ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
02/06/2024 - 08/06/2024
ವಾರ ಭವಿಷ್ಯ: ಈ ರಾಶಿಯವರಿಗೆ ಏನೋ ಕಳೆದುಕೊಂಡ ಭಾವನೆ ಇರುತ್ತದೆ
Published 8 ಜೂನ್ 2024, 23:38 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭದಲ್ಲೇ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ಅದರಂತೆ ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ನಡವಳಿಕೆಗಳಿಂದಲೂ ಆದಾಯ ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ರಿಯಲ್ ಎಸ್ಟೇಟ್‌ ಉದ್ಯಮಿಗಳಿಗೆ ಇದ್ದ ಕಾನೂನಿನ ತೊಡಕುಗಳು ದೂರವಾಗಲಿವೆ. ಸರ್ಕಾರಿ ಕಚೇರಿಗಳಲ್ಲಿ ಏಜೆಂಟರುಗಳಾಗಿ ಕೆಲಸ ಮಾಡುವವರಿಗೆ ಲಾಭವಿದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯಿಂದ ಸ್ವಲ್ಪ ಆದಾಯ ಬಂದರೂ ಅದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗಬಹುದು. ಕಚೇರಿಯ ಕಾರ್ಯಗಳು ನಿಧಾನವಾಗಿ ಆಗಬಹುದು. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ನಿಮ್ಮ ತಂದೆಯ ವಿಶ್ವಾಸವನ್ನು ಸಾಕಷ್ಟು ಗಳಿಸುವಿರಿ. ವೃತ್ತಿಯಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗಬಹುದು. ಅಶ್ವಿನಿ ಭರಣಿ ಕೃತಿಕ 1
ವೃಷಭ
ಆತ್ಮಭಿಮಾನದ ಜೊತೆಗೆ ಗೌರವವು ಇರುತ್ತದೆ. ನಿಮ್ಮ ಖರ್ಚಿಗೆ ಹೊಂದುವಷ್ಟು ಆದಾಯವಿರುತ್ತದೆ. ಆದಾಯ ತರುವ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವಿರಿ. ನಿಮಗೆ ಸಿಕ್ಕಿರುವ ಸರ್ಕಾರಿ ನೀವೇಶನದ ಧಾಖಲೆಗಳನ್ನು ಈಗ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಸಂಕಷ್ಟವಿರುತ್ತದೆ. ಮಹಿಳೆಯರ ಜೊತೆ ಹಣಕಾಸಿನ ವ್ಯವಹಾರಗಳು ಖಂಡಿತ ಬೇಡ. ಸಂಗಾತಿಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ವಿದೇಶಗಳಲ್ಲಿ ತಮ್ಮ ಸಂಸ್ಥೆಯನ್ನು ತೆರೆಯಬೇಕೆಂದಿರುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ದೇಹಧಾರ್ಢ್ಯತೆಯನ್ನು ಕಲಿಸುವ ಗುರುಗಳಿಗೆ ಮತ್ತು ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಕೃತಿಕಾ2 3 4 ರೋಹಿಣಿ ಮೃಗಶಿರಾ1 2
ಮಿಥುನ
ವಾರದ ಆರಂಭ ಬಹಳ ಆಹ್ಲಾದಕರವಾಗಿರುತ್ತದೆ. ಮಾತಿನಿಂದ ಜನರನ್ನು ಸೆಳೆಯುವಿರಿ. ಆದಾಯವು ನಿಮ್ಮ ಅಗತ್ಯಗಳ ಖರ್ಚನ್ನು ಪೂರೈಸುವಷ್ಟಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ವಿರೋಧ ಎದುರಾಗಬಹುದು. ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಬೆಳಕು ಕಾಣುತ್ತದೆ. ಮಕ್ಕಳಿಗಾಗಿ ಮತ್ತು ಅವರ ಓದಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಶಸ್ತ್ರಚಿಕಿತ್ಸೆ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಹವ್ಯಾಸಕ್ಕಾಗಿ ಹಣ ಖರ್ಚಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಲಾಭವಾಗುವ ಸಾಧ್ಯತೆಗಳಿವೆ. ಕೃಷಿಗಾಗಿ ಹೆಚ್ಚು ಹಣ ತೊಡಗಿಸಿ ಅದರಲ್ಲಿ ಲಾಭವನ್ನು ಪಡೆಯುವಿರಿ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ಒಳ್ಳೆಯದು. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3
ಕರ್ಕಾಟಕ
ಮನಸ್ಸಿನಲ್ಲಿ ಅಂತಹ ಆನಂದ ಇರುವುದಿಲ್ಲ. ಏನೋ ಕಳೆದುಕೊಂಡ ಭಾವನೆ ಇರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಉದ್ಯೋಗ ಸಿಗುವ ಸಂಭವವಿದೆ. ಲಲಿತ ಕಲೆಯನ್ನು ಅಭ್ಯಾಸ ಮಾಡುತ್ತಿರುವವರಿಗೆ ಆದಾಯ ಹೆಚ್ಚಲಿದೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಸಂಗಾತಿ ಮಾಡುತ್ತಿರುವ ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವನ್ನು ಕಾಣಬಹುದು. ಮಹಿಳೆಯರು ಮಾಡುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಸಿಗಲಿದೆ. ತಂದೆಯು ವ್ಯವಹಾರಕ್ಕೆ ಬಂಡವಾಳ ಕೊಡದಿರಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಪುನರ್ವಸು 4 ಪುಷ್ಯ ಆಶ್ಲೇಷ
ಸಿಂಹ
ನಿಮ್ಮ ವೃತ್ತಿಪರತೆಯು ನಿಮ್ಮಿಂದ ಮರೆಯಾಗಲಿದೆ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳ ಮೇಲೆ ನಿಮ್ಮ ಒಡ ಹುಟ್ಟಿದವರು ಕಣ್ಣಿಟ್ಟಿರುತ್ತಾರೆ. ಹಿರಿಯರ ಕೃಷಿ ಆಸ್ತಿಯಿಂದ ಆದಾಯವಿರುತ್ತದೆ. ವೃತ್ತಿಯಲ್ಲಿ ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಅನಿರೀಕ್ಷಿತವಾಗಿ ಮೂಳೆ ಸಂಬಂಧಿತ ಸಮಸ್ಯೆ ಎದುರಾಗಬಹುದು. ಸಂಗಾತಿಯು ಸಂಸಾರಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗಬಹುದು. ಪ್ರಸೂತಿ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭವಿರುತ್ತದೆ ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ಲಾಭ ಹೆಚ್ಚುತ್ತದೆ. ಅನಿರೀಕ್ಷಿತ ಕಷ್ಟಗಳು ಎದುರಾಗಬಹುದು. ತಂದೆಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1
ಕನ್ಯಾ
ನಿಮ್ಮೊಳಗೆ ಅನೇಕ ಮುಚ್ಚಿಟ್ಟ ಸಂಗತಿಗಳಿರುತ್ತವೆ, ಇವು ನಿಮ್ಮನ್ನು ಆಗಾಗ ಚಿಂತೆಗೀಡು ಮಾಡಬಹುದು. ಆದಾಯವು ಮಂದ ಗತಿಯಲ್ಲಿರುತ್ತದೆ. ಹಾಗೆಯೇ ಖರ್ಚು ಹೆಚ್ಚಾಗಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಆಸ್ತಿ ಬೆಲೆ ನಿರೀಕ್ಷಿಸಿದಂತೆಯೇ ಹೆಚ್ಚಾಗುವ ಸಾಧ್ಯತೆ ಇದೆ. ಕಬ್ಬಿಣ ತಯಾರಿಸುವವರಿಗೆ ಬೇಡಿಕೆ ಹೆಚ್ಚಿರುತ್ತದೆ. ಸಾಂಪ್ರದಾಯಿಕ ಚಿಕಿತ್ಸೆ ನೀಡುವ ವೈದ್ಯರಿಗೆ ಬೇಡಿಕೆ ಸಾಕಷ್ಟು ಹೆಚ್ಚಾಗಲಿದೆ. ಸಂಗಾತಿಯ ವಾಹನದ ರಿಪೇರಿ ಖರ್ಚು ಹೆಚ್ಚಾಗಲಿದೆ. ವೃತ್ತಿಯಲ್ಲಿ ಎಲ್ಲರನ್ನೂ ಅನುಸರಿಸಿಕೊಂಡು ನಡೆಯಬೇಕಾದ ಪರಿಸ್ಥಿತಿ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಲಾಭವಿರುತ್ತದೆ. ಗಣಿಗಾರಿಕೆಯ ಯಂತ್ರಗಳನ್ನು ಮಾರುವವರಿಗೆ ಅನಿರೀಕ್ಷಿತವಾಗಿ ವ್ಯಾಪಾರ ಹೆಚ್ಚಾಗಬಹುದು . ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2
ತುಲಾ
ಸರಿಯಾದ ನಿರ್ಧಾರಗಳಿಲ್ಲದೆ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಧಾರ್ಮಿಕತೆಯ ಪ್ರದರ್ಶನ ಕಾಣಲಿದೆ. ಕೃಷಿ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಲಿದೆ. ಕೆಲವು ರಾಜಕಾರಣಿಗಳಿಗೆ ಅನಿರೀಕ್ಷಿತವಾಗಿ ಸ್ಥಾನ ದೊರಕಬಹುದು. ಕೆಲವರಿಗೆ ಕಿಬ್ಬೊಟ್ಟೆ ಭಾಗದಲ್ಲಿ ನೋವು ಕಾಣಿಸಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರಗಳು ದೊರೆಯುವುದಿಲ್ಲ. ತಂದೆಯಿಂದ ಸಿಗುತ್ತಿದ್ದ ಸಹಕಾರಗಳು ಸ್ವಲ್ಪ ಕಡಿಮೆ ಆಗಲಿದೆ. ವೃತ್ತಿಯಲ್ಲಿ ಅನುಕೂಲವಿದ್ದರೂ ಸ್ವಲ್ಪ ಉಸಿರುಗಟ್ಟುವ ವಾತಾವರಣವಿರುತ್ತದೆ. ವೃತ್ತಿಯಲ್ಲಿ ನಿರೀಕ್ಷಿಸಿದ ಯಶಸ್ಸು ಇರುವುದಿಲ್ಲ. ಕೆಲವು ಹಿರಿಯರ ಸಹಕಾರಗಳು ದೊರೆಯುತ್ತದೆ. ಚಿತ್ತಾ 3 4 ಸ್ವಾತಿ ವಿಶಾಖ 1 2 3
ವೃಶ್ಚಿಕ
ಬಹಳ ಶ್ರಮಪಟ್ಟುಪಟ್ಟು ಕೆಲಸ ಆರಂಭಿಸುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಹಠ ಬಿಡದೆ ಹಿಡಿದ ಕೆಲಸವನ್ನು ಸಾಧಿಸುವಿರಿ. ಸಂಸಾರದಲ್ಲಿ ಕಸಿವಿಸಿಗಳು ಇದ್ದರೂ ಸಂತೋಷವೂ ಇರುತ್ತದೆ. ವಿದೇಶದಲ್ಲಿ ಓದಬೇಕೆನ್ನುತ್ತಿರುವವರಿಗೆ ಈಗ ಅವಕಾಶಗಳು ದೊರೆಯುತ್ತವೆ. ಕೃಷಿಯಿಂದ ನಿರೀಕ್ಷಿತ ಆದಾಯ ಸಿಗುವುದಿಲ್ಲ. ಸಂಗಾತಿಯಿಂದ ಸಹಕಾರ ಮತ್ತು ಸಹಾಯ ದೊರೆಯುತ್ತದೆ. ತಂದೆಯಿಂದ ಸಿಗುತ್ತಿದ್ದ ಸಹಕಾರಗಳು ಸ್ವಲ್ಪ ಕಡಿಮೆ ಆದರೂ ನಿಲ್ಲುವುದಿಲ್ಲ. ವೃತ್ತಿಯಲ್ಲಿ ಅನುಕೂಲವಿದ್ದರೂ ಹಿತಶತ್ರುಗಳು ಹೆಚ್ಚಾಗುವ ಅಪಾಯವಿದೆ. ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಹೆಚ್ಚುತ್ತದೆ. ಸಂಗಾತಿಗಾಗಿ ಹೆಚ್ಚು ಖರ್ಚು ಮಾಡಬೇಕಾಗಬಹುದು. ವಿಶಾಖಾ 4 ಅನುರಾಧ ಜೇಷ್ಠ
ಧನು
ಎಂತಹ ಸ್ಥಿತಿಯಲ್ಲೂ ಸಂತಸದಿಂದಿರಲು ಪ್ರಯತ್ನಿಸುವಿರಿ. ಆದಾಯವು ಕಡಿಮೆ ಇದ್ದರೂ ಅದರಲ್ಲೇ ನಿರ್ವಹಿಸುವಿದಿ. ನಿಮ್ಮ ಕೆಲಸಗಳಿಗೆ ಬಂಧುಗಳಿಂದ ಸಹಕಾರ ಸಿಗುವ ಸಾಧ್ಯತೆಗಳಿವೆ. ನೂತನ ವಾಸ್ತುಶಿಲ್ಪಿಗಳಿಗೆ ಬೇಡಿಕೆ ಬರಲಿದೆ. ಕೃಷಿಯಿಂದ ಆದಾಯವಿರುತ್ತದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು. ಕೆಲವರ ಪ್ರೀತಿ ಪ್ರೇಮಗಳು ಯಶಸ್ಸನ್ನು ಕಾಣುತ್ತವೆ. ತಂದೆಯಿಂದ ವ್ಯಾಪಾರ ವ್ಯವಹಾರಗಳಲ್ಲಿ ಸೂಕ್ತ ಸಹಕಾರಗಳು ದೊರೆಯುತ್ತವೆ. ಕಾರ್ಯ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ನಿಮ್ಮ ನಡವಳಿಕೆಗಳಿಂದ ವ್ಯವಹಾರಗಳಲ್ಲಿ ಲಾಭ ಹೆಚ್ಚಿಸಿಕೊಳ್ಳುವಿರಿ. ತಂದೆಯಿಂದ ಸ್ವಲ್ಪಮಟ್ಟಿನ ಸಹಕಾರಗಳ ದೊರೆಯುತ್ತವೆ. ಮೂಲ ಪೂರ್ವಾಷಾಢ ಉತ್ತರಾಷಾಢ 1
ಮಕರ
ಯಾವುದೇ ವಿಚಾರದಲ್ಲೂ ಸ್ತಿತಪ್ರಜ್ಞರಾಗಿರುವುದು ಒಳ್ಳೆಯದು. ಆದಾಯ ಸ್ವಲ್ಪ ಕಡಿಮೆ ಇರುತ್ತದೆ. ಹೊಸ ಜನಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗುತ್ತದೆ. ಜಮೀನು ಅಭಿವೃದ್ಧಿ ಪಡಿಸುವವರಿಗೆ ಕೆಲಸ ಮತ್ತು ಹೆಚ್ಚು ಆದಾಯವಿರುತ್ತದೆ. ಅಧ್ಯಯನಶೀಲರಿಗೆ ಉತ್ತಮ ಅವಕಾಶವಿರುತ್ತದೆ. ಶೀತ ಸಮಸ್ಯೆ ಕೆಲವರನ್ನು ಭಾದಿಸಬಹುದು. ಸಂಗಾತಿಯಿಂದ ಕೆಲವೊಂದು ಕೆಲಸಗಳಿಗೆ ಸೂಕ್ತ ಸಹಕಾರ ಸಿಗುವುದಿಲ್ಲ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಕೃಷಿಯಿಂದ ಸ್ವಲ್ಪ ಆದಾಯವಿರುತ್ತದೆ. ಸರ್ಕಾರಿ ಮಟ್ಟದಲ್ಲಿ ಅನಿರೀಕ್ಷಿತ ಆದಾಯ ಲಭಿಸುವ ಸಾಧ್ಯತೆ ಇದೆ. ಹಿರಿಯರಿಂದ ಧಾರ್ಮಿಕ ಉಪದೇಶಗಳಾಗಬಹುದು. ವೃತ್ತಿಯಲ್ಲಿ ಹೆಚ್ಚಿನ ಅನುಕೂಲವಿರುತ್ತದೆ. ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2
ಕುಂಭ
ಧರ್ಮ ಕರ್ಮಗಳಿಗೆ ಹಿರಿಯರು ಹೆಚ್ಚು ಬೆಲೆ ಕೊಡಲಿದ್ದಾರೆ. ಸಂಪ್ರದಾಯಗಳನ್ನು ಜನರಿಗೆ ತಿಳಿಸಲಿದ್ದಾರೆ. ಆದಾಯ ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮಲ್ಲಿ ಬಹಳ ಚುರುಕಾದ ನಡವಳಿಕೆ ಇರುತ್ತದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ಸ್ತ್ರೀಯರ ಅಭಿವೃದ್ಧಿ ಬಹಳ ಉತ್ತಮವಾಗಿರುತ್ತದೆ. ಕೆಲವರಿಗೆ ತಾಯಿಯಿಂದ ನಿಷ್ಟೂರದ ಸಾಧ್ಯತೆಗಳಿವೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ಯುವಕರು ತಮ್ಮ ಮಾತಿನಿಂದ ತಾವೇ ಸಂಕಟಕ್ಕೆ ಸಿಲುಕುವರು. ಹೈನುಗಾರಿಕೆ ಮಾಡುವವರಿಗೆ ಆದಾಯವಿರುತ್ತದೆ. ತಂದೆಯಿಂದ ಆರ್ಥಿಕ ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಒಳಜಗಳಗಳಿರುತ್ತವೆ. ಪುಸ್ತಕ ವ್ಯಾಪಾರಿಗಳಿಗೆ ಉಪಾಧ್ಯಾಯರುಗಳಿಗೆ ಆದಾಯ ಹೆಚ್ಚುತ್ತದೆ. ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3
ಮೀನ
ಬಹಳ ದ್ವಂದ್ವ ನಡವಳಿಕೆಗಳಿರುತ್ತವೆ. ಆದಾಯ ತಕ್ಕಮಟ್ಟಿಗೆ ಇರುತ್ತದೆ. ನಿಮ್ಮ ಮಾತಿನಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರು ವಿರೋಧ ವ್ಯಕ್ತಪಡಿಸುವರು. ಹಳೆಯ ಬಂಧುಗಳ ಭೇಟಿಯಿಂದ ಸಂತಸವಾಗುತ್ತದೆ. ರಾಜಕೀಯ ಚಿಂತಕರಿಗೆ ಅಷ್ಟು ಅಭಿವೃದ್ಧಿ ಇರುವುದಿಲ್ಲ. ನೇತ್ರ ಸಂಬಂಧಿತ ದೋಷಗಳು ಕಾಡಬಹುದು. ಸಂಗಾತಿಯಿಂದ ನಿರೀಕ್ಷಿಸಿದ ಧನಸಹಾಯ ಇರುವುದಿಲ್ಲ. ಧರ್ಮಕಾರ್ಯಗಳಿಗೆ ಹಣ ಖರ್ಚಾಗಬಹುದು. ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಅಡೆತಡೆಗಳು ಬರುವ ಸಾಧ್ಯತೆಗಳಿವೆ. ಚಿನ್ನ–ಬೆಳ್ಳಿ ವ್ಯಾಪಾರಿಗಳಿಗೆ ಅಧಿಕ ಲಾಭ. ಹಿರಿಯರ ಆಸ್ತಿ ಸಿಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಸ್ವಂತ ಬಲದಿಂದ ಮತ್ತು ಕಠಿಣ ಶ್ರಮದಿಂದ ಮೇಲೆರಬಹುದು. ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ