ದರಿಂದ ಪಂದ್ಯಗಳಲ್ಲಿ ಮಳೆಯಿಂದಾಗಿ ಹೆಚ್ಚು ಸಮಯ ನಷ್ಟವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದ್ದರಿಂದ ಮೊದಲ ಇನಿಂಗ್ಸ್ ಮುನ್ನಡೆಯನ್ನು ಗಳಿಸುವುದು ಯಾವುದೇ ತಂಡಕ್ಕೂ ಮಹತ್ವದ್ದಾಗಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.