ದಿನ ಭವಿಷ್ಯ: 26 ನವೆಂಬರ್ 2025 ಬುಧವಾರ– ದೂರವಾಗಿದ್ದ ನೆಂಟಸ್ಥಿಕೆ ಮತ್ತೆ ಹತ್ತಿರ
Published 25 ನವೆಂಬರ್ 2025, 18:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿವೃತ್ತ ಜೀವನವನ್ನು ಮೊಮ್ಮಕ್ಕಳ ಜೊತೆ ಸಂತೋಷದಿಂದ ಕಳೆಯುವ ಕನಸು ಅಕ್ಷರಶಃ ಸತ್ಯವಾಗುತ್ತದೆ. ನೆಂಟರಿಷ್ಟರ ಸಲಹೆ-ಸೂಚನೆಗಳನ್ನು ಆಲಿಸಿ ಸನ್ಮಾರ್ಗದಲ್ಲಿ ನಡೆಯಿರಿ.
ವೃಷಭ
ತಕ್ಷಣದಲ್ಲಿ ನಡೆಯಬೇಕೆಂಬ ಅಗತ್ಯ ಕಾರ್ಯಗಳಲ್ಲಿ ವಿಳಂಬ ತೋರಿಬಂದೀತು. ಹಪ್ಪಳ, ಸಂಡಿಗೆಯಂಥ ವಸ್ತುಗಳ ವ್ಯಾಪಾರಿಗೆ ಉತ್ತಮ ಸಂಪಾದನೆ ಆಗುತ್ತದೆ. ಪಾಲಕರಾಗುವ ಸುದ್ದಿ ತಿಳಿದು ಸಂತಸಗೊಳ್ಳುವಿರಿ.
ಮಿಥುನ
ದಿನದ ಉತ್ತರಾರ್ಧದಲ್ಲಿ ಸುಖಮಯ ಜೀವನವನ್ನು ನಡೆಸಲು ಪೂರ್ವಾರ್ಧದಲ್ಲಿ ಶ್ರಮಿಸಬೇಕು. ವಿದ್ಯಾರ್ಥಿಗಳು ಅತ್ಯಂತ ಪೈಪೋಟಿ ಎದುರಿಸುವ ದಿನವಾಗುವುದು. ಸಂಸಾರ ನಿರ್ವಹಣೆಗೆ ಹಣ ವ್ಯಯಿಸುವಿರಿ.
ಕರ್ಕಾಟಕ
ಹೊಸ ಮನೆಯನ್ನು ಕಟ್ಟಿಸುತ್ತಿರುವವರು ಆ ಸ್ಥಳಕ್ಕೆ ಹೋಗಿ ಬರುವ ತೀರ್ಮಾನವು ನಷ್ಟ ಆಗುವುದನ್ನು ತಪ್ಪಿಸಲು ಸಹಕಾರ ಮಾಡುತ್ತದೆ. ಹಿರಿಯರಿಗೆ ಎದುರುತ್ತರ ಕೊಡುವ ಮುನ್ನ ಯೋಚಿಸಿ.
ಸಿಂಹ
ಜವಾಬ್ದಾರಿಯನ್ನು ಮೈಯ್ಯ ಮೇಲೆ ಎಳೆದುಕೊಳ್ಳಲು ಹೋಗದಿರಿ. ಆಧುನಿಕ ಸಂಪರ್ಕ ಸಾಧನಗಳ ಮೂಲಕ ದೂರವಾಗಿದ್ದ ನೆಂಟಸ್ಥಿಕೆ ಮತ್ತೆ ಹತ್ತಿರವಾಗುವುದು. ಹಸಿರು ಬಣ್ಣವು ಶುಭ ತರುವುದು.
ಕನ್ಯಾ
ಮಳಿಗೆಯನ್ನು ಖರೀದಿಸುವಾಗ ವ್ಯಾವಹಾರಿಕವಾಗಿ ಜಾಗ ಎಷ್ಟು ಸೂಕ್ತ ಎನ್ನುವುದರ ಮೇಲೆ ಗಮನವಿಡಿ. ಕೆಲಸ ಆರಂಭಿಸುವ ಮುನ್ನ ಪ್ರಾಜ್ಞರಲ್ಲಿ ಸಮಯವು ಸರಿಯೇ ಎಂದು ವಿಚಾರಿಸಿ. ಬಂಗಾರದ ವ್ಯಾಪಾರಿಗಳಿಗೆ ಲಾಭ.
ತುಲಾ
ಎದುರಾಗುವ ಸನ್ನಿವೇಶಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲಗಳು ಕಾಡಲಿವೆ. ನೆರೆ ಹೊರೆಯವರೊಡನೆ ಉತ್ತಮ ಬಾಂಧವ್ಯ ಹೊಂದುವಿರಿ. ಹೋಟೆಲ್ ಉದ್ಯಮ ನಡೆಸುವವರಿಗೆ ಶುಭದಿನ.
ವೃಶ್ಚಿಕ
ಧಾರ್ಮಿಕ ಪ್ರವಚನದಂಥ ಸಂಕಲ್ಪವನ್ನು ಹೊಂದಿದವರಿಗೆ ದೇವರ ಅನುಗ್ರಹದಿಂದ ಜನ ಹಾಗೂ ಧನ ಸಹಾಯ ದೊರೆಯುವುದು. ವ್ಯಾಪಾರದ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಲಿದೆ.
ಧನು
ಹಿತಶತ್ರುಗಳು ನಾವಿದ್ದೇವೆ ಎಂದು ಹೇಳುವುದು ಅನುಭವಕ್ಕೆ ಬರಲಿದೆ. ರಚನಾತ್ಮಕ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಸಂತಸ ಹೊಂದುವಿರಿ. ಜ್ವರ ಶೀತದಂತಹ ಅನಾರೋಗ್ಯವು ಕಾಡಲಿದೆ.
ಮಕರ
ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರ ಹಾಕದ ಹೊರತು ಮನೆಯನ್ನು ಚೊಕ್ಕಗೊಳಿಸಲು ಸಾಧ್ಯವಾಗುವುದಿಲ್ಲ. ದಕ್ಷಿಣಾಮೂರ್ತಿಯನ್ನು ಪೂಜಿಸುವುದರಿಂದ ನೆಮ್ಮದಿ ದೊರೆಯುವುದು.
ಕುಂಭ
ಕಾರ್ಯಸಾಧನೆಗೆ ಅಧಿಕ ತಿರುಗಾಟದಿಂದ ಆಯಾಸ ಮತ್ತು ಆಹಾರದಲ್ಲಿ ವಿಷದ ಅಂಶವು ಸೇರಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ವಿದೇಶಿ ಪ್ರವಾಸದ ಕನಸಿಗೆ ಶುಭ ಮುಹೂರ್ತ ಕೂಡಿ ಬರುವುದು.
ಮೀನ
ಒಂದು ಸುಳ್ಳನ್ನು ಹೇಳಿ ಅದನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಸುಳ್ಳಿನ ದೊಡ್ಡ ಸರಮಾಲೆಗಳನ್ನೆ ಹೇಳಬೇಕಾಗುತ್ತದೆ. ಅತಿಯಾದ ಪುತ್ರವ್ಯಾಮೋಹವು ತಪ್ಪು ಹೆಜ್ಜೆ ಇಡುವಂತೆ ಮಾಡಬಹುದು.